BBK11 ಇಂದು ಕಿಚ್ಚನ ಮೊದಲ ಮಾತುಕತೆ; ಈ ಸ್ಪರ್ಧಿಗಳಿಗೆ ಪುಕಪುಕ..! ವಿಡಿಯೋ

author-image
Ganesh
Updated On
BBK11 ಇಂದು ಕಿಚ್ಚನ ಮೊದಲ ಮಾತುಕತೆ; ಈ ಸ್ಪರ್ಧಿಗಳಿಗೆ ಪುಕಪುಕ..! ವಿಡಿಯೋ
Advertisment
  • ರಾತ್ರಿ 9 ಗಂಟೆಯಿಂದ ವಾರದ ಕತೆ ಕಿಚ್ಚನ ಜೊತೆ
  • ಕಿಚ್ಚ ಸುದೀಪ್ ಯಾರಿಗೆ ಕ್ಲಾಸ್ ತೆಗೆದುಕೊಳ್ತಾರೆ?
  • ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು?

ಬಿಗ್​ಬಾಸ್​ ಗೆಲ್ಲಲು ದೊಡ್ಮನೆಯಲ್ಲಿ ಸ್ಪರ್ಧಿಗಳು ಮಾಡ್ತಿರುವ ಮನರಂಜನೆಯ ಹೈಡ್ರಾಮಾಗಳು ಸರಿ-ತಪ್ಪುಗಳ ಚರ್ಚೆಗಳನ್ನು ಹುಟ್ಟುಹಾಕಿದೆ. ಅದರ ಮಧ್ಯೆ ಇಂದು ರಾತ್ರಿ 9 ಗಂಟೆಯಿಂದ ಪ್ರಸಾರವಾಗುವ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್ ತುಂಬಾನೇ ಕುತೂಹಲವಾಗಿದೆ.

ಬಿಗ್​ಬಾಸ್ ಸೀಸನ್​-11 ಶುರುವಾಗಿ ಒಂದು ವಾರ ಕಳೆದಿದ್ದು, ಇಂದು ಮೊದಲ ಪಂಚಾಯ್ತಿ ನಡೆಯುತ್ತಿದೆ. ಒಂದು ವಾರದಲ್ಲಿ ನಡೆದ ಸ್ಪರ್ಧಿಗಳ ಮನರಂಜನೆಯ ಕಥಾವಸ್ತು ಇಟ್ಕೊಂಡು, ಸರಿ, ತಪ್ಪುಗಳ ಬಗ್ಗೆ ಕಿಚ್ಚ ಸುದೀಪ್ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಸುದೀಪ್, ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಯಾರಿಗೆಲ್ಲ ಕಿವಿ ಮಾತು ಹೇಳಲಿದ್ದಾರೆ ಅನ್ನೋದ್ರ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ.

ಇದನ್ನೂ ಓದಿ:BBK11: ಧನರಾಜ್​ ಆಚಾರ್ಯ ಡೈಲಾಗ್​ಗೆ ಬಿಗ್​ಬಾಸ್​ ಮನೆಮಂದಿ ಫುಲ್​ ಖುಷ್​.. ವಿಡಿಯೋ ಇಲ್ಲಿದೆ

ಅಲ್ಲದೇ ರಾತ್ರಿ 9 ಗಂಟೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ತಪ್ಪು ಮಾಡಿದ, ತಪ್ಪಾಗಿ ಮಾತನಾಡಿದ ಕೆಲವು ಸ್ಪರ್ಧಿಗಳಿಗೆ ಸಹಜವಾಗಿಯೇ ತಳಮಳ ಶುರುವಾಗಿದೆ. ಕಿಚ್ಚ ಸುದೀಪ್ ಎಲ್ಲಿ ಮುಖವಾಡ ಕಳಚಿಡುತ್ತಾರೋ ಎಂಬ ಭಯ ಕಾಡಿದೆ.

ಈ ಮಧ್ಯೆ ವಾಹಿನಿ ಕಲರ್ಸ್​ ಕನ್ನಡ ಪ್ರೊಮೋ ಒಂದನ್ನು ಬಿಟ್ಟು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸ್ವರ್ಗ ಇರಲಿ, ನರಕಾನೇ ಇರಲಿ ಎಲ್ಲಿದ್ದರೂ ಎಲಿಮಿನೇಷನ್ ತಪ್ಪಿದ್ದಲ್ಲ. ಮನೆಯಿಂದ ಆಚೆ ಹೋಗಲು 9 ಸ್ಪರ್ಧಿಗಳು ನಾಮಿನೇಷನ್ ಆಗಿದ್ದಾರೆ. ಅವರೆಲ್ಲರ ಮೇಲೂ ಎಲಿಮಿನೇಷನ್ ತೂಗುಗತ್ತಿ ಇದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:BBK11: ‘ಸುದೀಪ್​ ಸರ್​ ಇವರನ್ನೇ ಒದ್ದು ಹೊರಗಡೆ ಹಾಕ್ತಾರೆ‘; ಬಿಗ್​ಬಾಸ್​ ಮನೆಯಲ್ಲಿ ಏನಾಗ್ತಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment