ಈ ಬಾರಿ ಕನ್ನಡ ಬಿಗ್​ಬಾಸ್​​ಗೆ ಹೋಗೋರು ಯಾರು..? ಲಿಸ್ಟ್​ ಔಟ್​​!

author-image
Veena Gangani
Updated On
ಈ ಬಾರಿ ಕನ್ನಡ ಬಿಗ್​ಬಾಸ್​​ಗೆ ಹೋಗೋರು ಯಾರು..? ಲಿಸ್ಟ್​ ಔಟ್​​!
Advertisment
  • ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ ಈ ಸ್ಪರ್ಧಿಗಳ ಹೆಸರು
  • ಬಿಗ್​ಬಾಸ್​​ ಸೀಸನ್​​ 10ಕ್ಕೆ ಕಿರುತೆರೆ, ಹಿರಿತೆರೆ, ಕ್ರಿಕೆಟ್​ನಿಂದ ಆಯ್ದುಕೊಳ್ಳಲಾಗಿದೆ
  • ಪ್ರೇಕ್ಷಕರಲ್ಲಿ ಮತ್ತಷ್ಟು ಕ್ಯೂರಾಸಿಟಿ ಹೆಚ್ಚಿಸಿದ ಬಹುನಿರೀಕ್ಷಿತ ಬಿಗ್​​ಬಾಸ್​​​​ ಸೀಸನ್ 10!​​​

ಕನ್ನಡ ಕಿರುತೆರೆಯ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಕೌಂಟ್ ಡೌನ್​ ಶುರುವಾಗಿದೆ. ಹೀಗಾಗಿ ಬಿಗ್​ಬಾಸ್​ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಬಿಗ್​ಬಾಸ್​ ಸೀಸನ್​ 10ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೊಂದು ವಾರದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

publive-image

ಆದರೆ ಸದ್ಯ, ಒಂದಿಷ್ಟು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಬಿಗ್​ಬಾಸ್​ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ​ಇತಿಹಾಸದಲ್ಲೇ ಹೊಸ ಪ್ರಯತ್ನ ಮುಂದಾಗಿದೆ ನಮ್ಮ ಕನ್ನಡದ ಬಿಗ್​ಬಾಸ್​. ಅದೇ ಚಾರ್ಲಿ ಎಂಟ್ರಿ. ಅಂದ್ಹಾಗೆ, ಚಾರ್ಲಿ ಫಸ್ಟ್​ ಕಂಟೆಸ್ಟಂಟ್​ ಅನ್ನೋದು ಕನ್ಫರ್ಮ್ ಆಗಿದೆ.​

publive-image

ಇದನ್ನು ಓದಿ: Bihar Caste Survey: ಜಾತಿಗಣತಿ ರಿಲೀಸ್ ಮಾಡಿದ ಬಿಹಾರ ಸರ್ಕಾರ.. ಒಟ್ಟು 13 ಕೋಟಿ ಜನಸಂಖ್ಯೆಯಲ್ಲಿ OBC ಶೇ.63, ಜನರಲ್ ಶೇ.16

ಇನ್ನು ಉಳಿದ 15 ಸ್ಪರ್ಧಿಗಳಲ್ಲಿ ಕಿರುತೆರೆ, ಹಿರಿತೆರೆ, ಕ್ರಿಕೆಟ್​ನಿಂದ ಆಯ್ದುಕೊಳ್ಳಲಾಗಿದೆ. ಈ ಸಂಭಾವ್ಯ ಪಟ್ಟಿಯಲ್ಲಿ ಗಟ್ಟಿಮೇಳ ಖ್ಯಾತಿಯ ನಟಿ ಸ್ವಾತಿ, ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಶಿವರಾಜ್​ ಕೆ.ಆರ್ ​ಪೇಟೆ, ನಟಿ ರೂಪಾ ರಾಯಪ್ಪ, ನಟ ಸುನೀಲ್​ ರಾವ್​, ಕ್ರಿಕೆಟರ್​​​​ ವಿನಯ್ ​ಕುಮಾರ್​, ಹಾಸ್ಯ ನಟ ದಿವಗಂತ ಬುಲೆಟ್​ ಪ್ರಕಾಶ್ ಮಗ ರಕ್ಷಕ್​, ಫಿಮೇಲ್​ ಱಪರ್​​ ಇಶಾನಿ, ಮಿಮಿಕ್ರಿ ಆರ್ಟಿಸ್ಟ್​ ಗೋಪಿ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್​ ಧ್ರುವ ಹಾಗೂ ನಾಗಿಣಿ ಖ್ಯಾತಿಯ ನಮ್ರತಾ ಗೌಡ ಈ ಲಿಸ್ಟ್​ನಲ್ಲಿ ಹೈಲೈಟ್ಸ್​.

publive-image

ಈ ಬಾರಿ ಬಿಗ್​ಬಾಸ್​ ಸೀಸನ್ 10 ಸಖತ್​ ಇಂಟ್ರಸ್ಟಿಂಗ್​ ಅನಿಸುತ್ತಿದೆ. ಚಾರ್ಲಿನೇ ಮೇನ್​ ಅಟ್ರ್ಯಾಕ್ಷನ್​. ಚಾರ್ಲಿ ಎಂಟ್ರಿ ಬಿಗ್​ಬಾಸ್​ ಪ್ರೇಕ್ಷಕರ ಕ್ಯೂರಾಸಿಟಿ ಹೆಚ್ಚಿಸಿದೆ. ಒಟ್ಟಿನಲ್ಲಿ ಇದೇ ಅಕ್ಟೋಬರ್​ 8ರಂದು ಬಿಗ್​ಬಾಸ್​ ಗ್ರಾಂಡ್​ ಆಗಿ ಎಂಟ್ರಿ ಕೊಡಲು ಭರ್ಜರಿ ತಯಾರಿ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment