ಫಸ್ಟ್ ಪ್ರೋಮೋದಲ್ಲೇ ಮಾಸ್​ ಡೈಲಾಗ್ ಹೊಡೆದ​ ​ ತ್ರಿವಿಕ್ರಮ್.. ಬೆಂಕಿ ನಟನೆಗೆ ಫ್ಯಾನ್ಸ್​ ಫುಲ್​ ಶಾಕ್​! VIDEO​

author-image
Veena Gangani
Updated On
ಫಸ್ಟ್ ಪ್ರೋಮೋದಲ್ಲೇ ಮಾಸ್​ ಡೈಲಾಗ್ ಹೊಡೆದ​ ​ ತ್ರಿವಿಕ್ರಮ್.. ಬೆಂಕಿ ನಟನೆಗೆ ಫ್ಯಾನ್ಸ್​ ಫುಲ್​ ಶಾಕ್​! VIDEO​
Advertisment
  • ರಿಲೀಸ್​ ಆಗಿರೋ ಹೊಚ್ಚ ಹೊಸ ಪ್ರೋಮೋದಲ್ಲಿ ನಟ ತ್ರಿವಿಕ್ರಮ್​ದ್ದೇ ಹವಾ
  • ನಟಿ ಮೇಘಾ ಶೆಟ್ಟಿ ನಿರ್ಮಾಣ ಮೂಡಿ ಬರುತ್ತಿರೋ ಮುದ್ದು ಸೊಸೆ ಸೀರಿಯಲ್
  • ಬಿಗ್​ಬಾಸ್​ ಸೀಸನ್ 11ರ ರನ್ನರ್ ಆಗಿದ್ದ ಕನ್ನಡ ಕಿರುತೆರೆಯ ನಟ ತ್ರಿವಿಕ್ರಮ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ​ ರನ್ನರ್​ ಅಪ್​ ತ್ರಿವಿಕ್ರಮ್​ ಹೊಸ ಧಾರಾವಾಹಿಗೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ ಎಂಬುವುದು ಎಲ್ಲರಿಗೂ ಇದೆ. ಆದ್ರೆ ಧಾರಾವಾಹಿ ಯಾವಾಗ ಬರುತ್ತೆ? ಶೂಟಿಂಗ್​ ಶುರುವಾಯ್ತಾ ಇಲ್ವಾ? ಅಂತೆಲ್ಲಾ ಅಭಿಮಾನಿಗಳಿಗೆ ಒಂದು ಡೌಟ್​ ಇತ್ತು. ಈಗ ಇದಕ್ಕೆ ಉತ್ತರ ಕೊಟ್ಟಿದ್ದಾರೆ ತ್ರಿವಿಕ್ರಮ್​.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!

publive-image

ಹೌದು, ಕಲರ್ಸ್​ ಕನ್ನಡದಲ್ಲಿ ಶೀಘ್ರದಲ್ಲೇ ತೆರೆಗೆ ಬರಲಿದೆ ಮುದ್ದು ಸೊಸೆ. ಈ ಧಾರಾವಾಹಿಗೆ ನಾಯಕಿಯಾಗಿ ಪ್ರತಿಮಾ ಅಭಿನಯಿಸುತ್ತಿದ್ದಾರೆ. ಇತ್ತ ನಾಯಕನಾಗಿ ತ್ರಿವಿಕ್ರಮ್​ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಪ್ರೋಮೋಗಳು ಸದ್ದು ಮಾಡುತ್ತಿವೆ. ಜೊತೆಗೆ ತ್ರಿವಿಕ್ರಮ್​ ಲುಕ್​ಗೂ ಉತ್ತಮ ರೆಸ್ಪಾನ್ಸ್​ ಸಿಗ್ತಿದೆ. ಒಂದಿಷ್ಟು ಜನರು ಪಾತ್ರಕ್ಕೆ ಇನ್ನು ಏನೋ ಬೇಕು. ಸೀರಿಯಲ್​ ಬಂದ್ಮೇಲೆ ನೋಡೋಣ ಅಂತಿದ್ರು. ಈ ನಡುವೆ ಧಾರಾವಾಹಿಯ ಶೂಟಿಂಗ್​ ಆರಂಭವಾಗಿದ್ದು, ಎರಡನೇ ಪ್ರೋಮೋ ಕೂಡ ರಿಲೀಸ್​ ಆಗಿದೆ.

publive-image

ಸ್ವತಹ ತ್ರಿವಿಕ್ರಮ್​ ಸೀರಿಯಲ್​ ಪೋಸ್ಟರ್​ಗೆ ಫೋಟೋ ಶೂಟ್​ ಮಾಡಿಸ್ತಿರೋ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಮೊದಲ ಪ್ರೊಮೋದಲ್ಲಿ ತ್ರಿವಿಕ್ರಮ್​ಗೆ ಡೈಲಾಗ್​ ಇರಲಿಲ್ಲ. ಈಗ ರಿಲೀಸ್​ ಆಗಿರೋ ಹೊಸ ಪ್ರೋಮೋದಲ್ಲಿ ತ್ರಿವಿಕ್ರಮ್​ದ್ದೇ ಹವಾ. ಇದನ್ನೂ ನೋಡಿದ ಅಭಿಮಾನಿಗಳು ಕೂಡ ಖುಷ್​ ಆಗಿದ್ದಾರೆ.

publive-image

ಅಂದ್ಹಾಗೆ, ಈ ಮೊದಲೇ ನಾವು ಮಾಹಿತಿ ನೀಡಿದಂತೆ ತಮಿಳು ಧಾರಾವಾಹಿಯ ರಿಮೇಕ್​ ಸ್ಟೋರಿ ಮುದ್ದು ಸೊಸೆ. ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಮುದ್ದು ಸೊಸೆ ಧಾರಾವಾಹಿನ್ನ ನಿರ್ಮಾಣ ಮಾಡ್ತಿದ್ದಾರೆ. ಸ್ಕೂಲ್ ಬೆಂಚ್‍‍ನಿಂದ ಹಸೆಮಣೆಗೆ ಬರೋ ಮುದ್ದು ಸೊಸೆಯೂ ಶೀಘ್ರದಲ್ಲೇ ವೀಕ್ಷಕರ ಮನೆಗೆ ಕಾಲಿಡ್ತಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment