/newsfirstlive-kannada/media/post_attachments/wp-content/uploads/2024/12/BBK_11_SUDEEP-1.jpg)
ಕನ್ನಡದಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಶೋ ಎಂದು ಹೇಳಿದರೆ ಅದು ಬಿಗ್​ಬಾಸ್​. ವಾರದಿಂದ ವಾರಕ್ಕೆ ಹೊಸ ಹೊಸ ಟಾಸ್ಕ್​ಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮನೆಯಲ್ಲೂ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಕಾಮಾನ್ ಆಗಿದೆ. ಇದರ ಜೊತೆಗೆ ನಿಮ್ಮ ಕೋಪ ಯಾರ ಮೇಲಿದೆ ಅಂತ ತೋರಿಸಿ ಎಂದು ಕಿಚ್ಚ ಸುದೀಪ್ ಹೇಳಿದ್ದೆ ತಡ, ಸ್ಪರ್ಧಿಗಳು ತಮ್ಮ ವಿರೋಧಿಗಳ ಫೋಟೋಗೆ ಸರಿಯಾದ ಗೂಸಾ ಕೊಟ್ಟಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ್ ಜೊತೆಯ ವಿಡಿಯೋ ಔಟ್ ಆಗಿದೆ. ಇದರಲ್ಲಿ ಸ್ಪರ್ಧಿಗಳು ಅಕ್ಷರಶಃ ಕೆಂಡ ಕಾರಿದ್ದಾರೆ ಎನ್ನಬಹುದು. ಏಕೆಂದರೆ, ನಿಮ್ಮ ಪ್ರೆಸ್ಟೇಶನ್, ಕೋಪ ಯಾರ ಮೇಲಿದೆಂದು ಅವರ ಫೋಟೋ ಅಲ್ಲಿ ಟ್ಯಾಗ್ ಮಾಡಿ ಅದಕ್ಕೆ ಎಷ್ಟು ಬೇಕಾದ್ರೂ ಹೊಡಿಯಬಹುದು, ಗುದ್ದಬಹುದು ಎಂದು ಸುದೀಪ್ ಹೇಳಿದ್ದಾರೆ. ಇದಕ್ಕೆ ಯಾವ್ಯಾವ ಸ್ಪರ್ಧಿಗಳು ಯಾರ ಯಾರ ಫೋಟೋಗೆ ಕಿಕ್ ಮಾಡಿದ್ದಾರೆ ಎಂದರೆ..?
ರಜತ್, ಗೌತಮಿಯ ಫೋಟೋ ಹಾಕಿ ಹೊಡೆದ್ರೆ ಧನರಾಜ್, ತ್ರಿವಿಕ್ರಮ್ ಫೋಟೋ ಹಾಕಿ ಅದಕ್ಕೆ ಕಾರಣ ಹೇಳಿ ಹೊಡೆದರು. ಇನ್ನು ರಜತ್ ಫೋಟೋ ಅಂಟಿಸಿದ ಹನುಮಂತು ಬಹಳ, ಜಾಸ್ತಿ ಮಾತನಾಡುತ್ತಾರೆ ಎಂದು ಜೋರಾಗಿ ಹೊಡೆದಿದ್ದಾರೆ. ಈ ಏಟಿಗೆ ಫೋಟೋ ಕಿತ್ತುಕೊಂಡು ಬಿದ್ದಿದೆ. ಈ ವೇಳೆ ರಜತ್ ಹನುಮಂತನನ್ನ ಕೆಂಗಣ್ಣೀನಿಂದ ಗುರಾಯಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/BBK_11_HANUMANTU.jpg)
ಆದರೆ ಉಗ್ರಂ ಮಂಜು ಅವರ ಫೋಟೋಗೆ ಹೆಚ್ಚಿನ ಸ್ಪರ್ಧಿಗಳು ಹೊಡೆದಿರುವುದು ಎಲ್ಲರಿಗೂ ಆಶ್ಚರ್ಯ ತರಿಸಿದೆ. ಶಿಶಿರ್, ಚೈತ್ರಾ, ಮೋಕ್ಷಿತಾ ಈ ಮೂವರು ಮಂಜು ಫೋಟೋಗೆ ಹೊಡೆದಿದ್ದಾರೆ. ಇದಕ್ಕೆ ಕಾರಣ ಕೊಟ್ಟ ಶಿಶಿರ್, ನಿನ್ನ ಕೈಯಲ್ಲಿ ಏನು ಆಗಲ್ಲ ಅಂತ ಮಂಜು ಹೇಳುತ್ತಿದ್ದರು ಎಂದು ಹೊಡೆದರೆ, ಚೈತ್ರಾ ಅವರು ಇನ್ನೊಬ್ಬರನ್ನ ಬಹಳ ಈಜಿಯಾಗಿ ಟ್ರಿಗರ್ ಮಾಡ್ತಾರೆ ಎಂದು ಹೇಳಿ ಗೂಸಾ ಕೊಟ್ಟಿದ್ದಾರೆ. ಮೋಕ್ಷಿತಾ, ಅವರು ಹೇಳಿದ್ದ ಮಾತಿಗೆ ಇಡೀ ರಾತ್ರಿ ಹೊರಗೆ ಕುಳಿತು ಅತ್ತಿದ್ದೇನೆ ಎಂದು ಹೇಳಿ ಮಂಜು ಫೋಟೋಗೆ ಕೋಪದಿಂದ ಕಿಕ್ ಮಾಡಿದ್ದಾರೆ.
ಬಳಿಕ ಮಂಜು, ಶಿಶಿರ್ ವಿರುದ್ಧ ಕೆಂಡ್ ಕಾರಿದ್ದು ಹೆಂಗಬೇಕೋ ಹಂಗೆ ವಿಚಾರ ತಿರುಗಿಸುವ ಬುದ್ಧಿ ಎಂದಿದ್ದಾರೆ. ಗೇಮ್​ಗಳಲ್ಲಿ ಏನನ್ನು ಕಿಸಿಯದೇ ಅಡಿಗೆ ಮನೆಯಲ್ಲೇ ನಾಲ್ಕೈದು ಮಂದಿ ಮುಂದೆ ಕಿಸಿಯುತ್ತಲೇ ಇರುತ್ತಾರೆ. ಇಲ್ಲಿ ಯಾರು ಚಿಕ್ಕರೋ ಅಲ್ಲ, ಯಾರೂ ದಡ್ಡರು ಅಲ್ಲ ಎಂದು ಗರಂ ಆಗಿ ಹೇಳಿ ಶಿಶಿರ್ ಫೋಟೋಗೆ ಮಂಜು ಪಂಚ್ ಮಾಡಿದ್ದು, ಫೋಟೋ ಕೆಳಗೆ ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us