ಬಿಗ್​ಬಾಸ್​ ವೀಕ್ಷಕರಿಗೆ ಶಾಕಿಂಗ್ ಸುದ್ದಿ;​ ಆರಂಭಕ್ಕೂ ಮುನ್ನವೇ ಶೋಗೆ ಭಾರೀ ಸಂಕಷ್ಟ!

author-image
Veena Gangani
Updated On
ನಿಮಗೂ ಬಿಗ್​ಬಾಸ್​ ಮನೆಗೆ ಹೋಗೋ ಆಸೆನಾ..? ಹಾಗಾದ್ರೆ ಈ ಚಾನ್ಸ್​ ನೀವು ಮಿಸ್ ​ಮಾಡ್ಕೋಬೇಡಿ..!
Advertisment
  • ಬಿಗ್​ಬಾಸ್ ಕಾರ್ಯಕ್ರಮಕ್ಕೆ ಆಯಾ ಭಾಷೆಯಲ್ಲಿ ಅಪಾರ ವೀಕ್ಷಕರಿದ್ದಾರೆ
  • ಭಾರತದಲ್ಲಿ ಮೊದಲು ಬಿಗ್​ಬಾಸ್ ಶುರುವಾಗಿದ್ದ ಹಿಂದಿ ಭಾಷೆಯಲ್ಲಿ
  • ಹಿಂದಿಯಿಂದಲೇ ಅಂತ್ಯಗೊಳ್ಳುತ್ತಾ ಎಂಬ ಅನುಮಾನ ಮೂಡಿದ್ದೇಕೆ?

ಬಿಗ್​ಬಾಗ್ ಶೋ ಆರಂಭವಾಗೋ ಮುನ್ನವೇ ಸಂಕಷ್ಟವೊಂದು ಎದುರಾಗಿದೆ. ಬಿಗ್​ಬಾಸ್ ಕಾರ್ಯಕ್ರಮಕ್ಕೆ ಆಯಾ ಭಾಷೆಯಲ್ಲಿ ಅಪಾರ ವೀಕ್ಷಕರಿದ್ದಾರೆ. ಕೆಲವೊಂದು ವಾಹಿನಿಗಳು ಓಟಿಟಿ ಹಾಗೂ ಮಿನಿ ಸೀಸನ್ ಕೂಡ ನಡೆಸಿವೆ. ಆದರೆ ಈ ಬಾರಿ ಶೋ ಆರಂಭಕ್ಕೂ ಮುನ್ನವೆ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಕೊರಳಲ್ಲಿ ಹಾರ, ಕೈಯಲ್ಲಿ ಕೇಕ್ ಹಿಡಿದ ರಜತ್​ ಪತ್ನಿ ಅಕ್ಷಿತಾ.. ಈ ಖುಷಿಗೆ ಕಾರಣವೇನು?

publive-image

ಭಾರತದಲ್ಲಿ ಮೊದಲು ಬಿಗ್​ಬಾಸ್ ಹಿಂದಿಯಲ್ಲೇ ಆರಂಭಗೊಂಡಿದೆ. ಇದೀಗ ಹಿಂದಿಯಿಂದಲೇ ಅಂತ್ಯಗೊಳ್ಳುತ್ತಾ ಎಂಬ ಅನುಮಾನ ಮೂಡಿದೆ. ಹೌದು, ಇದಕ್ಕೆ ಮುಖ್ಯ ಕಾರಣ ಬಿಗ್​ಬಾಸ್ ಪ್ರೊಡಕ್ಷನ್ ಬನಿಜಯ್ ಏಷ್ಯಾ (ಎಂಡೋಮಲ್ ಶೈನ್) ಖಾಸಗಿ ವಾಹಿನಿಯ ಒಪ್ಪಂದದಿಂದ ಹೊರ ನಡೆದಿದೆ ಎಂದು ವರದಿಯಾಗಿದೆ. ಹಿಂದಿ, ಕನ್ನಡ ಸೇರಿದಂತೆ ಇತರ ಭಾಷೆಗಳ ಬಿಗ್​ಬಾಸ್ ಶೋ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಎಂಡೆಮೋಲ್ ಸಂಸ್ಥೆ ನಿರ್ವಹಿಸುತ್ತಿದೆ.

publive-image

ಎಂಡೆಮೋಲ್ ಸಂಸ್ಥೆ ನಿರ್ಮಾಣ ಮಾಡುವ ಬಿಗ್​ಬಾಸ್ ರಿಯಾಲಿಟಿ ಶೋವನ್ನು ಪ್ರಸಾರ ಮಾಡಲು ಖಾಸಗಿ ವಾಹಿನಿಯಾದ ಕಲರ್ಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೀಗ ಎಂಡೆಮೋಲ್ ಈ ಒಪ್ಪಂದಿಂದ ಹಿಂದೆ ಸರಿದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ಹಿಂದಿ ಬಿಗ್ ಬಾಸ್ ಶೋ ರದ್ದಾಗುವ ಸಾಧ್ಯತೆ ಹೆಚ್ಚಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಶೀಘ್ರದಲ್ಲೇ ಈ ಕುರಿತ ಅಧಿಕೃತ ಪ್ರಕಟಣೆಗಳು ಹೊರಬೀಳುವ ಸಾಧ್ಯತೆ ಇದೆ.

publive-image


">April 21, 2025

ಇನ್ನೂ, 11 ಸೀಸನ್​​ಗಳನ್ನು ಪೂರ್ಣಗೊಳಿಸಿದ ಕನ್ನಡ ಬಿಗ್​ಬಾಸ್ ಶೋಗೂ ಈ ಬಾರಿ ತೀವ್ರ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಈಗಾಗಲೇ ಬಿಗ್​ಬಾಸ್​ ಮುಂದಿನ ಶೋವನ್ನು ನಡೆಸಿಕೊಡುವುದಿಲ್ಲ ಅಂತ ಕಿಚ್ಚ ಸುದೀಪ್ ಹಿಂದೆ ಸರಿದಿದ್ದಾರೆ. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬಂದ ಶೋಗಳು ಇದುವರೆಗೆ ಟಿಆರ್‌ಪಿಯಲ್ಲಿ ಇಳಿಮುಖ ಕಂಡಿಲ್ಲ. ಆದರೆ ಮುಂದಿನ ಬಿಗ್​ಬಾಸ್ ಶೋ ಆರಂಭಕ್ಕೂ ಮೊದಲೇ ಸಂಕಷ್ಟಗಳು ಎದುರಾಗೋ ಸಾಧ್ಯತೆಗಳು ಇವೆ. ಇದರ ಜೊತೆಗೆ ಕನ್ನಡದಲ್ಲೂ ವಾಹಿನಿ ಬದಲಾದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment