/newsfirstlive-kannada/media/post_attachments/wp-content/uploads/2024/10/bigg-boss33.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 11 ತುಂಬಾ ಗ್ರ್ಯಾಂಡ್ ಆಗಿ ಓಪನಿಂಗ್​ ಪಡೆದುಕೊಂಡಿತ್ತು. ಬಿಗ್​ಬಾಸ್​ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. 10 ಸ್ಪರ್ಧಿಗಳು ಸ್ವರ್ಗದಲ್ಲಿ ಇದ್ದರೆ, ಉಳಿದ 7 ಜನರು ನರಕದಲ್ಲಿ ಕಾಲ ಕಳೆಯುತ್ತಿದ್ದರು.
ಇದನ್ನೂ ಓದಿ: ಹಾವು ಕೊಂ*ದ 24 ಗಂಟೆಯಲ್ಲೇ ಗುಡಿ ನಿರ್ಮಾಣ.. ಆದ್ರೂ ಮಕ್ಕಳಿಗೆ ಪದೇ ಪದೆ ಸರ್ಪ ಕಾಣುತ್ತಿರುವುದು ಏಕೆ?
ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಮೊದಲ ವಾರವೇ ಸ್ಪರ್ಧಿಗಳ ನಡುವೆ ಜಗಳ ಆಗಿತ್ತು. ಪದೇ ಪದೇ ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡುತ್ತಿದ್ದರು. ಅದಕ್ಕೆ ಬಿಗ್​ಬಾಸ್​ ಕೂಡ ಶಿಕ್ಷೆ ನೀಡುತ್ತಿದ್ದರು. ಹೀಗೆ ಬಿಗ್​ಬಾಸ್​ ಮೊದಲ ದಿನದಿಂದಲೇ ಲಾಯರ್​ ಜಗದೀಶ್​ ಅವರು ಸಖತ್​ ಸೌಂಡ್ ಮಾಡುತ್ತಿದ್ದರು. ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡುತ್ತಾ ಸುದ್ದಿಯಲ್ಲಿ ಇರುತ್ತಿದ್ದರು.
ಹಂಸ, ಮಾನಸ, ಭವ್ಯಾ ಗೌಡ, ಉಗ್ರಂ ಮಂಜು, ಗೋಲ್ಡ್​ ಸುರೇಶ್​ ಹೀಗೆ ಮನೆಯ ಎಲ್ಲರ ಸದಸ್ಯರ ಜೊತೆಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇನ್ನು ನಿನ್ನೆ ನಡೆದ ಎಪಿಸೋಡ್​ನಲ್ಲಿ ಮನೆಯ ಎಲ್ಲರ ಜೊತೆ ಜಗದೀಶ್​ ಅವರು ಗಲಾಟೆ ಮಾಡಿಕೊಂಡಿದ್ದಾರೆ. ಜೊತೆಗೆ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.
/newsfirstlive-kannada/media/post_attachments/wp-content/uploads/2024/10/bigg-boss32.jpg)
ಇದೇ ಗಲಾಟೆಯ ಮಧ್ಯೆ ನಟ ರಂಜಿತ್​ ಲಾಯರ್​ ಜಗದೀಶ್​ ಅವರನ್ನು ಜೋರಾಗಿ ತಳ್ಳಿದ್ದರು. ಹೀಗಾಗಿ ಬಿಗ್​ಬಾಸ್ ನಿರ್ಧಾರದ ಮೇಲೆ ​ಲಾಯರ್​ ಜಗದೀಶ್ ಅವರನ್ನು​ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಳಿಕ ಎಲ್ಲರನ್ನು ಮತ್ತೆ ಕರೆದ ಬಿಗ್​ಬಾಸ್​ ನಟ ರಂಜಿತ್ ಅವರನ್ನು ಕೂಡ ಆಚೆ ಕಳುಹಿಸಿದ್ದಾರೆ. ಆಗ ಮನೆಯ ಉಳಿದ ಸದಸ್ಯರು ಕೂಡ ಎಷ್ಟೇ ಕೇಳಿಕೊಂಡರು ಬಿಗ್​ಬಾಸ್​ ಕಡೆಯಿಂದ ಏನೂ ಪ್ರತಿಕ್ರಿಯೆ ಸಿಕ್ಕಿಲ್ಲ.
ಇದನ್ನೂ ಓದಿ:BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್!
ಇನ್ನೂ, ಈ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮೆನಯಿಂದ ಆಚೆ ಬಂದಿದ್ದಾರೆ. ಹೀಗಾಗಿ ಭಾನುವಾರದ ಎಪಿಸೋಡ್​ನಲ್ಲಿ ನಾಮಿನೇಷನ್ ಪ್ರಕ್ರಿಯೆ ಇರುತ್ತಾ ಅಥವಾ ಇಲ್ಲವಾ ಎಂಬ ಗೊಂದಲ ಮನೆಮಾಡಿದೆ. ಇನ್ನೂ ಭಾನುವಾರದ ಎಪಿಸೋಡ್​ನಲ್ಲಿ ಓರ್ವ ಸ್ಪರ್ಧಿ ನಾಮಿನೇಟ್​ ಆದ್ರೂ ಆಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us