/newsfirstlive-kannada/media/post_attachments/wp-content/uploads/2024/08/karthik-mahesh2.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 10 ವಿನ್ನರ್​ ಕಾರ್ತಿಕ್​ ಮಹೇಶ್​ ನಿವಾಸದಲ್ಲಿ ಸಂಭ್ರಮ ಮನೆಮಾಡಿದೆ. ತಮ್ಮ ಮುದ್ದಾದ ಅಳಿಯನ ನಾಮಕರಣದಲ್ಲಿ ನಟ ಕಾರ್ತಿಕ್​ ಮಹೇಶ್​ ಲಕಲಕ ಮಿಂಚಿದ್ದಾರೆ. ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಅವರು ಸದ್ಯ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/karthik-mahesh1.jpg)
ಇದರ ಮಧ್ಯೆ ಮೊನ್ನೆ ಕಾರ್ತಿಕ್​ ಮಹೇಶ್​ ಅವರ ಮುದ್ದಾದ ಅಳಿಯನಿಗೆ ಹೆಸರಿಡುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಕಾರ್ತಿಕ್​ ಮಹೇಶ್ ತಂಗಿ ತೇಜಸ್ವಿನಿ ಮಹೇಶ್ ಮುದ್ದಾದ ಮಗನಿಗೆ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ತಾರೆಯರು ಭಾಗಿಯಾಗಿದ್ದರು.
/newsfirstlive-kannada/media/post_attachments/wp-content/uploads/2024/08/karthik-mahesh3.jpg)
ನಮ್ರತಾ ಗೌಡ, ತನಿಷಾ ಕುಪ್ಪಂಡ, ಱಪರ್ ಇಶಾನಿ, ನಿರಂಜನ್ ದೇಶಪಾಂಡೆ ದಂಪತಿ, ಅನುಪಮಾ ಗೌಡ, ನೀತು ವನಜಾಕ್ಷಿ, ನೇಹಾ ಗೌಡ, ಕಿಶನ್ ಬಿಳಗಲಿ, ಕಿರಿಕ್ ಕೀರ್ತಿ, ಸತ್ಯ ಸೀರಿಯಲ್​ ನಟ ಸಾಗರ್ ಬಿಳಿಗೌಡ ಹಾಗೂ ಪತ್ನಿ ಸಿರಿ, ಗೀತಾ ಸೀರಿಯಲ್​ ನಟಿ ಭವ್ಯಾ ಗೌಡ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು.
/newsfirstlive-kannada/media/post_attachments/wp-content/uploads/2024/08/karthik-mahesh-3.jpg)
ಇದೇ ಫೋಟೋಗಳನ್ನು ಕಿರುತೆರೆ ನಟ ಕಿಶನ್ ಬಿಳಗಲಿ ಅವರು ತಮ್ಮ ಇನ್​ಸ್ಟಾಗ್ರಾಮ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಕಾರ್ತಿಕ್​ ಮಹೇಶ್​ ಅಳಿಯನಿಗೆ ಪಾರ್ಥ ಎಂದು ಹೆಸರನ್ನು ಇಡಲಾಗಿದೆ. ಕಿಚ್ಚ ಸುದೀಪ್​ ಅವರ ಅಭಿಮಾನಿಯಾಗಿರೋ ಕಾರ್ತಿಕ್​ ಮಹೇಶ್​ ಅಳಿಯನಿಗೆ ಪಾರ್ಥ ಎಂದು ಹೆಸರು ಇಟ್ಟಿರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us