/newsfirstlive-kannada/media/post_attachments/wp-content/uploads/2025/01/TARAMMA.jpg)
ಬಿಗ್​​ಬಾಸ್​ ಫಿನಾಲೆಗೆ ಕೆಲವೇ ದಿನಗಳಷ್ಟೇ ಬಾಕಿ ಇವೆ. ಸೀಸನ್ 11ರ ಟೈಟಲ್ ಗೆಲ್ಲಲು ಸ್ಪರ್ಧಿಗಳು ನಾನಾ, ನೀನಾ ಅಂತಾ ಪೈಪೋಟಿ ನಡೆಸ್ತಿದ್ದಾರೆ. ಈ ನಡುವೆ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಕಳೆ ನೀಡಲು ಬಿಗ್​ಬಾಸ್​ ಮನೆಗೆ ಹಿರಿಯ ನಟಿ ತಾರಾ ಬಂದಿದ್ದಾರೆ.
ತುಂಬಾ ದಿನಗಳ ನಂತರ ತಾರಾ ಅವರನ್ನು ನೋಡಿದ ಸ್ಪರ್ಧಿಗಳು ಫುಲ್ ಖುಷಿಯಾಗಿದ್ದಾರೆ. ಎಳ್ಳು, ಬೆಲ್ಲದ ಜೊತೆಗೆ ಬಿಗ್​ಬಾಸ್​ ಮನೆಗೆ ಆಗಮಿಸಿದ ತಾರಾ, ಸ್ಪರ್ಧಿಗಳ ನಡುವೆ ನಡೆದು ಹೋದ ಸಿಹಿ-ಕಹಿ ಘಟನೆಗಳನ್ನು ಮೆಲಕು ಹಾಕಿಸಿದ್ದಾರೆ. ಜೊತೆಗೆ ಕಹಿ ಘಟನೆಗಳನ್ನು ಮರೆತು ಸಿಹಿ ವಿಷಯಗಳೊಂದಿಗೆ ಹೆಜ್ಜೆ ಹಾಕಲು ತಾರಮ್ಮ ಸ್ಫೂರ್ತಿ ನೀಡಿದ್ದಾರೆ.
ಈ ವೇಳೆ ಮೋಕ್ಷಿತಾ ಮತ್ತು ಮಂಜು ಭಾವನಾತ್ಮಕ ಘಳಿಗೆಗೆ ಸಾಕ್ಷಿಯಾದರು. ಮನೆಯಲ್ಲಿ ಅತಿಹೆಚ್ಚು ಜಗಳ ಆಡಿರೋದು ಮಂಜಣ್ಣ ಜೊತೆಗೆ ಎಂದು ಮೋಕ್ಷಿತಾ, ತಾರಮ್ಮ ಜೊತೆ ನೋವುಗಳನ್ನು ಹಂಚಿಕೊಂಡರು. ಅದಕ್ಕೆ ಮಂಜು ಪ್ರತಿಕ್ರಿಯಿಸಿ, ಅವರು ನನ್ನನ್ನು ಅಣ್ಣ ಎಂದು ಕರೆಯುತ್ತಾರೆ. ತಂಗಿಗೆ ಇರುವ ಮೆಚುರಿಟಿ ನನಗೆ ಇಲ್ವಲ್ಲ. ಒಂದು ಕಡೆ ದುಡುಕಿ, ಸಿಕ್ಕಾಪಟ್ಟೆ ನೋವು ಕೊಟ್ಟೆ. ನಾನು ಕ್ಷಮೆ ಕೇಳುತ್ತೇನೆ ಎಂದು ತಬ್ಬಿಕೊಂಡಿದ್ದಾರೆ. ಇವತ್ತು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​ನ ಪ್ರೊಮೋ ಝಲಕ್ ಅನ್ನು ಬಿಗ್​ಬಾಸ್ ಶೇರ್ ಮಾಡಿದ್ದಾರೆ. ಪ್ರೊಮೋ ನೋಡಿರುವ ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ: BBK11: ಧನರಾಜ್‌ಗೆ ಹೊಡೀತು ಜಾಕ್‌ಪಾಟ್.. ವಾರದ ಮಧ್ಯೆ ಎಲಿಮಿನೇಟ್ ಯಾರ್ ಆಗ್ತಾರೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ