newsfirstkannada.com

ಬಿಗ್​ಬಾಸ್ ಸೀಸನ್​ 10​ ಮುಕ್ತಾಯ ಬಳಿಕವೂ ಸುದ್ದಿಯಲ್ಲಿದ್ದಾರೆ ಈ ಸ್ಪರ್ಧಿಗಳು; ಕಾರಣವೇನು?

Share :

Published March 22, 2024 at 6:23am

  ಬಿಗ್​ಬಾಸ್​ ಮುಗಿದ ಬಳಿಕವೂ ಸ್ಪರ್ಧಿಗಳ ಮಧ್ಯೆ ವಾದ-ಪ್ರತಿವಾದ ಜೋರು

  ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ ಬಿಗ್​ಬಾಸ್​ ಸ್ಪರ್ಧಿಗಳು

  ಬಿಗ್​ಬಾಸ್​ ಸೀಸನ್ 10 ಮುಕ್ತಾಯಗೊಂಡ ಈಗಾಗಲೇ ಎರಡು ತಿಂಗಳಾಗಿದೆ

ಕನ್ನಡದ ಬಿಗ್​ ರಿಯಾಲಿಟಿ ಶೊ ಬಿಗ್​ಬಾಸ್​ ಸೀಸನ್-10 ಮುಕ್ತಾಯಗೊಂಡ ಈಗಾಗಲೇ ಎರಡು ತಿಂಗಳಾಯ್ತು. ಬಿಗ್​ಬಾಸ್​ ಮುಗಿದರೂ ಕೂಡ ಅದರ ಟಾಕ್ಸ್​​ ಕಿರುತೆರೆಯಲ್ಲಿ ಅಂಗಳದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾನೆ ಇದೆ. ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳು ಈ ಬಾರಿ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಫಾಲೋಯಿಂಗ್​ನ ಗಳಿಸಿಕೊಂಡಿದ್ದಾರೆ. ಈ ಬಾರಿ ಫೈನಲಿಸ್ಟ್ ಸ್ಪರ್ಧಿಗಳಿಗಂತೂ ಅಭಿಮಾನಿಗಳ ಬಳಗ ದೊಡ್ಡದೇ ಇದೆ.

ಬಿಗ್​ಬಾಸ್​ ಸೀಸನ್ 10 ಅಂದ್ರೆ ಥಟ್​ ಅಂತಾ ನೆನಪಾಗುವುದು ಸಂಗೀತಾ-ಕಾರ್ತಿಕ್ ಹಾಗೂ ವಿನಯ್. ಸದ್ಯ ಸಂಗೀತಾ ಹಾಗೂ ಕಾರ್ತಿಕ್ ದೊಡ್ಮನೆಯಿಂದ ಆಚೆ ಎಲ್ಲೂ ವೈಯಕ್ತಿಕವಾಗಿ ಭೇಟಿ ಮಾಡೇ ಇಲ್ಲ. ಕಲರ್ಸ್ ವಾಹಿನಿಯ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದು, ಬಿಟ್ಟರೆ ಮತ್ತೇನೂ ಇಲ್ಲವೇ ಇಲ್ಲ. ಎಲ್ಲರಿಗೂ ಗೊತ್ತಿರೋ ಸತ್ಯ ಏನಂದ್ರೆ, ಇವರಿಬ್ಬರು ಕಾಂಟ್ಯಾಕ್ಟ್‌ನಲ್ಲಿಯೇ ಇಲ್ಲ. ಕಾಂಟ್ಯಾಕ್ಟ್ ನಂಬರ್ ಇದ್ಯೋ ಇಲ್ವೋ ಅದು ಕೂಡ ಗೊತ್ತಿಲ್ಲ. ಇವರಿಬ್ಬರ ನಡುವೆ ಹೇಗೆ ಬಾಂಡಿಂಗ್ ಇಲ್ವೋ ಇವರ ಅಭಿಮಾನಿಗಳ ನಡುವೆ ಏನೇನೂ ಇಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಇವತ್ತಿಗೂ ಇವರ ಫ್ಯಾನ್ಸ್‌ ವಾರ್‌ ನಿಂತಿಲ್ಲ ಅನ್ನೋದು ಪರಮ ಸತ್ಯ.

ಅವರಿಗೆ ಇವ್ರು ಟಾಂಗ್ ಕೊಡೋದು, ಇವರಿಗೆ ಅವರು ಟಾಂಗ್ ಕೊಡೋದು ನಿಂತೇ ಇಲ್ಲ. ಹಲವು ರೀಲ್ಸ್‌ಗಳು ಇವರ ಫ್ಯಾನ್ಸ್‌ ವಾರ್‌ಗೆ ಸಾಕ್ಷಿಯಾಗಿವೆ. ಬಿಗ್‌ಬಾಸ್‌ನಿಂದ ಹೊರ ಬಂದ್ಮೇಲೆ ಸಂಗೀತಾ ನಡೆಸಿದ ಫ್ಯಾನ್ಸ್‌ ಮೀಟ್‌ ಕಾರ್ಯಕ್ರಮಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟರು. ಸಂಗೀತಾ ಫ್ಯಾನ್ಸ್ ಮೀಟ್ ಅಪ್ ನಂತರದಲ್ಲಿ ಕಾರ್ತಿಕ್​ ಚಿಕ್ಕ ಫ್ಯಾನ್ಸ್ ಮೀಟ್ ಅರೇಂಜ್ಡ್ ಮಾಡಿದ್ರು. ಇದನ್ನು ಗಮನಿಸಿದ ಸಂಗೀತಾ ಅಭಿಮಾನಿಗಳು ಕಾರ್ತಿಕ್ ಅವರ ವಿರುದ್ಧ ಮಾತಾಡೋಕೆ ಶುರು ಮಾಡಿದ್ರು. ಇದೊಂದೇ ಅಲ್ಲ, ಅವಕಾಶ ಸಿಕ್ಕಾಗೆಲ್ಲಾ ಟಾಂಗ್‌ಗಳು ಪುಂಖಾನುಪುಂಖವಾಗಿ ನಡೀತಾನೇ ಇದೆ. ಹೀಗೆ ಈ ಇಬ್ಬರ ಅಭಿಮಾನಿಗಳು ಬಿಗ್​ಬಾಸ್​ ಮುಗಿದ ಬಳಿಕವೂ ವಾದ ಪ್ರತಿವಾದದಲ್ಲಿ ತೊಡಗಿದ್ದಾರೆ.

ಕಾರ್ತಿಕ್, ಏನೇ ಮಾಡಿದ್ರು ಅಥವಾ ಸಂಗೀತಾ ಎಲ್ಲೇ ಹೋದ್ರು, ಒಂದಕ್ಕೊಂದಿ ತೂಗು ಹಾಕಿ ಇವತ್ತಿಗೂ ಇಬ್ಬರ ಅಭಿಮಾನಿಗಳ ವಾರ್ ನಡೀತಿದೆ. ಈ ವಿಷಯದ ಬಗ್ಗೆ ಕಾರ್ತಿಕ್ -ಸಂಗೀತಾ ಇಬ್ಬರು ಕೂಡ ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಫ್ಯಾನ್ಸ್ ವಾರ್​ ಬಗ್ಗೆ ಅಡ್ರೆಸ್​ ಮಾಡಿದ್ರು. ಫ್ಯಾನ್ಸ್ ವಾರ್‌ ಬೇಡ ಅಂತಾ ಹಲವು ಬಾರಿ ಹೇಳಿದ್ದರು. ಆದರೂ ಅಭಿಮಾನಿಗಳೂ ಪರ-ವಿರೋಧಗಳ ಬಗ್ಗೆ ಚರ್ಚೆ ಮಾಡ್ತಾನೆ ಇರ್ತಾರೆ. ಅಭಿಮಾನ ಇರಬೇಕು. ದುರಾಭಿಮಾನ ಇರಬಾರದು. ತಮಗೆ ಇಷ್ಟವಾಗೋರ ಪರ ನಿಲ್ಲೋದು ತಪ್ಪಲ್ಲ. ಆದ್ರೆ, ಇನ್ನೊಬ್ಬರ ಅಭಿಮಾನಿಗಳಿಗೆ ಹರ್ಟ್ ಮಾಡೋದು ಕೂಡ ಸಮಂಜಸವಲ್ಲ. ಯಾರು ಮೊದಲು ಮಾಡಿದರೂ, ಯಾರು ನಂತರ ಮಾಡಿದರೂ ಅನ್ನೋದಕ್ಕಿಂತ, ಸೌಹಾರ್ದತೆ ತುಂಬಾ ಇಂಪಾರ್ಟ್‌ಟೆಂಟ್‌. ಸ್ಟಾರ್‌ವಾರು ಎಲ್ಲಾ ಯಾಕೆ ಬೇಕು! ಅಭಿಮಾನವೊಂದಿದ್ರೆ ಸಾಕು! ಅಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್ ಸೀಸನ್​ 10​ ಮುಕ್ತಾಯ ಬಳಿಕವೂ ಸುದ್ದಿಯಲ್ಲಿದ್ದಾರೆ ಈ ಸ್ಪರ್ಧಿಗಳು; ಕಾರಣವೇನು?

https://newsfirstlive.com/wp-content/uploads/2024/03/bigg-boss-2024-03-21T225811.705.jpg

Load More