/newsfirstlive-kannada/media/post_attachments/wp-content/uploads/2024/12/BBK11_5.jpg)
ಕನ್ನಡ ಬಿಗ್ ಬಾಸ್ ಸೀಸನ್ 11 ಅದ್ಭುತವಾಗಿ ಸಾಗುತ್ತಿದೆ. ವಾರದಿಂದ ವಾರಕ್ಕೆ ಸ್ಪರ್ಧಿಗಳಿಗೆ ಟಾಸ್ಕ್​ಗಳನ್ನು ತುಂಬಾ ಎಫೆಕ್ಟ್ ಆಗಿ ನೀಡಲಾಗುತ್ತಿದೆ. ಈ ಟಾಸ್ಕ್​ಗಳನ್ನು ಆಡಲು ಸ್ಪರ್ಧಿಗಳು ಕೂಡ ಸಾಕಷ್ಟು ಸಾಹಸ ಪಟ್ಟು ಆಡುತ್ತಿದ್ದಾರೆ. 11ನೇ ವಾರದಲ್ಲಿ ತ್ರಿವಿಕ್ರಮ್ ನಾಮಿನೇಟ್​ ಹಿಂದೆ ತಂತ್ರ ಹೆಣೆಯಲಾಗಿತ್ತಾ? ಎನ್ನುವುದನ್ನ ವಾರದ ಕತೆಯಲ್ಲಿ ಗೊತ್ತಾಗಿದೆ.
ಮೋಕ್ಷಿತಾ ಅವರು ತ್ರಿವಿಕ್ರಮ್​ ಅವರನ್ನು ನಾಮಿನೇಟ್ ಮಾಡಿರುವುದನ್ನು ಕಿಚ್ಚ ಸುದೀಪ್ ಸಾಕಷ್ಟು ಸಮಯ ಚರ್ಚಿಸಿದರು. ತ್ರಿವಿಕ್ರಮ್​ರನ್ನ ಮೋಕ್ಷಿತಾ ನಾಮಿನೇಟ್ ಮಾಡಿರುವುದರ ಹಿಂದೆ ಏನೇನು ನಡೆದಿದೆ ಎಂದು ದೃಶ್ಯ ಸಮೇತ ಸುದೀಪ್ ತೋರಿಸಿದರು. ಹಿಂದಿನ ಸಂಚಿಕೆಯಲ್ಲಿ ಐಶ್ವರ್ಯ ಅವರು ಮೋಕ್ಷಿತಾಗೆ ಹೇಗೆ ನಾಮಿನೇಟ್ ಮಾಡಬೇಕು. ಸುಮ್ಮನೆ ನಾಮಿನೇಟ್ ಮಾಡಬಾರದು. ನಾವು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಬೇಕು ಎಂದು ಹೇಳಿದ್ದರು. ಇದರಿಂದಲೇ ಮೋಕ್ಷಿತಾ ಮಾನ್ಯುಪ್ಲೇಟ್ ಆಗಿ, ತ್ರಿವಿಕ್ರಮ್​​ರನ್ನ ನಾಮಿನೇಟ್ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಐಕಾನ್​ ಸ್ಟಾರ್ ಬಂಧನದ ಹಿಂದೆ ರಾಜಕೀಯನಾ.. ಅಲ್ಲು ಅರ್ಜುನ್- CM ರೇವಂತ್ ರೆಡ್ಡಿ ಮಧ್ಯೆ ಆಗಿದ್ದೇನು?
/newsfirstlive-kannada/media/post_attachments/wp-content/uploads/2024/11/BBK11-Trivikram-Mokshita.jpg)
ತ್ರಿವಿಕ್ರಮ್​​ರನ್ನ ನಾಮಿನೇಟ್ ಮಾಡುವುದಕ್ಕೆ ಮೋಕ್ಷಿತಾ ಕಾರಣ ತಿಳಿಸಿದ್ದಾರೆ. ತ್ರಿವಿಕ್ರಮ್​ ನನಗೆ ಸೈಕೋ.... ಎಂದು ಹೇಳಿದ್ದು ಬೇಜಾರು ಆಗಿತ್ತು. ಇದು ನನಗೆ ತುಂಬಾ ಹರ್ಟ್​ ಆಗಿತ್ತು. ಚೈತ್ರಾ ಅವರು ಹೇಳಿದ್ದರು. ಅದನ್ನು ತ್ರಿವಿಕ್ರಮ್​ ಕೂಡ ಒಪ್ಪಿಕೊಂಡಿದ್ದರು ಎಂದು ಸುದೀಪ್ ಮುಂದೆ ಹೇಳಿದ್ದಾರೆ. ಅಲ್ಲದೇ ಮನೆಯ ವಾತಾವರಣ ಹಾಳು ಆಯಿತೆಂದು ಅವರನ್ನು ನಾಮಿನೇಟ್ ಮಾಡಿದೆ. ಅದಕ್ಕಿಂತ ಹಿಂದಿನ ವಾರ ತ್ರಿವಿಕ್ರಮ್​​ರನ್ನ ನಾಮಿನೇಟ್ ಮಾಡಿಲ್ಲ ಎಂದು ಮೋಕ್ಷಿತಾ ಕಿಚ್ಚನಿಗೆ ಜವಾಬು ಕೊಟ್ಟಿದ್ದಾರೆ.
ಇದಕ್ಕೆ ಕಿಚ್ಚ ಸುದೀಪ್ ಮಾತನಾಡಿ, ಒಬ್ಬರ ಹೆಸರನ್ನು ಇಬ್ಬರು ಕೂಡ ಹೇಳಿದಾಗ ಅದನ್ನು ನಾವೆಲ್ಲಾ ಹೇಗೆ ನೋಡೋದು. ಶಿಶಿರ್​ಗೆ ಆಪರ್ಚುನಿಟಿ ಸಿಕ್ಕಿದ್ರೆ ತುಂಬಾ ಕೆಟ್ಟದಾಗಿ ಕಾಣುತ್ತಿತ್ತು ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮೋಕ್ಷಿತಾ, ನೀವು ಹೇಳುವುದೆಲ್ಲಾ ಅಗ್ರಿ ಮಾಡಿಕೊಳ್ಳುತ್ತೇನೆ. ಆದರೆ ಒಬ್ಬರ ಹೆಸರು ತಗೊಂಡು ನಾಮಿನೇಟ್ ಮಾಡಿಲ್ಲ. ಹೆಸರನ್ನು ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ. ಭವ್ಯಾ ಕೂಡ ಮಾತನಾಡಿ, ಇಬ್ಬರನ್ನು ಬಕ್ರ ಮಾಡಿ ಐಶ್ವರ್ಯ ಉಳಿದುಕೊಳ್ಳಲು ಪ್ಲಾನ್ ಮಾಡಿರಬಹುದು ಎಂದು ನನಗೆ ಅನಿಸಿದೆ ಎಂದಿದ್ದಾರೆ. ಆಟಕ್ಕೆ ನ್ಯಾಯವಾಗಿರಿ. ಇಲ್ಲಿ ಗಂಡ ಹೆಂಡತಿ ಆಗಿರುತ್ತಿರೋ, ಅಣ್ಣ-ತಂಗಿ ಆಗಿರೋತ್ತಿರೋ ಗೊತ್ತಿಲ್ಲ. ಕೊನೆಗೆ ಗೆಲ್ಲುವುದು ಒಬ್ಬರೇ ಎಂದು ಸುದೀಪ್ ಬುದ್ಧಿವಾದ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us