ನಮ್ರತಾ ಮೋಸ ಮಾಡಿದ್ದಾರೆ ಅನ್ನೋ ವಿಚಾರಕ್ಕೆ ಸ್ನೇಹಿತ್ ಸ್ಪಷ್ಟನೆ
ಕಿಚ್ಚನ ಪಂಚಾಯ್ತಿಯಲ್ಲಿ ಅಸಲಿ ಸತ್ಯ ಬಾಯ್ಬಿಟ್ಟಿದ್ದ ಬಿಗ್ಬಾಸ್ ಸ್ನೇಹಿತ್
ಬಿಗ್ಬಾಸ್ ಸ್ಪರ್ಧಿ ಸ್ನೇಹಿತ್ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಮುಕ್ತಾಯಗೊಳ್ಳಲು ಎರಡು ವಾರಗಳು ಬಾಕಿ ಉಳಿದಿವೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದ ಸ್ನೇಹಿತ್ ಅವರು ನಮ್ರತಾ ಗೌಡ ಬಳಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಇದಾದ ಬಳಿಕ ನಮ್ರತಾ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು, ನಮ್ರತಾ ಮೋಸ ಮಾಡಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಇದೇ ವಿಚಾರದ ಬಗ್ಗೆ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಸ್ನೇಹಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಸ್ನೇಹಿತ್ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?
ಹಾಯ್.. ನಿಮ್ಮೆಲ್ಲರಲ್ಲೂ ಒಂದು ವಿನಂತಿ. ನಮ್ರತಾ ಅವರು ನನಗೆ ಮೋಸ ಮಾಡಿದ್ದಾರೆ ಎಂಬ ನ್ಯಾರೇಟಿವ್ ಅನ್ನು ನಿಲ್ಲಿಸಿ. ನನಗೆ ನಿನ್ನ ಮೇಲೆ ಫೀಲಿಂಗ್ಸ್ ಇದೆ ಅಂತಾ ನನಗೆ ಯಾವತ್ತು ಹೇಳಿಲ್ಲ. ಫೀಲಿಂಗ್ಸ್ ಏನೇ ಇದ್ದಿದ್ದರು ಅದು ಒಂದು ಸೈಡ್ ಮಾತ್ರ. ಟ್ರೋಲ್ಸ್, ಮಿಮ್ಸ್ ಮಾಡುತ್ತಿರುವುದರಿಂದ ನಮ್ರತಾ ಅವರ ಕುಟುಂಬದ ಜೊತೆಗೆ ನನಗೂ ತುಂಬಾ ಬೇಸರ ಆಗುತ್ತಿದೆ. ಇದರಿಂದ ಅವರ ನಡವಳಿಕೆ ಮೇಲೆ ಭಾರೀ ಪರಿಣಾಮ ಬೀರಲಿದೆ. ನಮ್ರತಾ ಅವರು ನನಗೆ ಆ ಮನೆಯಲ್ಲಿ ಫಸ್ಟ್ ಫ್ರೆಂಡ್ ಆಗಿದ್ದಾರೆ. ಪ್ರೋಟೀನ್ ಕೊಟ್ಟಿದ್ದರು. ನನಗೆ ಅವರ ಊಟ ಕೊಟ್ಟಿದ್ದರು. ನನ್ನ ವಿನಯ್ ಹಾಗೂ ನಮ್ರತಾ ಮಧ್ಯೆ ಹೇಗೆ ಬಾಂಡಿಂಗ್ ಇದೇಯೋ. ಅದೇ ರೀತಿ ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೇಲು ಅದೇ ರೀತಿ ಬಾಂಡಿಂಗ್ ಇರುತ್ತದೆ.
-ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ಸ್ನೇಹಿತ್
ಇನ್ನು ಈ ಹಿಂದೆ ಕಿಚ್ಚ ಸುದೀಪ್ ಮುಂದೆಯೇ ಸ್ನೇಹಿತ್ ಅವರು ರಿಯಲ್ ಫೀಲಿಂಗ್ಸ್ ಬಗ್ಗೆ ಹೇಳಿದ್ದರು. ನನಗೆ ನಮ್ರತಾ ಮೇಲೆ ರಿಯಲ್ ಫೀಲಿಂಗ್ಸ್ ಇದೆ. ಇದನ್ನು ನಾನು ಅವರ ಹತ್ತಿರ ಡೈರೆಕ್ಟ್ ಹೇಳಿದ್ದೀನಿ. ಅವರು ಅದಕ್ಕೆ ಇದೆಲ್ಲಾ ಆಗೋಲ್ಲ ಅಂತ ಸೀದಾ ಹೇಳಿದ್ದಾರೆ. ಮನೆಯಿಂದ ಆಚೆಗೂ ಇದಕ್ಕೆಲ್ಲ ಆಸ್ಪದವಿಲ್ಲ ಅಂತಾ ಹೇಳಿದ್ದಾರೆ. ಅದಕ್ಕೆ ನಾನು ಸುಮ್ಮನೆ ಆಗಿದ್ದೀನಿ. ಇಲ್ಲಿ ಅವರು ನನ್ನ ಬೆಸ್ಟ್ ಫ್ರೆಂಡ್ ಅಂತಾ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ