Bigg Boss: ಸಂಗೀತಾಗೆ ಸಡನ್ ಶಾಕ್ ಕೊಟ್ಟ ಕಾರ್ತಿಕ್​​​; ಬಿಗ್‌ಬಾಸ್‌ ಮನೆಯಲ್ಲಿ ಶುರು ಹೊಸ ಆಟ; ಏನದು?

author-image
Veena Gangani
Updated On
Bigg Boss: ಸಂಗೀತಾಗೆ ಸಡನ್ ಶಾಕ್ ಕೊಟ್ಟ ಕಾರ್ತಿಕ್​​​; ಬಿಗ್‌ಬಾಸ್‌ ಮನೆಯಲ್ಲಿ ಶುರು ಹೊಸ ಆಟ; ಏನದು?
Advertisment
  • ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್​ನನ್ನು ಮನವೊಲಿಸಿದ ಸಂಗೀತಾ ಫೇಲ್!
  • ಟಾಸ್ಕ್​ ಆರಂಭದ ಮೊದಲೇ ಬಿಗ್​ಬಾಸ್​ ಮನೆಯಲ್ಲಿ ಶುರುವಾಯ್ತು ಗಲಾಟೆ
  • ಸಂಗೀತಾ ಹೇಳಿದ ಮಾತನ್ನು ಕೇಳಿ ಕೋಪಗೊಂಡ ಕಾರ್ತಿಕ್​ ಮಾಡಿದ್ದೇನು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸದ್ಯ 11ನೇ ವಾರಕ್ಕೆ ಕಾಲಿಟ್ಟಿದೆ. ಮತ್ತೆ ಬಿಗ್​ಬಾಸ್​ ಮನೆಯಲ್ಲಿ ಎರಡು ತಂಡವಾಗಿ ಇಬ್ಭಾಗಗೊಂಡಿದೆ. ಒಂದು ತಂಡದ ನಾಯಕಿ ತನಿಶಾ ಆದರೆ, ಮತ್ತೊಂದು ತಂಡದ ನಾಯಕಿ ಸಂಗೀತಾ ಆಗಿದ್ದಾರೆ. ಹೀಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್​ ಆಗಿದೆ. ರಿಲೀಸ್​ ಆದ ಪ್ರೋಮೋದಲ್ಲಿ ಬಿಗ್​ಬಾಸ್​ ಮನೆಯ ಮಂದಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ. ಇನ್ನು, ಬಿಗ್​ಬಾಸ್​ ಟಾಸ್ಕ್​ ಆರಂಭದ ಮೊದಲೇ ಮನೆಯಲ್ಲಿ ಗಲಾಟೆ ಶುರುವಾಗಿದೆ.

publive-image

ತನಿಶಾ ಹಾಗೂ ಸಂಗೀತಾ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು ಎಂದು ಬಿಗ್​ಬಾಸ್​ ಸೂಚನೆ ನೀಡಿದ್ದರು. ಇದಕ್ಕಾಗಿ ಪ್ರತ್ಯೇಕವಾಗಿ ಸಂಗೀತಾ ಮತ್ತು ತನಿಶಾ ಇಬ್ಬರಿಗೂ ಟಿಕೆಟ್​ಗಳನ್ನೂ ಸಹ ನೀಡಲಾಗಿತ್ತು. ಬಿಗ್​ಬಾಸ್​ ಪ್ರೋಮೋದಲ್ಲಿ ಕಂಡು ಬಂದ ಹಾಗೇ ಸಂಗೀತಾ ಮೊದಲನೆ ಆಟಗಾರನಾಗಿ ನಮೃತಾರನ್ನು ಖರೀದಿಸುತ್ತಾರೆ. ಅದೇ ವೇಳೆ ತನಿಶಾ ಅವರು ವಿನಯ್​ ಅವರನ್ನು ತಮ್ಮ ತಂಡಕ್ಕಾಗಿ ಖರೀದಿಸುವುದನ್ನು ಕಾಣಬಹುದು. ನಂತರ ತನಿಶಾ ಮತ್ತು ಸಂಗೀತಾ ಇಬ್ಬರೂ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್​ನನ್ನು ಮನವೊಲಿಸುತ್ತಾರೆ. ಕೊನೆಗೂ ಕಾರ್ತಿಕ್​ ಸಂಗೀತಾ ತಂಡಕ್ಕೆ ಹೋಗಿರುತ್ತಾರೆ.

ಆದ್ರೆ ಈ ಮಧ್ಯೆ ಸಂಗೀತಾ-ಕಾರ್ತಿಕ್​ ಮಧ್ಯೆ ಮಸಸ್ತಾಪ ಉಂಟಾಗುತ್ತದೆ. ಆಗ ಸಂಗೀತಾ ಬೇಕಾದ್ರೆ ನೀವು ಹೋಗಿ ನೋ ಪ್ರಾಬ್ಲಮ್ ಎಂದು ಹೇಳುತ್ತಾರೆ. ಸಂಗೀತಾ ಹೇಳಿದ ಮಾತನ್ನು ಕೇಳಿ ಕೋಪಗೊಂಡ ಕಾರ್ತಿಕ್​ ಇಷ್ಟೆಲ್ಲಾ ಇಗೋ ಇದ್ರೆ ನಿಲ್ಲಲ್ಲ ಅಂತ ಹೇಳಿ ತನ್ನ ಕೈಯಲ್ಲಿದ್ದ ಟಿಕೆಟ್​ ಅನ್ನು ಮತ್ತೆ ಸಂಗೀತಾ ಕೈಗೆ ಕೊಟ್ಟು ಹೋಗುತ್ತಾರೆ. ಈ ಸಂದರ್ಭದಲ್ಲಿ ಸಂತೋಷಗೊಂಡ ವಿನಯ್​ ಜೋಡತ್ತು, ಜೋಡೆತ್ತುಗಳು ಅಂತ ಹೇಳಿಕೊಂಡು ಒಬ್ಬರಿಗೊಬ್ಬರು ಮಾತಾಡುತ್ತಾ ತನಿಶಾ ತಂಡಕ್ಕೆ ಹೋಗುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment