Advertisment

ಕನಸಿನ ಮನೆಗೆ ಪ್ರವೇಶ ಮಾಡಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಫೋಟೋಸ್

author-image
Veena Gangani
Updated On
ಕನಸಿನ ಮನೆಗೆ ಪ್ರವೇಶ ಮಾಡಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಫೋಟೋಸ್
Advertisment
  • ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಸೋನು
  • ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್​ ಗೌಡ
  • ಹೊಸ ಹೊಸ ರೀಲ್ಸ್​ ಮೂಲಕವೇ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರೋ ಸೋನು ಗೌಡ

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್ ಮನೆಗೆ​ ಹೋಗಿದ್ದಾಗಲೂ ಸಖತ್​ ಸುದ್ದಿಯಲ್ಲಿದ್ದರು ಸೋನು ಗೌಡ. ಇದೀಗ ಸೋನು ಶ್ರೀನಿವಾಸ್ ಗೌಡ ಹೊಸ ಮನೆಗೆ ಪ್ರವೇಶ ಬೆಳೆಸಿದ್ದಾರೆ.

Advertisment

publive-image

ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್​ ಗೌಡ ಬಹಳ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಯಲ್ಲಿ ತಮ್ಮ ಹೊಸ ಮನೆ ಕಟ್ಟಿಸಿದ್ದಾರೆ.

publive-image

ಇನ್ನೂ ಹೊಸ ಮನೆಗೆ ಪ್ರವೇಶ ಮಾಡಿದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋಸ್​ ನೋಡಿದ ನೆಟ್ಟಿಗರು ಕಾಮೆಂಟ್ಸ್ ಮೂಲಕ ಸೋನು ಶ್ರೀನಿವಾಸ್ ಗೌಡ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

publive-image

ಮೊನ್ನೆಯಷ್ಟೇ ನಾನು ಸೋನು ಗೌಡ, ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನೀಸುತ್ತಿದೆ. ಹುಡುಗು ಯಾರು ಅಂತ ತಿಳಿದುಕೊಳ್ಳಬೇಕಾದರೇ ಕಾಮೆಂಟ್ಸ್ ಮಾಡಿ ಅಂತ ಹೇಳಿದ್ದರು. ಆದರೆ ಹುಡುಗ ಯಾರು, ಯಾವಾಗ ಮದುವೆ ಅಂತ ಸೋನು ಗೌಡ ಹೇಳಿಕೊಂಡಿಲ್ಲ. ಆದಷ್ಟು ಬೇಗ ಅದರ ಬಗ್ಗೆ ಕೂಡ ಅಪ್ಡೇಟ್ ಕೊಡುತ್ತೇನೆ ಅಂತ ಅವರೇ ಹೇಳಿಕೊಂಡಿದ್ದಾರೆ.

Advertisment

publive-image

ಸೋನು ಗೌಡ ಗೃಹ ಪ್ರವೇಶಕ್ಕೆ ಲಕ್ಷ್ಮೀ ನಿವಾಸ ಸೀರಿಯಲ್​ ಬಾಲನಟಿ ನಿಶಿತಾ ಹಾಗೂ ಅವರ ತಾಯಿ ಪ್ರಿಯಾ ಭಾಗಿಯಾಗಿದ್ದರು. ಜೊತೆಗೆ ಸೋನು ಗೌಡಗೆ ಸುಂದರವಾದ ವಾಲ್ ವಾಚ್ ಗಿಫ್ಟ್​ ಆಗಿ ನೀಡಿದ್ದಾರೆ. ಇದೇ ವಿಡಿಯೋವನ್ನು ಸೋನು ಗೌಡ ಯ್ಯೂಟೂಬ್ ಚಾನೆಲ್​​ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಹೊಸ ಹೊಸ ರೀಲ್ಸ್​ ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿ ಇರುತ್ತಾರೆ.

publive-image

Advertisment
Advertisment
Advertisment