/newsfirstlive-kannada/media/post_attachments/wp-content/uploads/2023/12/bigg-boss-2023-12-19T192618.226.jpg)
ಬಿಗ್‌ಬಾಸ್ ಮನೆ ಆಟದ ವಾತಾವರಣ ಯಾರನ್ನು ಹೇಗೆ ಬೇಕಾದರೂ ಬದಲಾಯಿಸಬಹುದು. ಸಹನೆ ತಾಳ್ಮೆ ಹೊಂದಿದವರನ್ನ ಬಿಗ್‌ಬಾಸ್ ಆಟ ಕೆಣಕಲುಬಹುದು. ಕೋಪ, ತಾಪ ಇರೋವವರನ್ನು ತಣ್ಣಗೂ ಆಗಿಸಬಹುದು. ಎರಡು ಕೂಡ ಈ ಮನೆಯಲ್ಲಿ ಕ್ಷಣಮಾತ್ರದಲ್ಲೇ ಬದಲಾಗುತ್ತೆ.
ಆ ಮನೆಯಲ್ಲಿ ಬಹಳ ತಾಳ್ಮೆ, ಸಹನೆ ಹೊಂದಿರುವ ಏಕೈಕ ಸ್ಪರ್ಧಿ ಅಂದ್ರೆ ಅದು ಸಿರಿ. ಸಿರಿ ಅವರು ಜೋರಾಗಿ ಧ್ವನಿ ಏರಿಸಿ ಮಾತ್ನಾಡುವುದಿಲ್ಲ ಅನ್ನೋದೆ ಅವರ ನಾಮಿನೇಷನ್ಗೆ ಪ್ರತಿಸಲ ಕಾರಣವಾಗ್ತಿತ್ತು. ಎಲ್ಲರ ಕಂಪ್ಲೇಂಟ್ ಕೂಡ ಅದೇ ಯಾರನ್ನೂ ನಿಷ್ಠುರಕ್ಕೆ ತೆಗೆದುಕೊಳ್ಳದೆ ಸೇಫ್ ಗೇಮ್ ಆಡ್ತಾರೆ ಅನ್ನೋದು.
ಆದ್ರೆ, ನಿನ್ನೆ ಸಿರಿ ಅವರು ತುಕಾಲಿ ಅವರಿಗೆ ಮಾತಿನ ಮೂಲಕ ಚಳಿ ಬಿಡಿಸಿದ್ದಾರೆ. ರಿಪೋರ್ಟರ್ ಆಗಿ ಸಿರಿ ತುಕಾಲಿ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿರಿ ಅವರು ಕಿಚ್ಚ ಸುದೀಪ್ ಕೊಟ್ಟ ಸಲಹೆಯಂತೆ ಆಟದಲ್ಲಿ ಈಗ ಸಿಹಿ ಜೊತೆ ಉಪ್ಪು ಕಾರ ಬೆರತಿದೆ. ತುಕಾಲಿ ಅವರಿಗೆ ಮಾತಿಲ್ಲದೆ ನಿನ್ನೆಯ ಚರ್ಚೆಯಲ್ಲಿ ಒದ್ದಾಡಿದ್ದಾರೆ. ಸಿರಿ ಅವರ ಪ್ರಶ್ನೆಗಳ ಸುರಿಮಳಗೆ ದಂಗಾಗಿದ್ದಾರೆ ತುಕಾಲಿ ಸಂತೋಷ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ