/newsfirstlive-kannada/media/post_attachments/wp-content/uploads/2025/07/shwtha.jpg)
ಬಿಗ್​ ಬಾಸ್​ ಸೀಸನ್​ 12 ಪ್ರಾರಂಭಕ್ಕೆ ಕೆಲವೇ ತಿಂಗಳು ಬಾಕಿಯಿದೆ. ಕಿಚ್ಚ ಸುದೀಪ್​ ಎಂಟ್ರಿಗೆ ವೀಕ್ಷಕರು ಕಾಯ್ತಿದ್ದಾರೆ. ಇನ್ನು, ಪ್ರೊಮೋ ಕೂಡೂ ರಿಲೀಸ್​ ಆಗಿಲ್ಲ. ಈ ನಡುವೆ ಸ್ಪರ್ಧಿಗಳು ಯಾರೆಲ್ಲಾ ಈ ಬಾರಿಯ ಬಿಗ್​ಬಾಸ್​ ಸೀಸನ್ 12ಕ್ಕೆ ಬರಬಹುದು ಎಂಬುವುದರ ಬಗ್ಗೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ವಕೀಲರ ಬದಲಾವಣೆ.. ನಟ ದರ್ಶನ್​​ಗೆ ಢವಢವ..!
ಸದ್ಯ ನಟಿ ಶ್ವೇತಾ ಪ್ರಸಾದ್​ ಮೇಲೆ ಕೂತುಹಲದ ಕಣ್ಣು ನೆಟ್ಟಿದೆ. ಮ್ಯಾಕ್ಸ್​ ಸಿನಿಮಾದಲ್ಲಿ ಶ್ವೇತಾ ಪ್ರಸಾದ್​ ವಿಭಿನ್ನ ಪಾತ್ರ ನಿರ್ವಹಿಸಿದ್ರು. ರಾಧಾ ರಮಣದ ರಾಧಾ ಮಿಸ್​ ಅಂತಲೇ ಜನಪ್ರಿಯತೆ ಪಡೆದಿರೋ ನಟಿ ಇವ್ರು. ಖಾಸಗಿ ವಾಹಿನಿಯೊಂದು ಬಿಗ್​ಬಾಸ್​ಗೆ ಶ್ವೇತಾ ಬರ್ತಿರಾ? ನಿಮಗೆ ಕರೆ ಬಂದಿದೆ ಮಾಹಿತಿ ಸಿಕ್ಕಿದೆ ಎಂದು ಕೇಳ್ತಾರೆ.
ಆಗ ನಟಿ ನನಗೆ ಹಲವು ಸೀಸನ್​ಗಳಿಗೆ ಕಾಲ್​ ಬರ್ತಿದೆ. ಆದ್ರೇ ನಾನೇ ಹೋಗೋ ಮನಸ್ಸು ಮಾಡಿರಲಿಲ್ಲ. ಕಾರಣಾಂತರಗಳಿಂದ ಹಿಂದೆ ಸರಿದಿದ್ದೆ. ಈ ಬಾರಿಯೋ ಕರೆ ಬಂದಿದೆ. ಖಂಡಿತ ಹೋದ್ರು ಹೋಗ್ಬಹುದು. ಆ ಕೂತುಹಲ ಹಾಗೆ ಇರಲಿ ಎಂದಿದ್ದಾರೆ. ನಟಿ ಬಿಗ್​ಬಾಸ್​ ಬಗ್ಗೆ ಮಾತಾಡಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದ್ದು, ರಾಧಾ ರಮಣದ ರಾಧಾ ಮಿಸ್​ ಬಿಗ್​ ಬಾಸ್​ಗೆ ಎಂಟ್ರಿ ಕೊಡೋದು ಪಕ್ಕಾ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ