ಮತ್ತಷ್ಟು ಸ್ಲಿಮ್‌ ಆದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಧನುಶ್ರೀ; ಸೀಕ್ರೆಟ್ ಏನು ಗೊತ್ತಾ?

author-image
Veena Gangani
Updated On
ಮತ್ತಷ್ಟು ಸ್ಲಿಮ್‌ ಆದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಧನುಶ್ರೀ; ಸೀಕ್ರೆಟ್ ಏನು ಗೊತ್ತಾ?
Advertisment
  • ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಿಯಾಗಿ 1 ವಾರದಲ್ಲಿ ಆಚೆ ಬಂದಿದ್ದ ಸ್ಟಾರ್
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ವಿಡಿಯೋ
  • ಇನ್​ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್​ ಆಗಿದ್ದ ಬಿಗ್​ಬಾಸ್ ಧನುಶ್ರೀ

ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಿ ಟಿಕ್ ಟಾಕ್ ಸ್ಟಾರ್​ ಆಗಿ ಖ್ಯಾತಿ ಪಡೆದುಕೊಂಡವರು ಧನುಶ್ರೀ. ಜ್ಯೂನಿಯರ್ ನಿತ್ಯಾ ಮೆನನ್ ಅಂತಲೇ ಧನುಶ್ರೀ ಅವರನ್ನ ಕರೆಯುತ್ತಾರೆ. ಟಿಕ್ ಟಾಕ್, ಇನ್​ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್​ ಆಗಿದ್ದ ಧನುಶ್ರೀ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ.

ಇದನ್ನೂ ಓದಿ:‘ಭೂತದ ವೇಷದಲ್ಲೂ ಬ್ಯೂಟಿಫುಲ್​ ಆಗಿ ಕಾಣೋ ಏಕೈಕ ಚೆಲುವೆ’- ದೀಪಿಕಾ ದಾಸ್‌ ಹೊಸ ಅವತಾರ; ಏನಿದರ ವಿಶೇಷ?

publive-image

ಹಾಸನದ ಮೂಲದ ಧನುಶ್ರೀ ಅವರು ಸದ್ಯ ಯ್ಯೂಟೂಬ್​ ಚಾನೆಲ್​ನಲ್ಲಿ ಮಿಂಚುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮೂಲಕ ಸಿಕ್ಕಾಪಟ್ಟೆ ಸೌಂಡ್​ ಮಾಡುತ್ತಿದ್ದಾರೆ. ಇದೀಗ ಧನುಶ್ರೀ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಆ ವಿಡಿಯೋದಲ್ಲಿ ನಟಿ ತಮ್ಮ ದೇಹದ ತೂಕವನ್ನು ಹಂತ ಹಂತವಾಗಿ ಇಳಿಸಿಕೊಂಡಿದ್ದು ಹೇಗೆ ಅಂತ ತಿಳಿಸಿದ್ದಾರೆ. ಅಲ್ಲದೇ ಫಿಟ್‌ನೆಸ್ ಕಡೆಗೆ ಧನುಶ್ರೀ ಸಿಕ್ಕಾಪಟ್ಟೆ ಗಮನ ನೀಡುತ್ತಾರೆ. ಈ ಹಿಂದೆ ಜಿಮ್​ನಲ್ಲಿ ವರ್ಕ್ ಔಟ್​ ಮಾಡುತ್ತಿರೋ ವಿಡಿಯೋಗಳು ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ, ಚರ್ಮ, ಕೂದಲು, ಸೌಂದರ್ಯದ ಬಗ್ಗೆ ಟಿಪ್ಸ್‌ಗಳನ್ನು ನೀಡುತ್ತಿರುತ್ತಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment