BBK11; ಡಬಲ್ ​ಎಲಿಮಿನೇಷನ್​ ಇರುತ್ತಾ.. ಕೊನೆಯಲ್ಲಿ ಬಿಗ್ ಟ್ವಿಸ್ಟ್ ಕೊಡ್ತಾರಾ ಬಿಗ್​ಬಾಸ್?

author-image
Bheemappa
Updated On
BBK11; ಡಬಲ್ ​ಎಲಿಮಿನೇಷನ್​ ಇರುತ್ತಾ.. ಕೊನೆಯಲ್ಲಿ ಬಿಗ್ ಟ್ವಿಸ್ಟ್ ಕೊಡ್ತಾರಾ ಬಿಗ್​ಬಾಸ್?
Advertisment
  • ಕಳೆದ ವಾರ ಡೇಂಜರ್ ಝೋನ್​ನಲ್ಲಿದ್ದ ಚೈತ್ರಾ, ಐಶ್ವರ್ಯ
  • ಬಿಗ್​​ಬಾಸ್ ಮನೆಯಲ್ಲಿ ರಜತ್, ಧನರಾಜ್ ಮಧ್ಯೆ ಘರ್ಷಣೆ
  • BBK11; ನಾಮಿನೇಟ್ ಆದ 8 ಸ್ಪರ್ಧಿಗಳು ಯಾರು ಯಾರು?

ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮನೆಯಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು ರೂಲ್ಸ್ ಬ್ರೇಕ್ ಮಾಡಲಾಗಿದೆ. ಕಳಪೆ ಪಟ್ಟ ಕಟ್ಟಿಕೊಂಡ ತ್ರಿವಿಕ್ರಮ್, ಚೈತ್ರಾ ಕುಂದಾಪುರ ಜೈಲಿಂದ ಬಂದಿದ್ದಾರೆ. ಆದರೆ ಈ ವಾರ ರಜತ್, ಧನರಾಜ್ ಅವರ ಘರ್ಷಣೆಯಾಟ ಕಿಚ್ಚನ ಪಂಚಾಯತಿಯ ಹಾಟ್ ಟಾಪಿಕ್ ಆಗಿದೆ. ಇದರ ಜೊತೆಗೆ ಈ ವಾರ ಡಬಲ್​ ಎಲಿಮಿನೇಷನ್​ ಇರುತ್ತಾ?.

ಬಿಗ್ ಬಾಸ್ 11ರ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದಕ್ಕೆ ಕೌಂಟ್‌ಡೌನ್ ಶುರುವಾಗಿದೆ. 10ನೇ ವಾರದ ಕೊನೆಯಲ್ಲಿ ಐಶ್ವರ್ಯ, ಚೈತ್ರಾ ಕುಂದಾಪುರ ಡೇಂಜರ್‌ ಝೋನ್‌ನಲ್ಲಿ ಇದ್ದರು. ಆದರೆ ಕಳೆದ ವಾರ ಯಾರನ್ನು ಮನೆಯಿಂದ ಕಳುಹಿಸಲಿಲ್ಲ. ಹೀಗಾಗಿ ಚೈತ್ರಾ ಹಾಗೂ ಐಶ್ವರ್ಯ ಇಬ್ಬರು ಸೇಫ್ ಆಗಿದ್ದರು. 11ನೇ ವಾರದ ಕೊನೆಗೆ ತನ್ನ ಆಟ ಮುಗಿಸುವ ಸ್ಪರ್ಧಿ ಯಾರು ಎನ್ನುವುದು ಇದೀಗ ಸಸ್ಪೆನ್ಸ್ ಆಗಿದೆ.

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ PV ಸಿಂಧು ಅದ್ಧೂರಿ ನಿಶ್ಚಿತಾರ್ಥ.. ಹುಡುಗ ಯಾರು, ಏನು ಮಾಡುತ್ತಾರೆ?

publive-image

ಸ್ಪರ್ಧಿಗಳಾದ ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್​, ರಜತ್​, ಧನರಾಜ್​, ಹನುಮಂತ ಹಾಗೂ ಚೈತ್ರಾ ಕುಂದಾಪುರ ಈ 8 ಮಂದಿ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಅಲ್ಲದೇ ಕ್ಯಾಪ್ಟನ್​ ಗೌತಮಿ ಜಾಧವ್​ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ. ಈ ವಾರ ಒಬ್ಬರಂತೂ ಬಿಗ್‌ಬಾಸ್ ಮನೆಯಿಂದ ಆಚೆ ಬರೋದು ಪಕ್ಕಾ. ಕಳೆದ ವಾರ ಯಾವ ಸ್ಪರ್ಧಿ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಡಬಲ್​ ಎಲಿಮಿನೇಷನ್​ ಇರುತ್ತಾ ಅಥವಾ ಕೊನೆ ಕ್ಷಣದಲ್ಲಿ ಮತ್ತೆ ಬಿಗ್​ಟ್ವಿಸ್ಟ್​ ಇರುತ್ತಾ ಎಂದು ಇನ್ನೇನು ಗೊತ್ತಾಗಲಿದೆ.

11ನೇ ವಾರ ಮುಗಿಯುವ ಹಂತಕ್ಕೆ ತಲುಪಿದೆ. ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ಒಂದೊಂದು ಟ್ವಿಸ್ಟ್ ಇರುತ್ತದೆ. ಅದರಂತೆ ಕಳೆದ ವಾರ ಯಾರನ್ನು ಮನೆಯಿಂದ ಕಳಿಸಿರಲಿಲ್ಲ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಿದ ಮೆಗಾ ಟ್ವಿಸ್ಟ್ ಇರಬಹುದು. ಒಬ್ಬರು ಮನೆಯಿಂದ ಹೊರ ಬಹುದು. ಇಲ್ಲವಾದರೆ ಇಬ್ಬರು ಜಾಗ ಖಾಲಿ ಮಾಡಬಹುದು. ಎಲಿಮಿನೇಷನ್ ಜೊತೆಗೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಾಕಿಂಗ್ ನ್ಯೂಸ್ ಅಂತೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment