/newsfirstlive-kannada/media/post_attachments/wp-content/uploads/2025/01/BBK11_MANJU-2.jpg)
ಬಿಗ್ ಬಾಸ್ ಸೀಸನ್ 11 ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ನಾಳೆಯಿಂದ ಗ್ರ್ಯಾಂಡ್ ಫಿನಾಲೆಯ ಎರಡು ಶೋಗಳು ನಡೆಯಲಿವೆ. ಇನ್ನೇನು 2 ದಿನಗಳಲ್ಲಿ ಬಿಗ್ ರಿಯಾಲಿಟಿ ಶೋ ಮುಗಿಯಲಿದೆ ಇದರ ಮಧ್ಯೆ ಫಿನಾಲೆಯಲ್ಲಿ ವಿನ್ನರ್ ಯಾರಾಗ್ತಾರೆ ಎಂಬುದು ವೀಕ್ಷಕರಲ್ಲಿ ಚರ್ಚೆಯ ವಿಷಯವಾಗಿದೆ. ತ್ರಿವಿಕ್ರಮ್, ಮೋಕ್ಷಿತಾ, ಭವ್ಯ, ಹನುಮಂತು, ಮಂಜು, ರಜತ್ ಕಿಶನ್ ಇವರಲ್ಲಿ ಒಬ್ಬರು ಮಾತ್ರ ಟ್ರೋಫಿಗೆ ಮುತ್ತಿಡಲಿದ್ದಾರೆ.
ವೈಲ್ಡ್ ಕಾರ್ಡ್ನಿಂದ ಎಂಟ್ರಿಯಾಗಿದ್ದ ಹನುಮಂತು ತಮ್ಮ ಜಾನಪದ ಹಾಡುಗಳು, ವರ್ತನೆ ಆಟದ ಶೈಲಿಯಿಂದ ಎಲ್ಲರ ಮನ ಸೆಳೆದಿದ್ದಾರೆ. ತ್ರಿವಿಕ್ರಮ್ ನೇರ ನುಡಿಗಳಿಂದ, ಟಾಸ್ಕ್ಗಳಲ್ಲಿ ಒಳ್ಳೆಯ ಪರ್ಫಾಮೆನ್ಸ್ನಿಂದ ಅಭಿಮಾನಿಗಳನ್ನು ಗಳಿಸಿದ್ದಾರೆ. ಮೋಕ್ಷಿತಾ ಯಾವುದೇ ಆತುರತೆ ಇಲ್ಲದ ಆಟ, ಒಳ್ಳಯೆ ಮಾತುಗಳಿಂದ ಪ್ರಾಮಾಣಿಕ ವ್ಯಕ್ತಿತ್ವದಿಂದ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಲ್ಲದೇ ಎಪಿಸೋಡ್ನಲ್ಲಿ ನನಗೆ ವೋಟ್ ಕೊಡಿ ಎಂದು ಮನವಿ ಮಾಡಿದ್ದರು.
ಇದೀಗ ಭವ್ಯ, ರಜತ್ ಹಾಗೂ ಉಗ್ರಂ ಮಂಜು ಕೂಡ ಪ್ರೇಕ್ಷಕರ ಬಳಿ ಮಾತನಾಡಿ, ಬಿಗ್ಬಾಸ್ ಜರ್ನಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ತಮ್ಮದೇ ಶೈಲಿಯಲ್ಲಿ ಮತ ಕೇಳಿದ್ದಾರೆ. ಭವ್ಯ ಅವರನ್ನು ನೋಡಿದ ಪ್ರೇಕ್ಷಕರು ಹೋ.. ಎಂದು ಕೂಗಿದ್ದಾರೆ. ಈ ವೇಳೆ ಮಾತನಾಡಿದ ಭವ್ಯ, ನಾನು ಆಡಿರುವ ಆಟಗಳಿಂದ, ಮಾತುಗಳಿಂದ ಬೇಸರ ಆಗಿದ್ದಾರೆ ನಿಮಗೆಲ್ಲಾ ಕ್ಷಮೆ ಕೇಳುತ್ತೇನೆ ಎಂದು ಕೈ ಮುಗಿದು ವೋಟ್ಗೆ ಮನವಿ ಮಾಡಿದ್ದಾರೆ.
ಉಗ್ರಂ ಮಂಜು ಅಂತೂ ಚೆನ್ನಾಗಿ ಮಾತಾಡಿದ್ದಾರೆ. ಕುಟುಂಬದಲ್ಲಿ ಇದ್ರೆ ಈ ತರ ಮಗ ಇರಬೇಕು. ಒಬ್ಬ ಅಣ್ಣನಾಗಿ ಇದ್ದರೇ ಈ ತರ ಬದುಕಬೇಕು. ಆ ರೀತಿಯಾಗಿ ಬದುಕುತ್ತೇನೆ ಎಂದು ಹೇಳಿದ್ದಾರೆ. ಇದಾದ ಮೇಲೆ ರಜತ್ ಮಾತನಾಡಿ, ನನ್ನಮ್ಮ ಯಾವಾಗಲೂ ಹೇಳೋರು. ಮಗನೇ ಹಿಂಗೆ ಇರಬೇಡ ಕಣೋ. ಯಾರು ಇಷ್ಟಪಡಲ್ಲ ಅಂತ. ನನ್ನ ಕ್ಯಾರೆಕ್ಟರ್ ನಾನು ಚೇಂಜ್ ಮಾಡಿಕೊಳ್ಳಬೇಕಾ?. ತಪ್ಪುಗಳು ನನ್ನ ಕಡೆಯಿಂದಲೂ ಆಗಿದೆ. ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋದು ರಜತ್ ಕಣೋ ಎಂದು ಸಖತ್ ಆಗಿಯೇ ಡೈಲಾಗ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ