BiggBoss Finale! ಬಿಗ್​ಬಾಸ್​ ಮೊದಲ ಸೀಸನ್​​ನಿಂದ ಇಲ್ಲಿವರೆಗೆ ಕಪ್ ಗೆದ್ದಿರೋರ ಲಿಸ್ಟ್​

author-image
Bheemappa
Updated On
BiggBoss Finale! ಬಿಗ್​ಬಾಸ್​ ಮೊದಲ ಸೀಸನ್​​ನಿಂದ ಇಲ್ಲಿವರೆಗೆ ಕಪ್ ಗೆದ್ದಿರೋರ ಲಿಸ್ಟ್​
Advertisment
  • ಒಳ್ಳೆ ಹುಡ್ಗ ಪ್ರಥಮ್ ವಿಜಯಮಾಲೆ ಧರಿಸಿದ ಶೋ ಇದು
  • ಚಂದನ್ ಶೆಟ್ಟಿ ಗೆಲುವು ಸಾಧಿಸಿದ ಸೀಸನ್ ಯಾವುದು..?
  • 2025ರ ಬಿಗ್​ಬಾಸ್ ಟ್ರೋಫಿ ಯಾರ ಮುಡಿಗೆ ಸೇರುತ್ತದೆ?

ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್​ಬಾಸ್ ಶೋ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದೆ. ಸೀಸನ್ 11ರ ಮನೆಯಲ್ಲಿ ವೈಲ್ಡ್​​ಕಾರ್ಡ್​ ಎಂಟ್ರಿ ಸೇರಿ ಒಟ್ಟು 20 ಸ್ಪರ್ಧಿಗಳು ಮನಮೋಹಕವಾಗಿ ಆಡಿದ್ದಾರೆ. ಇದರಲ್ಲಿ ಈಗ ಕೇವಲ 6 ಸ್ಪರ್ಧಿಗಳು ಹನುಮಂತು, ಭವ್ಯ, ತ್ರಿವಿಕ್ರಮ್, ಮಂಜು, ಮೋಕ್ಷಿತಾ ಹಾಗೂ ರಜತ್ ಕಿಶನ್ ಮಾತ್ರ ಉಳಿದುಕೊಂಡಿದ್ದಾರೆ. ಇದರಲ್ಲಿ ಒಬ್ಬರು ಮಾತ್ರ ಟ್ರೋಫಿಗೆ ಮುತ್ತಿಕ್ಕಲ್ಲಿದ್ದಾರೆ. ಗ್ರ್ಯಾಂಡ್ ಫಿನಾಲೆ ನಡೆಯುತ್ತಿರುವ ಹೊತ್ತಿಗೆ ಇಲ್ಲಿವರೆಗೆ ಯಾರು ಯಾರು ಬಿಗ್​ಬಾಸ್ ಕಪ್​ ಗೆದ್ದಿದ್ದರು ಎಂದು ನೋಡೋಣ.

ಮೊದಲ ಬಿಗ್​ಬಾಸ್​ ಶೋನಿಂದಲೂ ಇಲ್ಲಿವರೆಗೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಸ್ಪರ್ಧಿಗಳ ಜೊತೆಗೆ ಕಿಚ್ಚ ಸುದೀಪ್ ಅವರ ವರ್ಚಸ್ಸು ಈ ಶೋನಲ್ಲಿ ಹೆಚ್ಚಿದೆ ಎನ್ನಬಹುದು. ಇನ್ನು ಸುದೀಪ್ ಅವರು ಇದೇ ನನ್ನ ಕೊನೆಯ ಬಿಗ್​ಬಾಸ್ ಸೀಸನ್ ಎಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

publive-image

2013 ಮೊದಲ ಬಿಗ್​ಬಾಸ್​ ಸೀಸನ್; 2013ರ ಮಾರ್ಚ್​ನಲ್ಲಿ ಲಾಂಚ್ ಆಗಿದ್ದ ಈ ಶೋ 98 ದಿನಗಳ ಕಾಲ ಯಶಸ್ವಿಯಾಗಿ ನಡೆದಿತ್ತು. ಗ್ರ್ಯಾಂಡ್​ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ನಟ ವಿಜಯ್ ರಾಘವೇಂದ್ರ ಅವರ ಕೈ ಮೇಲೆ ಎತ್ತುವ ಮೂಲಕ ವಿನ್ನರ್ ಎಂದು ಘೋಷಿಸಲಾಯಿತು.

2014ರ ಬಿಗ್​ಬಾಸ್​ ಸೀಸನ್- 2; ಈ 2ನೇ ಶೋನಲ್ಲಿ 15 ಸ್ಪರ್ಧಿಗಳ ಪೈಕಿ ನಟ ಸೃಜನ್ ಲೋಕೆಶ್ ಹಾಗೂ ಆ್ಯಂಕರ್ ಅಕುಲ್ ಬಾಲಾಜಿ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು. ಫಿನಾಲೆಯಲ್ಲಿ ಕೊನೆಗೆ ಅಕುಲ್ ಬಾಲಾಜಿ ವಿನ್ನರ್ ಆದರು.

2015-16 ಬಿಗ್​ಬಾಸ್​ ಸೀಸನ್- 3; ಸ್ಯಾಂಡಲ್​ವುಡ್​ನ ನಟಿ ಶ್ರುತಿ ಅವರು ಈ ಬಿಗ್​ಬಾಸ್​ನಲ್ಲಿ ಸ್ಪರ್ಧೆ ಮಾಡಿದ್ದರು. ಇವರ ಜೊತೆ ಇನ್ನು 17 ಸ್ಪರ್ಧಿಗಳು ಇದ್ದರು. 98 ದಿನಗಳವರೆಗೆ ನಡೆದ ಈ ಶೋನಲ್ಲಿ ಚಂದನ್ ಕುಮಾರ್ ಅವರನ್ನು ಹಿಂದಿಕ್ಕಿ ನಟಿ ಶ್ರುತಿ ವಿಜಯಮಾಲೆ ಧರಿಸಿದ್ದರು.

2016-17ರ ಬಿಗ್​ಬಾಸ್​ ಸೀಸನ್- 4; ಒಳ್ಳೆ ಹುಡ್ಗ ಪ್ರಥಮ್ ಅವರು 4ನೇ ಬಿಗ್​ಬಾಸ್​ ಟ್ರೋಫಿಗೆ ಮುತ್ತಿಕ್ಕಿದರು. ಈ ಸೀಸನ್​ನಲ್ಲಿ ನೂರು ದಿನಗಳಿಗೂ ಅಧಿಕವಾಗಿ ಶೋ ಪ್ರಸಾರ ಮಾಡಲಾಗಿತ್ತು. ಒಳ್ಳೆ ಹುಡ್ಗ ಪ್ರಥಮ್ ಅತ್ಯಂತ ಹೆಚ್ಚು ಪ್ರಚಾರ ಪಡೆಯುವ ಮೂಲಕ ವಿನ್ನರ್ ಆದರೆ, ಕಿರಿಕ್ ಕೀರ್ತಿ ಸೆಕೆಂಡ್ ಸ್ಥಾನ ಪಡೆದುಕೊಂಡಿದ್ದರು.

2017-18ರ ಬಿಗ್​ಬಾಸ್​ ಸೀಸನ್- 5; ಈ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸಖತ್ ಫೇಮಸ್ ಆಗಿದ್ದರು. ಬಿಗ್​ಬಾಸ್​ನಲ್ಲೇ ಪ್ರೀತಿಯಾಗಿ ಬಳಿಕ ಮದುವೆ ಕೂಡ ಆಗಿದ್ದರು. ಮದುವೆಯ ಕೆಲ ವರ್ಷಗಳ ನಂತರ ಇಬ್ಬರು ಬೇರೆ ಬೇರೆಯಾಗಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಬಿಗ್​ಬಾಸ್​ ಸೀಸನ್- 5ರಲ್ಲಿ ಅಭೂತಪೂರ್ವ ಗೆಲುವು ಪಡೆದಿದ್ದರು.

2018- 19ರ ಬಿಗ್​ಬಾಸ್​ ಸೀಸನ್- 6; ಎಂಎಸ್​ಸಿ ಪದವೀಧರ ಹಾಗೂ ಕೃಷಿಕನಾದ ಶಶಿಕುಮಾರ್ ಅವರು ಸೀಸನ್​- 6ರ ಬಿಗ್​ಬಾಸ್ ಟ್ರೋಫಿಗೆ ಮುತ್ತಿಕ್ಕಿದ್ದರು. ಈ ಶೋನಲ್ಲಿ ನವೀನ್ ಸಜ್ಜು ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.

2019-2020 ಬಿಗ್ ಬಾಸ್ ಸೀಸನ್- 7: ಕಾಮಿಡಿ ಸೂಪರ್ ಸ್ಟಾರ್ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ನಡುವೆ ಸ್ಪರ್ಧೆ ಅಭಿಮಾನಿಗಳನ್ನ ಕೆರಳಿಸಿತ್ತು. ಈ ಶೋ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಿತ್ತು ಎನ್ನಬಹುದು. ಕುರಿ ಪ್ರತಾಪ್​ರನ್ನ ಹಿಂದಿಕ್ಕಿ ಶೈನ್ ಶೆಟ್ಟಿ ಟ್ರೋಫಿ ತಮ್ಮದಾಗಿಸಿಕೊಂಡಿದ್ದರು.

2021 ಬಿಗ್ ಬಾಸ್ ಸೀಸನ್- 8: ಕನ್ನಡದ ಕಿರುತೆರೆಯ ನಟ ಮಂಜು ಪಾವಗಡ ಅವರು ಸೀಸನ್ 8ರ ವಿನ್ನರ್ ಆಗಿದ್ದರು. ಬೈಕರ್ ಆಗಿದ್ದ ಅರವಿಂದ್ ಕೆಪಿ ಸೆಕೆಂಡ್ ಸ್ಥಾನ ಪಡೆದುಕೊಂಡಿದ್ದರು. ಆವಾಗ ಕೊರೊನಾ ಇದ್ದ ಕಾರಣ ಶೋ ನಿಲ್ಲಿಸಿ ಮತ್ತೆ ಆರಂಭಿಸಲಾಗಿತ್ತು.

ಇದನ್ನೂ ಓದಿ: HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ.. ಆಯ್ಕೆ ಆದವರಿಗೆ ಆರಂಭದಲ್ಲೇ 30,000 ರೂ ಸಂಬಳ

publive-image

2022 ಬಿಗ್ ಬಾಸ್ ಸೀಸನ್- 9: ಸೆಪ್ಟೆಂಬರ್​ನಿಂದ ಆರಂಭವಾದ ಈ ಶೋ ಡಿಸೆಂಬರ್​ 31ರವರೆಗೆ ಅದ್ಧೂರಿಯಾಗಿ ನಡೆಯಿತು. ಸೀಸನ್​ 9 ರಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆದರೆ, ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು.

2023- 24 ಬಿಗ್ ಬಾಸ್ ಸೀಸನ್- 10: ಕೊರೊನಾ ಸಂಪೂರ್ಣ ನಾಶವಾದ ಬಳಿಕ ಬಿಗ್​ಬಾಸ್ ಶೋ ಮತ್ತೆ ಪೂರ್ಣ ಪ್ರಮಾಣದಲ್ಲಿ ನಡೆಸಲಾಯಿತು. ಕಾರ್ತಿಕ್ ಮಹೇಶ್ ಎಲ್ಲ ಸ್ಪರ್ಧಿಗಳನ್ನ ಹಿಂದಿಕ್ಕಿ ಗೆಲುವು ಪಡೆದಿದ್ದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2024-25 ಬಿಗ್ ಬಾಸ್ ಸೀಸನ್- 11: ಸೀಸನ್ 11ರ ಮನೆಯಲ್ಲಿ ವೈಲ್ಡ್​​ಕಾರ್ಡ್​ ಎಂಟ್ರಿ ಸೇರಿ ಒಟ್ಟು 20 ಸ್ಪರ್ಧಿಗಳು ಮನಮೋಹಕವಾಗಿ ಆಡಿದ್ದಾರೆ. ಇದರಲ್ಲಿ ಈಗ ಕೇವಲ 6 ಸ್ಪರ್ಧಿಗಳು ಹನುಮಂತು, ಭವ್ಯ, ತ್ರಿವಿಕ್ರಮ್, ಮಂಜು, ಮೋಕ್ಷಿತಾ ಹಾಗೂ ರಜತ್ ಕಿಶನ್ ಮಾತ್ರ ಉಳಿದುಕೊಂಡಿದ್ದಾರೆ. ಇದರಲ್ಲಿ ಒಬ್ಬರು ಮಾತ್ರ ಗೆಲುವು ಪಡೆಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment