/newsfirstlive-kannada/media/post_attachments/wp-content/uploads/2025/03/trivikram2.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲವು ಸ್ಪರ್ಧಿಗಳು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರೆ, ಇನ್ನೂ ಕೆಲವರು ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ:ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ಅದ್ಧೂರಿ ನಾಮಕರಣ ಶಾಸ್ತ್ರ; ಇಲ್ಲಿವೆ ಟಾಪ್ 10 ಫೋಟೋಸ್!
ಸದ್ಯ ಬಿಗ್ಬಾಸ್ ಸೀಸನ್ 11ರ ರನ್ನರ್ ಪಟ್ಟ ಗಿಟ್ಟಿಸಿಕೊಂಡಿರೋ ತ್ರಿವಿಕ್ರಮ್ ಮುದ್ದು ಸೊಸೆ ಸೀರಿಯಲ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಮಧ್ಯೆಯೂ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಭಿಮಾನಿಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ನಟ ತ್ರಿವಿಕ್ರಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟ ತ್ರಿವಿಕ್ರಮ್ ಅವರನ್ನು ನೋಡುತ್ತಿದ್ದಂತೆ ಕ್ಯೂಟ್ ಕ್ಯೂಟ್ ಹುಡುಗಿಯರು ಅವರನ್ನು ಮುತ್ತಿಕೊಂಡಿದ್ದಾರೆ.
ಹೌದು, ನಟ ತ್ರಿವಿಕ್ರಮ್ ಖಾಸಗಿ ಕಾರ್ಯಕ್ರಮಕ್ಕೆ ಒಂದಕ್ಕೆ ಹೋಗಿದ್ದರು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತ್ರಿವಿಕ್ರಮ್ ಅವರನ್ನು ನೋಡಲು ಸಾಕಷ್ಟು ಹುಡುಗಿಯರು ಬಂದಿದ್ದರು. ಆಗ ತ್ರಿವಿಕ್ರಮ್ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ