newsfirstkannada.com

ಬಿಗ್​ಬಾಸ್​ ಮನೆಗೆ ಇಬ್ಬರು ಹೆಂಡತಿಯರ ಜೊತೆ ಎಂಟ್ರಿ ಕೊಟ್ಟ ಮುದ್ದಿನ ಗಂಡ; ಉಳಿದ ಸ್ಪರ್ಧಿಗಳು ಯಾರು?

Share :

Published June 21, 2024 at 9:32pm

Update June 21, 2024 at 9:33pm

    ಬಿಗ್​​ಬಾಸ್​ ಶುರುವಾಗೋ ಮುನ್ನವೇ ಸೆನ್ಸೇಷನ್ ಸೃಷ್ಟಿಸಿದ ದೊಡ್ಮನೆ ಸ್ಪರ್ಧಿಗಳು

    ಈ ಬಾರಿಯ ಬಿಗ್​ಬಾಸ್ ಸೀಸನ್​ 3ಗೆ ಯಾರೆಲ್ಲಾ ಸ್ಫರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ?

    ಇದೇ ಮೊದಲ ಬಾರಿಗೆ ಬಿಗ್​ಬಾಸ್​ ಮನೆಗೆ ವಿಶೇಷ ವ್ಯಕ್ತಿ, ವ್ಯಕ್ತಿತ್ವಗಳ ಪ್ರವೇಶ

ಬಹುನಿರೀಕ್ಷಿತ ರಿಯಾಲಿಟಿ ಶೋ ಹಿಂದಿಯ ಬಿಗ್​​ಬಾಸ್ ಒಟಿಟಿ ಸೀಸನ್​​ 3 ಆರಂಭವಾಗಿದೆ. ಈ ಶೋ ಶುರುವಾಗುವ ಮುನ್ನವೇ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.​ ಇಂದಿನಿಂದ ಬಿಗ್​ಬಾಸ್​ ಒಟಿಟಿ ಸೀಸನ್​ 3 ಶುರುವಾಗಿದೆ. ಬಾಲಿವುಡ್‌ ನಟ ಅನಿಲ್ ಕಪೂರ್ ಅವರು ಇದೇ ಬಾರಿಗೆ ಅವರು ‘ಬಿಗ್​ಬಾಸ್‌’ ಅಂಗಳಕ್ಕೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್‌ ಓಟಿಟಿ ಸೀಸನ್ 3ರ ಸಾರಥ್ಯವನ್ನು ಸಲ್ಮಾನ್ ಖಾನ ಬದಲು ಅನಿಲ್ ಕಪೂರ್ ವಹಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಗ್​​ಬಾಸ್​ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದವು. ವೀಕ್ಷಕರಿಗಂತೂ ಈ ಬಾರಿ ಯಾರೆಲ್ಲಾ ಬಿಗ್​ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಾರೆ ಅಂತ ಕುತೂಹಲ ಮನೆ ಮಾಡಿತ್ತು. ಆದರೆ ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ಇದೀಗ ಬಿಗ್​ಬಾಸ್ ಓಟಿಟಿ ಸೀಸನ್ 3ರ ಸ್ಪರ್ಧಿಗಳ ಲಿಸ್ಟ್ ಬಹಿರಂಗವಾಗಿದೆ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಈ ಬಾರಿ ಮನೆಯೊಳಗೆ ಕಳುಹಿಸಲು ಪ್ಲ್ಯಾನ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ‘ವಡಾ ಪಾವ್ ಹುಡುಗಿ’ ಎಂದು ಫೇಮಸ್ ಆಗಿರೋ ಚಂದ್ರಿಕಾ ದೀಕ್ಷಿತ್ ಈ ಬಾರಿ ಬಿಗ್ ಬಾಸ್‌ಗೆ ಶೋ ಕಾಲಿಡುತ್ತಿದ್ದಾರೆ. ಜೊತೆಗೆ ಸಾಯಿ ಕೇತನ್ ರಾವ್, ಸನಾ ಮಕ್ಬುಲ್ ಖಾನ್, ​​ಉತ್ತರ ಪ್ರದೇಶ ಮೂಲದ ಶಿವಾನಿ ಕುಮಾರಿ​, ಕೋಲ್ಕತ್ತಾ ಮೂಲದ ಪೌಲೋಮಿ ದಾಸ್​, ​ಬಾಲಿವುಡ್ ನಟ ರಣವೀರ್ ಶೋರೆ​, ​ಸನಾ ಸುಲ್ತಾನ್ ಎಂಟ್ರಿ ಕೊಡಲಿದ್ದಾರೆ.

ಇಬ್ಬರು ಹೆಂಡತಿಯರ ಜೊತೆಗೆ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಯೂಟ್ಯೂಬರ್

ಈ ಬಾರಿಯ ಬಿಗ್​ಬಾಸ್​ನಲ್ಲಿ ಯೂಟ್ಯೂಬರ್ ಅರ್ಮಾನ್ ಮಲಿಕ್ ಹಾಗೂ ಅವರ ಇಬ್ಬರು ಪತ್ನಿಯರಾದ ಕೃತಿಕಾ ಮಲಿಕ್ ಮತ್ತು ಪಾಯಲ್ ಮಲಿಕ್ ಎಂಟ್ರಿ ಕೊಡುತ್ತಿರುವುದು ವಿಶೇಷವಾಗಿದೆ. ಯೂಟ್ಯೂಬರ್ ಅರ್ಮಾನ್ ಮಲಿಕ್, ಅವರ ನಿಜವಾದ ಹೆಸರು ಸಂದೀಪ್ ಸಿಂಗ್. ಅರ್ಮಾನ್ ಮಲಿಕ್ ಅವರು ಯೂಟ್ಯೂಬ್​ನಲ್ಲಿ 7.67M ಫಾಲೋವರ್ಸ್​ ಅನ್ನು ಹೊಂದಿದ್ದಾರೆ. ಈ ಅರ್ಮಾನ್​ ಮಲಿಕ್​ ಕೇವಲ ಎರಡೂವರೆ ವರ್ಷಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅರ್ಮಾನ್ ಮಲಿಕ್ 2011ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು, ಅವರಿಗೆ ಚಿರಾಯು ಮಲಿಕ್ ಎಂಬ ಮಗು ಇದೆ. ಇದಾದ ಬಳಿಕ 2018ರಲ್ಲಿ ಅರ್ಮಾನ್ ಮಲಿಕ್ ಪತ್ನಿ ಪಾಯಲ್ ಅವರ ಆತ್ಮೀಯ ಸ್ನೇಹಿತೆ ಕೃತಿಕಾ ಮಲಿಕ್ ಮದುವೆಯಾದರು. ಮೊದ ಮೊದಲು ಪಾಯಲ್ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಪಾಯಲ್ ಅರ್ಮಾನ್‌ನೊಂದಿಗೆ ರಾಜಿ ಮಾಡಿಕೊಂಡರು ಮತ್ತು ಕೃತಿಕಾ ಅವರನ್ನು ಕುಟುಂಬಕ್ಕೆ ವೆಲ್​ಕಮ್​ ಮಾಡಿ ಸುಖ ಸಂಸಾರ ನಡೆಸುತ್ತಿದ್ದಾರೆ.

ಇದರಲ್ಲಿ ಇನ್ನೊಂದು ವಿಶೇಷ ಎಂದರೆ ಈ ಬಾರಿಗೆ ಬಿಗ್​ಬಾಸ್​ಗೆ ಹಿರಿಯ ಪತ್ರಕರ್ತ ದೀಪಕ್ ಚೌರಾಸಿಯಾ ಎಂಟ್ರಿ ಕೊಡುತ್ತಿದ್ದಾರೆ. ದೀಪಕ್ ಚೌರಾಸಿಯಾ ಅವರು ಆಜ್ ತಕ್ ಅನ್ನು ಸಹ-ಸ್ಥಾಪಿಸಿದರು. ಜುಲೈ 2004ರಲ್ಲಿ ಆಜ್ ತಕ್‌ಗೆ ಹಿಂದಿರುಗುವ ಮೊದಲು ಡಿಡಿ ನ್ಯೂಸ್‌ನಲ್ಲಿ ಸಲಹಾ ಸಂಪಾದಕರಾದರು. ನಂತರ ಅವರು ಸ್ಟಾರ್ ನ್ಯೂಸ್‌ಗೆ ಸೇರಿದರು. ಸದ್ಯ ಬಿಗ್​ಬಾಸ್​ ಮನೆಗೆ ಪ್ರವೇಶಿಸಿ ಯಾವ ರೀತಿಯಲ್ಲಿ ಟಾಸ್ಕ್​ಗಳನ್ನು ಆಡುತ್ತಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಮನೆಗೆ ಇಬ್ಬರು ಹೆಂಡತಿಯರ ಜೊತೆ ಎಂಟ್ರಿ ಕೊಟ್ಟ ಮುದ್ದಿನ ಗಂಡ; ಉಳಿದ ಸ್ಪರ್ಧಿಗಳು ಯಾರು?

https://newsfirstlive.com/wp-content/uploads/2024/06/bigg-boss-hinddi.jpg

Load More