Advertisment

7 ಕೋಟಿ ಪಂಗನಾಮ ಹಾಕಿದ್ದ ಆರೋಪದಲ್ಲಿ ಜೈಲು ಸೇರಿದ್ದ ಚೈತ್ರಾ; ಬಿಗ್​​ಬಾಸ್​​ ಮನೆಗೆ ಖಡಕ್ ಎಂಟ್ರಿ!

author-image
Veena Gangani
Updated On
BIGG BOSS ಮನೆಗೆ ಎಂಟ್ರಿ ಕೊಟ್ಟಾಯ್ತು ಈ 4 ಕಂಟೆಸ್ಟೆಂಟ್ಸ್​; ಮುಂದೆ ಇದೆ ನಿಜವಾದ ಅಸಲಿ ಆಟ
Advertisment
  • ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿದ್ದ ಚೈತ್ರಾ
  • ಈ ಬಾರಿಯ ಬಿಗ್​ಬಾಸ್​ಗೆ ಬಂದ ಚೈತ್ರಾ ಕುಂದಾಪುರ
  • ಬಿಜೆಪಿ ಟಿಕೆಟ್ ಕೊಡಿಸ್ತೇನೆ ಅಂತ ಜೈಲು ಸೇರಿದ್ದರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​​ಗೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ವೀಕ್ಷಕರಲ್ಲಿ ಬಿಗ್​ಬಾಸ್​ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ಬಾರಿಯ ಬಿಗ್​ಬಾಸ್​ಗೆ ಯಾವೆಲ್ಲಾ ಸೆಲೆಬ್ರಿಟಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಒಂದು ಕಣ್ಣು ಇಟ್ಟಿದ್ದಾರೆ.

Advertisment

publive-image

ಮತ್ತೊಂದು ಕಡೆ ಇದೇ ಮೊದಲ ಬಾರಿಗೆ ಬಿಗ್​ಬಾಸ್​ ಶುರುವಾಗುವ ಮುನ್ನವೇ ಐದು ಸ್ಪರ್ಧಿಗಳು ಯಾರು ಅಂತ ಗೊತ್ತಾಗಿದೆ. ಈಗಾಗಲೇ ಮೂರು ಸ್ಪರ್ಧಿಗಳ ಹೆಸರನ್ನು ಅಧಿಕೃತವಾಗಿ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ರಿವೀಲ್​ ಮಾಡಲಾಗಿದೆ. ಬಿಗ್​ಬಾಸ್​ಗೆ ಹೋಗುವ ಮೊದಲ ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿದೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ವೀಕ್ಷಕರನ್ನ ರಂಜಿಸುತ್ತಾ ಬಂದಿದ್ದ ಸತ್ಯ ಧಾರಾವಾಹಿಯ ಖ್ಯಾತ ನಟಿ ಗೌತಮಿ ಜಾಧವ್ ಅವರು ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆ ವೇದಿಕೆಗೆ ಲಾಯರ್ ಜಗದೀಶ್​ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: ಬಿಗ್​ಬಾಸ್​​ ಕನ್ನಡ ಸೀಸನ್​​ 11; ದೊಡ್ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೇ ನೋಡಿ!

publive-image

ಇದೀಗ ಬಿಗ್​ಬಾಸ್​ ಸೀಸನ್​ 11ಕ್ಕೆ ಕರಾವಳಿಯ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಬಂದಿದ್ದಾರೆ. ಪ್ರಖರ ಭಾಷಣಗಾರ್ತಿ ಕೂಡ ಹೌದು. ಇವರು ಉಡುಪಿ ಜಿಲ್ಲೆ ಕುಂದಾಪುರದವರು. ಕುಂದಾಪುರದಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು.​ ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿದ್ದ ಇವರು ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿ ಆಗಿದ್ದರು. ಕಾಲೇಜು ದಿನಗಳಿಂದಲೇ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಪತ್ರಕರ್ತೆಯಾಗಿ, ನಿರೂಪಕಿಯಾಗಿ ಭಾಷಣಕಾರರಾಗಿ ಗಮನ ಸೆಳೆದಿರೋ ಇವರು ಪ್ರೇಮ ಪಾಶ ಅನ್ನೋ ಚೊಚ್ಚಲ ಕೃತಿ ಬರೆದಿದ್ದಾರೆ.

Advertisment

publive-image

ವಿವಾದದ ಸುಳಿಯಲ್ಲಿ ಚೈತ್ರಾ!

ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ್ದಾರಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಎಂದು ಚೈತ್ರಾ ಕುಂದಾಪುರ ನಂಬಿಸಿದ್ದರಂತೆ. ಟಿಕೆಟ್ ಆಮಿಷ ಒಡ್ಡಿ 7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಈ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅರೆಸ್ಟ್ ಕೂಡ ಮಾಡಿದ್ದರು. ಚೈತ್ರಾ ಮತ್ತವರ ಗ್ಯಾಂಗ್ ಕೇಂದ್ರದ ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್ ನಾಯಕರ ಹೆಸರಲ್ಲಿ ಮೋಸ ಮಾಡಿದ್ದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೆಸರಲ್ಲಿ ನಕಲಿ ನಾಯಕರನ್ನ ಸೃಷ್ಟಿ ಮಾಡಿ ಇವರು ವಂಚನೆ ಮಾಡಿದ್ದರು ಎಂದು ವರದಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment