/newsfirstlive-kannada/media/post_attachments/wp-content/uploads/2024/10/BIGG_BOSS_SUDEEP.jpg)
ಕನ್ನಡದ ಬಿಗ್ ಬಾಸ್ ಸೀಸನ- 11 ಮತ್ತಷ್ಟು ರಂಗು ಪಡೆದುಕೊಂಡಿದೆ. ಕಿಚ್ಚ ನಡೆಸಿಕೊಡುವ ಬಿಗ್​ಬಾಸ್​ ದಿನದಿಂದ ದಿನಕ್ಕೆ ಕಿಚ್ಚು ಹೆಚ್ಚಾಗತೊಡಗಿದ್ದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ಒಂದೊಂದೇ ಮುಖ ಬಯಲಾಗುತ್ತಿದ್ದು ಇಂದಿನ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್​ಬಾಸ್​ ವೀಕ್ಷಕರು ಕೊಟ್ಟಂತಹ ಗಿಫ್ಟ್​ಗಳನ್ನ ಸ್ಪರ್ಧಿಗಳಿಗೆ ಕೊಡಲಾಗಿದ್ದು ಇದರಿಂದ ಅವರೆಲ್ಲ ಅಪ್​ಸೆಟ್ ಆಗಿದ್ದಾರೆ.
ಮನೆಯೊಳಗೆ ಬಹುಮಾನ ಪಡೆದ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ. ಏಕೆಂದರೆ ಅವರ ವರ್ತನೆ ಬದಲಾಯಿಸಿಕೊಂಡು ಹೋಗುವಂತೆ ಗಿಫ್ಟ್​ಗಳು ಮುನ್ಸೂಚನೆ ನೀಡುವಂತೆ ಇದೆ. ಮನೆಯ ಕ್ಯಾಪ್ಟನ್ ಆಗಿದ್ದ ಹಂಸಾಗೆ ಮಿದುಳಿನ ಫೋಟೋವನ್ನ ವೀಕ್ಷಕರು ಕಳಿಸಿದ್ದು ಬುದ್ಧಿ ಉಪಯೋಗಿಸಿ ಆಟ ಆಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: BBK11: ಅಣ್ಣ-ತಂಗಿ ಆಟಗಳೆಲ್ಲಾ ಇಲ್ಲಿ ನಡೆಯಲ್ಲ.. ಗೋಲ್ಡ್ ಸುರೇಶ್ ಬೆವರಿಳಿಸಿದ ಕಿಚ್ಚ ಸುದೀಪ್!
/newsfirstlive-kannada/media/post_attachments/wp-content/uploads/2024/10/BIGG_BOSS-2.jpg)
ಇನ್ನು ಧನ್​ರಾಜ್​ಗೆ ಸೈಕಲ್​ಗೆ ಗಾಳಿ ಹೊಡೆಯುವ ಪಂಪ್ ಗಿಫ್ಟ್​ ಆಗಿ ನೀಡಲಾಗಿದೆ. ಅಂದರೆ ಇನ್ನೊಬ್ಬರಿಗೆ ಪಂಪ್ ಹೊಡೆಯುವುದು ನಿಲ್ಲಿಸಿ ಅಥವಾ ವಾಹನ ಪಂಚರ್ ಆಗಿದೆ, ಅದನ್ನು ಪಂಪ್ ಹಾಕಿ ಓಡಿಸಿ ಎನ್ನುವ ಅರ್ಥ ಬರುತ್ತದೆ. 3ನೇಯದಾಗಿ ಭವ್ಯಾಗೆ ಕ್ಯಾಲ್ಕುಲೇಟರ್ ನೀಡಿದ್ದು ಲೆಕ್ಕಾಚಾರ ಮಾಡಿ ಮನೆಯಲ್ಲಿ ಆಡಿದರೆ ಒಳ್ಳೆಯದು ಎಂದು ಬರೆಯಲಾಗಿದೆ. ತ್ರಿವಿಕ್ರಮ್​ಗೆ ಸೀಟಿ ಗಿಫ್ಟ್ ಸಿಕ್ಕಿದ್ದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಎಂದು ತಗೊಂಡು, ಅನ್ಕೊಂಡಷ್ಟು ಸೌಂಡ್ ಬರುತ್ತಿಲ್ಲ ಎಂದು ಬರೆದಿದೆ.
ಚೈತ್ರಾ ಕುಂದಾಪುರ ಉರೀತ್ತಿದ್ದ ಫೈಯರ್ ಬ್ರ್ಯಾಂಡ್ ಈಗ ಹಾರಿ ಹೋಗಿದೆ ಎಂದು ಬರೆದು ಕಳುಹಿಸಲಾಗಿದೆ. ಇದಕ್ಕೆ ಚೈತ್ರಾ ಬೆಂಕಿ ಹತ್ತಿಸುತ್ತೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇನ್ನು ಗೌತಮಿಗೆ ಮುಖವಾಡ ಬಹುಮಾನವಾಗಿ ಸಿಕ್ಕಿದೆ. ಮುಖವಾಡ ತೆಗೆದು ಸತ್ಯವಾದ ಆಟಕ್ಕೆ ಯಾವಾಗ ಆಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಕಿಚ್ಚ ಸುದೀಪ್ ಮಾತನಾಡಿದ್ದು ಸತ್ಯ ಹೊರಗೆ ಬರ್ತಿಲ್ಲ ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಗೌತಮಿ ಕಣ್ಣೀರು ಹಾಕಿದ್ದಾರೆ. 2ನೇ ಪಂಚಾಯತಿಯಲ್ಲೇ ಕಿಚ್ಚ ಸುದೀಪ್ ಅವರು ಗರಂ ಆದಂತೆ ಕಾಣುತ್ತಿದೆ. ಪಂಚಾಯತಿಯಲ್ಲಿ ಯಾವ್ಯಾವ ಸ್ಪರ್ಧಿಗಳಿಗೆ ಯಾವ್ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us