ಬಿಗ್ಬಾಸ್ ಮೂಲಕ ಅತಿ ಹೆಚ್ಚು ಫ್ಯಾನ್ಸ್ ಗಳಿಸಿಕೊಂಡ ಕಾರ್ತಿಕ್ ಮಹೇಶ್
ಮೊನ್ನೆಯಷ್ಟೇ ಮುದ್ದಾದ ಅಳಿಯನಿಗೆ ನಾಮಕರಣ ಮಾಡಿದ್ದ ನಟ ಕಾರ್ತಿಕ್
ಮನೆ ಮಂದಿಗೆ ತುಂಬಾನೆ ಇಷ್ಟ ಕಾರ್ತಿಕ್ ಮಹೇಶ್ ಅವರ ಮುದ್ದಾದ ಪಾರ್ಥ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಹೆಚ್ಚಾಗಿ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮೇಲೆ ಏನು ಮಾಡ್ತಿದ್ದಾರೆ ಅಂತ ಅಭಿಮಾನಿಗಳು ಯೋಚನೆ ಮಾಡುತ್ತಾ ಇರುತ್ತಾರೆ.
ಇದನ್ನೂ ಓದಿ: ನಟ ಕಾರ್ತಿಕ್ ಮಹೇಶ್ ಮನೆಯಲ್ಲಿ ಸಂಭ್ರಮ; ಸಂತಸದಲ್ಲಿ ತೇಲಾಡಿದ ಬಿಗ್ಬಾಸ್ ವಿನ್ನರ್
ಸಿನಿಮಾಗಳ ಮೂಲಕ ಮಿಂಚೋಕೆ ತಯಾರಿ ಮಾಡಿಕೊಳ್ತಿದ್ದಾರೆ ನಟ ಕಾರ್ತಿಕ್ ಮಹೇಶ್. ಈ ನಡುವೆ ಮುದ್ದಾದ ಅಳಿಯನಿಗೆ ಈಗಿನಿಂದಲೇ ನೀತಿ ಪಾಠ ಹೇಳಲು ಶುರು ಮಾಡಿದ್ದಾರೆ ಕಾರ್ತಿಕ್ ಮಹೇಶ್. ಕಾರ್ತಿಕ್ ಬಿಗ್ಬಾಸ್ ಮನೆಯಲ್ಲಿದ್ದಾಗ ತಂಗಿಗೆ ಮಗು ಬಗ್ಗೆಯೇ ಹೆಚ್ಚಾಗಿ ಮಾತಾಡ್ತಿದ್ದರು. ಆ ಪುಟಾಣಿ ದೊಡ್ಡದಾಗಿದ್ದು, ಕಾರ್ತಿಕ್ ಅವರು ತಮ್ಮ ಅತ್ಯಮೂಲ್ಯವಾದ ಸಮಯವನ್ನು ಮುದ್ದಿನ ಅಳಿಯನಿಗಾಗಿ ಮಿಸಲಿಟ್ಟಿದ್ದಾರೆ. ಮೊನ್ನೆಯಷ್ಟೇ ತಮ್ಮ ತಂಗಿಯ ಮಗನ ನಾಮಕರಣ ಸಮಾರಂಭ ಮಾಡಿದ್ರು. ಮುದ್ದಾದ ಅಳಿಯನಿಗೆ ಪಾರ್ಥ ಎಂದು ಹೆಸರು ಇಟ್ಟಿದ್ದರು.
View this post on Instagram
ಅಳಿಯನ ನಾಮಕರಣ ಸಮಾರಂಭದಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿಗಳು ಭಾಗಿಯಾಗಿ ಆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ರು. ಇದೀಗ ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಳಿಯನ ಬಗ್ಗೆ ಒಂದೇ ಸಾಲಿನಲ್ಲಿ ನೂರೆಂಟು ಅರ್ಥ ಬರುವ ಹಾಗೇ ಬರೆದುಕೊಂಡಿದ್ದಾರೆ. ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡು ಎಂದಿಗೂ ನಿನ್ನ ಗುರಿ ತಪ್ಪದಿರು “ಪಾರ್ಥ” ನಿನ್ನ ಸಾರಥಿ ನಾನಿರುವೆ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ