/newsfirstlive-kannada/media/post_attachments/wp-content/uploads/2025/02/dhanraj-achar11.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರೇ, ಇನ್ನೂ ಕೆಲವರು ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ದೋಸ್ತಿಗಳ ಮಿಲನ.. ಧನರಾಜ್ ಆಚಾರ್ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್; ಏನಿದು ಸರ್‌ಪ್ರೈಸ್?
/newsfirstlive-kannada/media/post_attachments/wp-content/uploads/2025/02/dhanraj-achar9.jpg)
ಇನ್ನೂ, ಗಿಚ್ಚಿ ಗಿಲಿಗಿಲಿ ಮೂಲಕ ಫೇಮಸ್ ಆಗಿ ಬಿಗ್​ಬಾಸ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಧನರಾಜ್​ ಆಚಾರ್​ ಅವರು ಸದ್ಯ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar7.jpg)
ಇದರ ಮಧ್ಯೆ ಸರ್​ಪ್ರೈಸ್​ ಎಂಬಂತೆ ಧನರಾಜ್​ ಆಚಾರ್​ ಮನೆಗೆ ಬಿಗ್​ಬಾಸ್​ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಧನರಾಜ್ ಆಚಾರ್ ಮನೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಹೌದು, ಮಂಗಳೂರಿನ ಪುತ್ತೂರಿನಲ್ಲಿರುವ ಧನರಾಜ್ ಆಚಾರ್​ ಅವರ ಮನೆಗೆ ಸರ್​ಪ್ರೈಸ್​ ​ಎಂಬಂತೆ ತ್ರಿವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar6.jpg)
ಇದೇ ಮೊದಲ ಬಾರಿಗೆ ಧನರಾಜ್​ ಆಚಾರ್​ ಅವರ ಮನೆಗೆ ತ್ರಿವಿಕ್ರಮ್​ ಭೇಟಿ ಕೊಟ್ಟಿದ್ದಾರೆ. ಅಲ್ಲದೇ ಧನರಾಜ್ ಆಚಾರ್ ಅವರದ್ದು ದೊಡ್ಡ ಕುಟುಂಬ ನೋಡಿ ತ್ರಿವಿಕ್ರಮ್ ಫುಲ್ ಶಾಕ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar4.jpg)
ಅಲ್ಲದೇ ಕಮಲಜ್ಜಿ ಕುಟುಂಬದ ಎಲ್ಲಾ ಸದಸ್ಯರ ಜೊತೆ ಕಾಲ ಕಳೆದ ತ್ರಿವಿಕ್ರಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar5.jpg)
ತ್ರಿವಿಕ್ರಮ್ ಕಂಡು ಕಮಲಜ್ಜಿ ಕುಟುಂಬದ ಸದಸ್ಯರು ಸಂತೋಷವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಫೋಟೋಗೆ ಸಖತ್ ಪೋಸ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar2.jpg)
ತ್ರಿವಿಕ್ರಮ್ ಆಗಮನದ ಬಗ್ಗೆ ಖುಷಿ ಹಂಚಿಕೊಂಡಿರುವ ಧನರಾಜ್ ಅವರು, ನಮ್ಮ ಮನೆಯಲ್ಲಿ ಮಾಸ್ಟರ್ ತ್ರಿವಿಕ್ರಮ್. ಲವ್ ಯು ಮಾಸ್ಟರ್ ನೀವು ಬಂದಿದ್ದು ಖುಷಿ, ಖುಷಿ, ಖುಷಿ ಅಷ್ಟೇ. ಕಮಲಜ್ಜಿ ಕುಟುಂಬ ಮತ್ತು ವಿಕ್ಕಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar10.jpg)
ಧನರಾಜ್ ಆಚಾರ್ ಪ್ರೀತಿಗೆ ಮಾರು ಹೋದ ತ್ರಿವಿಕ್ರಮ್ ಅವರು ಕೂಡ ಕಮಲಜ್ಜಿ ಕುಟುಂಬದ ಬಗ್ಗೆ ಮಧುರವಾದ ಮಾತುಗಳನ್ನ ಪೋಸ್ಟ್ ಮಾಡಿದ್ದಾರೆ. ಮನೆಯೇ ಮಂತ್ರಾಲಯ ಅಂತಾರೆ.
/newsfirstlive-kannada/media/post_attachments/wp-content/uploads/2025/02/dhanraj-achar.jpg)
ಆದರೆ ಈ ಮಂತ್ರಾಲಯದಲ್ಲಿ ಹಲವು ಮುಗ್ಧ ಮನಸಿನ ದೈವವನ್ನು ಕಂಡೆ. ಥ್ಯಾಂಕ್ಯು ಮಂಗಳೂರು ಹುಲಿ ಎಂದು ಧನರಾಜ್ ಆಚಾರ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/02/dhanraj-achar8.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us