/newsfirstlive-kannada/media/post_attachments/wp-content/uploads/2024/12/GOWTHAMI-4.jpg)
ಬಿಗ್ಬಾಸ್ ಮನೆಯಲ್ಲಿ ಇದೀಗ ಗೌತಮಿ ಮತ್ತು ರಜತ್ ನಡುವೆ ವಾಕ್ಸಮರ ನಡೆದಿದೆ. ಇಬ್ಬರ ಮಧ್ಯೆ ಕ್ಲೀನಿಂಗ್ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ.
ಆಗಿದ್ದೇನು..?
ಇಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ಎಪಿಸೋಡ್ಗೆ ಸಂಬಂಧಿಸಿ ಬಿಗ್ಬಾಸ್ ಪ್ರೊಮೋ ರಿಲೀಸ್ ಮಾಡಿದ್ದಾರೆ. ಅದರಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಸದ ರಾಶಿ ಇರೋದನ್ನು ಕಾಣಬಹುದಾಗಿದೆ. ಮುಂದಿನ 60 ನಿಮಿಷದಲ್ಲಿ ಮನೆಯಲ್ಲಿರುವ ಎಲ್ಲಾ ಕಸಗಳನ್ನು ತೆಗೆಯುವಂತೆ ಬಿಗ್ಬಾಸ್ ಟಾಸ್ಕ್ ನೀಡಿದ್ದಾರೆ. ಎಲ್ಲಾ ಸ್ಪರ್ಧಿಗಳು ಕ್ಲೀನಿಂಗ್ನಲ್ಲಿ ಬ್ಯುಸಿ ಆಗಿರ್ತಾರೆ.
ಗಾರ್ಡನ್ ಏರಿಯಾದಲ್ಲಿ ಗೌತಮಿ ಇತರೆ ಸ್ಪರ್ಧಿಗಳು ಕ್ಲೀನ್ ಮಾಡ್ತಿರ್ತಾರೆ. ಅಲ್ಲೇ ಪಕ್ಕದ ಸೋಫಾ ಮೇಲೆ ರಜತ್ ಕೂತುಕೊಂಡು ಒಬ್ಬನೇ ಕೂತ್ಕೊಂಡಿರೋದನ್ನು ನನ್ನತ್ರ ನೋಡೋಕೆ ಆಗ್ತಿಲ್ಲ ಎನ್ನುತ್ತಾರೆ. ಇದರಿಂದ ಕೋಪಿಸಿಕೊಂಡ ಗೌತಮಿ, ಡೈಲಾಗ್ ಹೊಡಿ, ಕೂತ್ಕೊ.. ಒಂದಷ್ಟು ಹಣ್ಣು ತಿನ್ನು ಎಂದಿದ್ದಾರೆ.
ಅದಕ್ಕೆ ರೊಚ್ಚಿಗೇಳುವ ರಜತ್, ಇದು ನಿನ್ನ ಮನೆ ಅಂದ್ಕೊಂಡಿದ್ಯಾ? ಎಂದು ಡೈಲಾಗ್ ಹೊಡೆದಿದ್ದಾರೆ. ಅಲ್ಲದೇ ಡ್ರಾಮಾ ಮಾಡ್ಕೊಂಡೇ 12 ವಾರ ಬಂದುಬಿಟ್ಟೆ ಎಂದು ಗೌತಮಿಗೆ ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ನೀವುಗಳು ಡೈಲಾಗ್ ಹೊಡ್ಕೊಂಡು ಇಲ್ವಾ ಎಂದು ಗೌತಮಿ ಕೌಂಟರ್ ಕೊಟ್ಟಿದ್ದಾರೆ. ಹೀಗೆ ಇಬ್ಬರ ಮಧ್ಯೆ ಜೋರಾಗಿ ವಾಕ್ಸಮರ ನಡೆದಿದೆ. ಇನ್ನು ಬಿಗ್ಬಾಸ್ ಮನೆಯಲ್ಲಿ ಅಷ್ಟೊಂದು ಮಾಡಿದ್ಯಾರು ಅನ್ನೋ ಪ್ರಶ್ನೆ ಕೂಡ ಶುರುವಾಗಿದೆ.
ಇದನ್ನೂ ಓದಿ:BBK11: ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದು ಇವರೇ ನೋಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ