/newsfirstlive-kannada/media/post_attachments/wp-content/uploads/2025/01/BHAVYA-4.jpg)
ಬಿಗ್ಬಾಸ್ನಲ್ಲಿ ಒಂದು ಲವ್ ಕಹಾನಿ ಕೂಡ ನಡೆಯುತ್ತಿದೆ ಎಂದು ಇಷ್ಟು ದಿನ ಅಂದುಕೊಳ್ಳಲಾಗಿತ್ತು. ಆ ಕ್ಯೂಟ್ ಜೋಡಿಗಳು ಯಾರು ಎಂಬುದು ಪ್ರೇಕ್ಷಕರು ಊಹಿಸಿದ್ದರು. ಮನೆಯಲ್ಲಿ ಇರುವಾಗ ಕಿಚ್ಚನ ಮುಂದೆ ಒಬ್ಬರಿಗೊಬ್ಬರು ಹೊಗಳಿಕೊಂಡಿದ್ದು ನೋಡಿದ್ದಾಗಿದೆ. ಆದರೆ ಈಗ ಬಿಗ್ಬಾಸ್ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ವರಸೆ ಚೇಂಜ್ ಆಗಿದೆ. ಆ ತರದೂ ಏನು ಇಲ್ಲ ಎಂದು ಹೇಳಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ ಎಪಿಸೋಡ್ನಲ್ಲಿ ಮತ್ತೆ ಪ್ರೇಮ ಕಹಾನಿ ಸದ್ದು ಮಾಡಿದಂತೆ ಕಾಣುತ್ತಿದೆ. ತ್ರಿವಿಕ್ರಮ್ ಅವರು ಪ್ರಪೋಸ್ ಮಾಡಿದ್ದಾರೆ ಎಂದು ಮನೆಯ ಮಂದಿಯೆಲ್ಲ ಭಾವಿಸಿದ್ದರು. ಆದರೆ ಈಗ ಅದೆಲ್ಲಾ ಏನೂ ಇಲ್ಲ ಎಂದು ನಾಚುತ್ತಲೇ ಕಿಚ್ಚನ ಮುಂದೆ ಭವ್ಯ ಹಾಗೂ ತ್ರಿವಿಕ್ರಮ್ ಹೇಳಿದ್ದಾರೆ. ಆದರೆ ಅವರ ಮಧ್ಯೆ ನಿಜವಾಗಲೂ ಏನಿದೆ ಎನ್ನುವುದನ್ನೂ ಇಬ್ಬರೂ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: BIGG BOSS; ಇವತ್ತು ಒಬ್ಬರು, ನಾಳೆ ಒಬ್ಬರು ಮನೆ ಖಾಲಿ ಮಾಡ್ತಾರಾ.. ಎಲಿಮಿನೇಷನ್ ಹೇಗೆ?
ಕಿಚ್ಚನ ಸುದೀಪ ಅವರ ಮಾತಿಗೆ ಉತ್ತರಿಸುವಾಗ ಭವ್ಯ ಅವರು, ಆ ಥರ ಏನೂ ಕನೆಕ್ಷನ್ ಇಲ್ಲ ಸರ್ ಎಂದು ತ್ರಿವಿಕ್ರಮ್ ಪಕ್ಕ ಕುಳಿತೇ ಈ ಮಾತು ಹೇಳಿದ್ದಾರೆ. ಆದರೆ ಈ ಮಾತಿನ ಅರ್ಥ ಏನು ಎಂಬುದು ಅರ್ಥ ಆಗಿಲ್ಲ. ಏಕೆಂದರೆ ಬಿಗ್ಬಾಸ್ ಮುಗಿಯುತ್ತ ಬರುತ್ತಿದ್ದಂತೆ, ಹೊರ ಬಂದ ಮೇಲೆ ಇಬ್ಬರು ದೂರ ದೂರ ಆಗ್ತಾರಾ ಎನ್ನುವ ಪ್ರಶ್ನೆಗಳು ಪ್ರೇಕ್ಷಕರನ್ನ ಕಾಡುತ್ತಿವೆ.
ಕಿಚ್ಚನ ಪಂಚಾಯತಿಯ ಶನಿವಾರದ ಎಪಿಸೋಡ್ನಲ್ಲಿ ಗೌತಮಿ ಮನೆಯಿಂದ ಹೊರ ಬಂದಿದ್ದಾರೆ. 100ಕ್ಕೂ ಅಧಿಕ ದಿನ ಮನೆಯಲ್ಲಿ ಆಡಿದ ಅವರು ಸ್ಪರ್ಧಿಗಳ ಜೊತೆ ಗೆಲುವಿಗಾಗಿ ಸಖತ್ ಪೈಪೋಟಿ ನಡೆಸಿದರು. ಅದು ಸಫಲವಾಗಲಿಲ್ಲ. ಅಂತಿಮವಾಗಿ ಕಿಚ್ಚ ಸುದೀಪ ಮುಂದೆ ಮಾತನಾಡಿದ ಗೌತಮಿ, ಎಲ್ಲಿ, ಹೇಗೆ ತಪ್ಪುಗಳು ಆದವು ಎನ್ನುವುದ ಬಗ್ಗೆ ಹೇಳಿ ಮನೆಯಿಂದ ಹೊರಕ್ಕೆ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ