/newsfirstlive-kannada/media/post_attachments/wp-content/uploads/2023/12/bigg-boss-2023-12-21T170102.623.jpg)
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಮೊಬೈಲ್ ಬಳಕೆ ಮಾಡಲಾಗುತ್ತಿದ್ಯಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಎದುರಾಗಿದೆ. ಬಿಗ್ಬಾಸ್ ಕೊಟ್ಟ ಟಾಸ್ಕ್ ವಿಚಾರಕ್ಕೆ ಸಂಗೀತಾ ಅವರು ಮೇಕಪ್ ರೂಮ್ನಲ್ಲಿ ನಮ್ರತಾ ಗೌಡ ಜೊತೆ ಮಾತನಾಡುತ್ತಿರುತ್ತಾರೆ. ಆಗ ಸಂಗೀತಾ ಅವರ ಪಕ್ಕದ ಗೋಡೆಯಲ್ಲಿ ಚಾರ್ಜರ್‌ವೊಂದು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ.
ಹೌದು, ಬಿಗ್ಬಾಸ್ ಎಪಿಸೋಡ್ನಲ್ಲಿ ಮೊಬೈಲ್ ಚಾರ್ಜರ್ನಂತೆ ಕಾಣುವ ಚಾರ್ಜರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಿಗ್ಬಾಸ್ ನಿಯಮದ ಪ್ರಕಾರ ಬಿಗ್ ಮನೆಯಲ್ಲಿ ಮೊಬೈಲ್, ವಾಚ್ ಬಳಕೆ ಮಾಡುವಂತಿಲ್ಲ. ಇಷ್ಟಾದರೂ ಬಿಗ್ಬಾಸ್ ಸ್ಪರ್ಧಿಗಳು ಮೊಬೈಲ್ ಬಳಕೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮನೆಮಾಡಿದೆ.
ಇದನ್ನು ಓದಿ: BIGG BOSS: ಕಾರ್ತಿಕ್ನನ್ನು 10 ರೂಪಾಯಿಗೂ ಖರೀದಿ ಮಾಡಲಿಲ್ಲ; ತನಿಷಾ, ಸಂಗೀತಾ ಕೊಟ್ಟ ಕಾರಣವೇನು?
ಯಾವುದೇ ಭಾಷೆಯ ಬಿಗ್ಬಾಸ್ ಆಗಲಿ ಅಲ್ಲಿ ಇರುವುದು ಒಂದೇ ರೂಲ್ಸ್. ಮನೆಯಿಂದ ಹೊರಗಡೆ ನಡೆದ ವಿಷಯದ ಬಗ್ಗೆ ಬಿಗ್ಬಾಸ್ ಸ್ಪರ್ಧಿಗಳಿಗೆ ಗೊತ್ತಾಗಬಾರದು. ಸಮಯ ಎಷ್ಟು ಎನ್ನೋದು ಕೂಡ ಗೊತ್ತಾಗಬಾರದು. ಈ ಜಗತ್ತಿನ ಸಂಪರ್ಕವೇ ಇಲ್ಲದ ಹಾಗೇ ಬಿಗ್ಬಾಸ್ ಮನೆಗೆ ಹೋದ ಸ್ಪರ್ಧಿಗಳು ಸೆರೆವಾಸ ಅನುಭವಿಸಬೇಕು ಎಂಬುವುದು ಬಿಗ್ಬಾಸ್ ಕಾರ್ಯಕ್ರಮದ ನಿಯಮ. ಹೀಗಾಗಿ ಮೊಬೈಲ್ ಫೋನ್, ವಾಚ್ ಇನ್ನಿತರ ವಸ್ತುಗಳನ್ನು ಬಳಕೆ ಮಾಡುವುದಕ್ಕೆ ಅವಕಾಶ ಇರೋದಿಲ್ಲ. ಇದರ ನಡುವೆಯೂ ಹೀಗೆ ಮೊಬೈಲ್ ಚಾರ್ಜರ್ ಕ್ಯಾಮೆರ ಕಣ್ಣಿಗೆ ಬಿದ್ದಿದ್ದರಿಂದ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ಕೆಲವರು ಈ ಫೋಟೋ ನೋಡಿ ಟ್ರಿಮ್ಮರ್ ಚಾರ್ಜರ್ ಇರಬಹುದು ಎಂದು ಕಾಮೆಂಟ್ ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ