/newsfirstlive-kannada/media/post_attachments/wp-content/uploads/2024/10/Bigg-boss-Season-11-9.jpg)
ಬಿಗ್ ಬಾಸ್ ಸೀಸನ್ 11ರ ಆರಂಭದ ಬಳಿಕ ಸ್ವರ್ಗ, ನರಕದ ಅಸಲಿ ಆಟ ಶುರುವಾಗಿದೆ. ಮೊದಲ ದಿನವೇ ಸೀಸನ್ 11ರ ಸ್ಪರ್ಧಿಗಳ ಮಧ್ಯೆ ಮನಸ್ತಾಪದ ಕಿಚ್ಚು, ಕೂಗಾಟ, ಗಲಾಟೆ ನಡೆದಿದೆ. ಇದಾದ ಬಳಿಕ ಮೊದಲ ವಾರದ ನಾಮಿನೇಶನ್ ಪ್ರಕ್ರಿಯೆ ನಡೆದಿದ್ದು, ಮನೆಯಲ್ಲಿರುವ ಸ್ಪರ್ಧಿಗಳ ನಿಜವಾದ ಮುಖ ಅನಾವರಣ ಆಗುತ್ತಿದೆ.
ಇದನ್ನೂ ಓದಿ: ಆ ಧನ್ರಾಜ್ ಹೆಸರಿಟ್ಟುಕೊಂಡು ಈ ಧನ್ರಾಜ್ ಬಿಲ್ಡಪ್.. 2019ರಲ್ಲೇ ಮನೆಯವ್ರನ್ನೆಲ್ಲಾ ನಂಬಿಸಿದ್ರಂತೆ ಈ ಸ್ಪರ್ಧಿ
ಮೊದಲ ದಿನದ ಸ್ವರ್ಗ, ನರಕದ ಜಂಜಾಟದಲ್ಲಿ ಚೈತ್ರಾ ಕುಂದಾಪುರ ಅವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ನರಕ ನಿವಾಸಿಗಳಿಗೆ ಸ್ವರ್ಗದಲ್ಲಿರುವ ಬಿಗ್ ಬಾಸ್ ಸ್ಪರ್ಧಿಗಳು ಮನೆಯನ್ನು ಕ್ಲೀನ್ ಮಾಡುವ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್ ಮಧ್ಯೆ ಚೈತ್ರಾ ಕುಂದಾಪುರ ಅವರಿಗೂ ಮನೆಯ ಇತರೆ ಸದಸ್ಯರಿಗೂ ವಾಗ್ವಾದ ನಡೆದಿದೆ.
ಚೈತ್ರಾ ಕುಂದಾಪುರ ಅವರು ಟಾಸ್ಕ್‌ನ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಅನ್ನೋ ಬಿಗ್ ಬಾಸ್ ಸ್ಪರ್ಧಿಗಳ ವಾದವಾಗಿದೆ. ಹಣ್ಣನ್ನು ಕಚ್ಚಿ ಗಲಾಟೆ ಮಾಡಿದ್ದರಿಂದ ಚೈತ್ರಾ ಕುಂದಾಪುರ ಅವರನ್ನೇ ಮನೆಯ ಸದಸ್ಯರು ಮೊದಲ ನಾಮಿನೇಟ್ ಸದಸ್ಯೆಯನ್ನಾಗಿಸಿದ್ದಾರೆ.
ಇನ್ನು ಬಿಗ್ ಬಾಸ್ ಸೀಸನ್ 11ರ ಮೊದಲ ನಾಮಿನೇಶನ್ ತಾಪ ಸ್ವರ್ಗಕ್ಕೂ ವ್ಯಾಪಿಸಿದೆ. ಈ ವಾರದ ನಾಮಿನೇಶನ್ ಪ್ರಕ್ರಿಯೆಯ 2ನೇ ಹಂತವನ್ನು ಟಾಸ್ಕ್ ರೂಪದಲ್ಲಿ ಆರಂಭ ಮಾಡಲಾಗಿದೆ.
ಮೊದಲ ವಾರದ ನಾಮಿನೇಶನ್‌ನಲ್ಲಿ ಮನೆಯ ಸದಸ್ಯರು ಯಮುನಾ, ಭವ್ಯಾ ಗೌಡ, ಗೌತಮಿ ಅವರ ಹೆಸರನ್ನೇ ಸೂಚಿಸಿದ್ದಾರೆ. ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಅವರು ಸ್ವರ್ಗದಲ್ಲಿದ್ರೂ ನರಕ ನಿವಾಸಿಗಳ ಜೊತೆ ಜಾಸ್ತಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಗೌತಮಿ ಅವರ ಹೆಸರನ್ನೇ ಯಮುನಾ ಅವರು ಸೂಚಿಸಿದ್ದಾರೆ.
ಯಮುನಾ ಅವರ ಈ ವಾದಕ್ಕೆ ನರಕ ನಿವಾಸಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಟ ಶಿಶಿರ್ ಶಾಸ್ತ್ರಿ ಅವರು ಯಮುನಾ ಅವರ ಮೇಲೆ ರಾಂಗ್ ಆಗಿದ್ದಾರೆ. ಯಾರು ನೀವು ಅಂತ ನೀವು ಕೇಳಬೇಡಿ ಅಂತ ಜಗಳಕ್ಕೆ ಇಳಿದಿದ್ದಾರೆ. ಸದ್ಯ ಮೊದಲ ವಾರದ ನಾಮಿನೇಶನ್ ಕಿಚ್ಚು ಬಿಗ್ ಬಾಸ್ ಮನೆಯಲ್ಲಿ ಜೋರಾಗಿದೆ. ಯಾರು ಹೆಚ್ಚು ಮತಗಳನ್ನ ಪಡೆದು ನಾಮಿನೇಶನ್ ಆಗ್ತಾರೆ. ಮೊದಲ ವಾರದಲ್ಲೇ ಯಾರು ಬಿಗ್ ಬಾಸ್ ಮನೆಯಿಂದ ಔಟ್ ಆಗ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ