/newsfirstlive-kannada/media/post_attachments/wp-content/uploads/2024/10/Bigg-boss-chaitra-kundapura-4.jpg)
ಶಿವಮೊಗ್ಗ: ಜಗಳ, ಗಲಾಟೆ, ಹೊಡೆದಾಟಗಳಿಂದಲೇ ಸುದ್ದಿ ಆಗಿರುವ ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಕೀಲ ಕೆ.ಎಲ್ ಭೋಜರಾಜ್ ಎಂಬುವವರು ಈ ಶೋ ವಿರುದ್ಧ ದೂರು ದಾಖಲಿಸಿದ್ದು, ಸಾಗರ ನ್ಯಾಯಾಲಯದಿಂದ ತುರ್ತು ನೋಟಿಸ್ ಜಾರಿಯಾಗಿದೆ.
ಕಲರ್ಸ್ ಕನ್ನಡ ವಾಹಿನಿ ವಿರುದ್ಧ ದೂರು ನೀಡಿರುವ ಕೆ.ಎಲ್ ಭೋಜರಾಜ್ ಅವರು ಇಡೀ ಬಿಗ್ ಬಾಸ್ ಸೀಸನ್ 11 ಶೋ ಅನ್ನೇ ಸ್ಥಗಿತಗೊಳಿಸವಂತೆ ಆಗ್ರಹಿಸಿದ್ದಾರೆ. ವಕೀಲರ ಈ ದೂರಿನ ಹಿನ್ನೆಲೆಯಲ್ಲಿ ಸಾಗರ ಕೋರ್ಟ್ ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಹಾಗೂ ಸಂಪಾದಕರಿಗೆ ಇದೇ ಅಕ್ಟೋಬರ್ 28ರಂದು ನಡೆಯುವ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.
ಇದನ್ನೂ ಓದಿ: BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್!
ವಕೀಲ ಭೋಜರಾಜ್ ತಕರಾರು ಯಾಕೆ?
ಸಾಗರದ ವಕೀಲ ಕೆ.ಎಲ್ ಭೋಜರಾಜ್ ಅವರು ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಸ್ಪರ್ಧಿಯಾಗಿರುವುದಕ್ಕೆ ಈ ತಕರಾರು ತೆಗೆದಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಚೈತ್ರಾ ಕುಂದಾಪುರ ಅವರನ್ನ ಕಿಚ್ಚ ಸುದೀಪ್ ಅವರು ಹಿಂದೂ ಫೈರ್ ಬ್ರ್ಯಾಂಡ್ ಎಂದು ಕರೆದಿದ್ದಾರೆ.
ಚೈತ್ರಾ ಕುಂದಾಪುರ ವಿರುದ್ಧ ಈಗಾಗಲೇ 11 ದೂರು ದಾಖಲಾಗಿವೆ. 11 ಕೇಸ್ ಇರುವ ಚೈತ್ರಾರನ್ನ ಹಿಂದೂ ಫೈರ್ ಬ್ರ್ಯಾಂಡ್ ಎಂದು ತೋರಿಸಲಾಗ್ತಿದೆ. ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ನಾನು ಕಳೆದ ಸೀಸನ್ ಅನ್ನು ಜೈಲಿನಲ್ಲಿದ್ದಾಗ ನೋಡಿದ್ದೇನೆ ಎಂದಿದ್ದಾರೆ. ಆರೋಪಿ ಜೈಲಿನಲ್ಲಿರುವಾಗ ಬಿಗ್ ಬಾಸ್ ರಿಯಾಲಿಟಿ ಶೋ ನೋಡಲು ಹೇಗೆ ಸಾಧ್ಯ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಚೈತ್ರಾ ಕುಂದಾಪುರ ಅವರು ಸಮಾಜಕ್ಕೆ ಯಾವ ಸಂದೇಶ ನೀಡ್ತಾರೆ. ಇಂತವರಿಗೆ ಬಿಗ್ ಬಾಸ್ ಮನೆಯಲ್ಲಿ ಅವಕಾಶ ನೀಡಿರೋದು ಎಂತಹ ಪರಿಣಾಮ ಬೀರಲಿದೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಬಿಗ್ ಬಾಸ್ ನಿರ್ಮಾಪಕರಿಗೆ ತುರ್ತು ನೋಟಿಸ್ ನೀಡಲಾಗಿದೆ. ಮುಂದಿನ ವಿಚಾರಣೆಗೆ ಹಾಜರಾಗಲು ತುರ್ತು ನೋಟಿಸ್ ಜಾರಿ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ