/newsfirstlive-kannada/media/post_attachments/wp-content/uploads/2024/10/Biggboss-lawyer-Jagadish.jpg)
ಬಿಗ್ ಬಾಸ್ ಮನೆಯಲ್ಲಿ ಅಬ್ಬರ, ಆರ್ಭಟದಲ್ಲೇ ಸದ್ದು ಮಾಡಿದ್ದ ಲಾಯರ್ ಜಗದೀಶ್ ಅವರು ಸೀಸನ್ 11ರಿಂದ ಔಟ್ ಆಗಿದ್ದಾರೆ. ಈಗ ಮನೆಯಲ್ಲಿರುವ ಜಗದೀಶ್ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ಯಂತೆ. ಹೀಗಾಗಿ ಭದ್ರತೆ ಕೋರಿ ವಕೀಲ ಜಗದೀಶ್ ಅವರು ಸಿಎಂ, ಡಿಜಿಪಿ ಹಾಗೂ ಬೆಂಗಳೂರು ನಗರ ಕಮಿಷನರ್‌ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಬೆನ್ನಲ್ಲೇ ಸವಿರುಚಿಗೆ ಎಂಟ್ರಿ ಕೊಟ್ಟ ಲಾಯರ್ ಜಗದೀಶ್; ಮಾಡಿರೋ ರೆಸಿಪಿ ಏನು?
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾದ ಮೇಲೆ ಕರ್ನಾಟಕದ ಜನತೆ ನನಗೆ ವಕೀಲ್ ಸಾಬ್ ಜಗದೀಶ್, ವಾಯ್ಸ್ ಆಫ್ ಕರ್ನಾಟಕ, ಬಿಗ್ ಬಾಸ್ ಜಗದೀಶ್, ಕ್ರಶ್ ಆಫ್ ಕರ್ನಾಟಕ ಮತ್ತು ರಾಬಿನ್ ಹುಡ್ ಆಫ್ ಕರ್ನಾಟಕ ಎಂದು ಕರೆಯುತ್ತಿದ್ದಾರೆ.
ಬಿಗ್ ಬಾಸ್‌ನಿಂದ ಹೊರಗೆ ಬಂದ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ನನ್ನ ಮನೆ ಮುಂದೆ ಪ್ರತಿದಿನ 3ರಿಂದ 4 ಸಾವಿರ ಜನ ಬಂದು ಹೋಗುತ್ತಿದ್ದಾರೆ. ಕೆಲ ಕಾರ್ಯಕ್ರಮದ ವೇಳೆ ಅಭಿಮಾನಿಗಳು ಮಾತನಾಡಲಿಕ್ಕೆ ಮುಗಿಬೀಳುತ್ತಿದ್ದಾರೆ. ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಕಮಿಷನರ್ ದಯಾನಂದ್ ಅವರಿಗೆ ಜಗದೀಶ್ ಮನವಿ ಮಾಡಿದ್ದಾರೆ.
ಸಾವರ್ಜನಿಕರ ಸುರಕ್ಷತೆ, ಜನಸಮೂಹ ನಿಯಂತ್ರಿಸುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯಬಾರದು ಅನ್ನೋ ಉದ್ದೇಶದಿಂದ ಸೂಕ್ತ ಭದ್ರತೆ ನೀಡುವಂತೆ ಜಗದೀಶ್ ಅವರು ತಮ್ಮ ಮನವಿ ಪತ್ರದಲ್ಲಿ ಕೋರಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ