ಬಿಗ್​ಬಾಸ್​ ಮನೆಯಲ್ಲಿ ಭವ್ಯಾ ಗೌಡ ಅಷ್ಟೂ ಮುದ್ದಾಗಿ ಕಾಣೋದಕ್ಕೆ ಕಾರಣವೇನು ಗೊತ್ತಾ?

author-image
Veena Gangani
Updated On
ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?
Advertisment
  • ಭಿನ್ನ ವಿಭಿನ್ನವಾಗಿ ಡ್ರೆಸ್​ಗಳನ್ನು ಸಖತ್ ಮಿಂಚುತ್ತಿದ್ದ ಭವ್ಯಾ ಗೌಡ
  • ಬಿಗ್​ಬಾಸ್​ನಲ್ಲಿದ್ದ ಭವ್ಯಾ ಗೌಡಗೆ ಕಾಸ್ಟ್ಯೂಮ್ ಕಳಿಸಿದ್ದು ಯಾರು?
  • ಭವ್ಯಾ ಗೌಡ ಬಟ್ಟೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಬಾದ್ ಷಾ ಕಿಚ್ಚ ಸುದೀಪ್

ಕನ್ನಡದ ಬಿಗ್​ಬಾಸ್​ ಸೀಸನ್ 11ರ ಎಲ್ಲಾ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಬೇರೆ ಬೇರೆ ಚಾನೆಲ್​ಗಳಿಗೆ ಸಂದರ್ಶನ ಕೊಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳು ಕಳೆದ ಸಮಯ ವೀಕ್ಷಕರೂ ಇನ್ನೂ ಮರೆತ್ತಿಲ್ಲ.

ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಹೊರ ಬರ್ತಿದ್ದಂತೆ ಗೌತಮಿ ಜಾಧವ್‌ಗೆ ಬಿಗ್ ಶಾಕ್‌.. ಕುಟುಂಬದಲ್ಲಿ ಏನಾಯ್ತು?

publive-image

ಅದರಲ್ಲೂ ಮಹಿಳಾ ಸ್ಪರ್ಧಿಗಳು ಧರಿಸಿಕೊಳ್ಳುತ್ತಿದ್ದ ಕಾಸ್ಟ್ಯೂಮ್ ಮೇಲೆಯೇ ವೀಕ್ಷಕರ ಚಿತ್ತ ನೆಟ್ಟಿತ್ತು. ಹೌದು, ಮಹಿಳಾ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಲ್ಲಿ ಚೆಂದ ಚೆಂದವಾಗಿ ರೆಡಿಯಾಗುತ್ತಿದ್ದರು. ಅದರಲ್ಲೂ ಭವ್ಯಾ ಗೌಡ ತುಂಬಾ ಮುದ್ದು ಮುದ್ದಾಗಿ ಕಾಸ್ಟ್ಯೂಮ್ ಧರಿಸುತ್ತಿದ್ದರು. ಇದನ್ನೂ ವೀಕ್ಷಕರು ಕೂಡ ನೋಡಿದ್ದಾರೆ. ವೀಕೆಂಡ್ ಬಂದರೇ ಸಾಕು ಭಿನ್ನ ವಿಭಿನ್ನವಾಗಿ ಭವ್ಯಾ ಗೌಡ ಅವರು ಡ್ರೆಸ್ ಅಪ್ ಮಾಡಿಕೊಳ್ಳುತ್ತಿದ್ದರು.

publive-image

ಈ ಹಿಂದೆ ಭವ್ಯಾ ಗೌಡ ಅವರ ಡ್ರೆಸ್ ಅಪ್​ಗೆ ಕಿಚ್ಚ ಸುದೀಪ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ, ಭವ್ಯಾ ಗೌಡ ಧರಿಸುತ್ತಿದ್ದ ಗ್ರ್ಯಾಂಡ್ ಕಾಸ್ಟ್ಯೂಮ್ ಯಾರು ಕಳಿಸುತ್ತಿದ್ದರು ಅಂತ ಅವರೇ ನ್ಯೂಸ್​ಫಸ್ಟ್​ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ಭವ್ಯಾ ಗೌಡ ಅವರು, ನನ್ನ ಕಾಸ್ಟ್ಯೂಮ್​ಗಳನ್ನೇಲ್ಲಾ ಅಕ್ಕ ದಿವ್ಯಾ ಸೆಲೆಕ್ಟ್ ಮಾಡ್ತಾ ಇದ್ದರು. ಏಕೆಂದರೆ ನಾನು ಪೂರ್ತಿಯಾಗಿ ಅಕ್ಕ ಹಾಗೂ ತಂಗಿ ಮೇಲೆ ಡಿಪೆಂಡ್ ಆಗಿದ್ದೀನಿ. ಸೀರಿಯಲ್​ ಶೂಟಿಂಗ್, ಆಚೆ ಎಲ್ಲಿಗೆ  ಹೋದ್ರೂ ಕಾಸ್ಟ್ಯೂಮ್ಸ್ ಏನ್​ ಹಾಕಿಕೊಳ್ಳಬೇಕು ಅಂತ ಅವರಿಗೆ ಕೇಳುತ್ತೇನೆ ಎಂದಿದ್ದಾರೆ.

ಇದಾದ ಬಳಿಕ ಮಾತಾಡಿದ ಭವ್ಯಾ ಗೌಡ, ನನ್ನ ಫ್ರೆಂಡ್ ನಿಧಿ ಗೌಡ ಹಾಗೂ ನನ್ನ ಅಕ್ಕ ದಿವ್ಯಾ ಸೇರಿಕೊಂಡು ಪ್ರತಿ ವಾರ ಕಾಸ್ಟ್ಯೂಮ್ಸ್ ಕಳುಹಿಸಿ ಕೊಡೋದಕ್ಕೆ ತುಂಬಾನೇ ಒದ್ದಾಡಿದ್ದಾರೆ. ಅಂತರಿಯಾ ಡಿಸೈನರ್ ಹಾಗೂ ದಕ್ಷಿಣ ಡಿಸೈನರ್ಸ್ ಕಂಪನಿ ಸೇರಿಕೊಂಡು ನನಗೆ ಬಟ್ಟೆ ಕಳುಹಿಸಿ ಕೊಟ್ಟಿದ್ದಾರೆ. ಇನ್ನೂ, ನಾನು ಹಾಕುತ್ತಿದ್ದ ಸೀರೆಯನ್ನು ಅನರ್​ ಕೊಟ್ಟೂರು ಹಾಗೂ ಅಂತರಿಯಾ ಡಿಸೈನರ್ (anthariya Designer) ಕೋಲಾಬೋರೇಷನ್‌ ಮಾಡಿ ಬಿಗ್ ಬಾಸ್ ಮುಗಿಯುವವರೆಗೂ ನನಗೆ ಸೀರೆ ಕೊಟ್ಟಿದ್ದಾರೆ. ನಮಗೆ ಏನೇ ಬೇಕಿದ್ದರೂ ಒಂದು ಕ್ಯಾಮೆರಾ ಮುಂದೆ ಹೋಗಿ ಹೇಳಬೇಕು. ನನಗೆ ಬರುತ್ತಿದ್ದ ಬಟ್ಟೆಗಳು ತುಂಬಾ ಲೂಸ್ ಆಗಿರುತ್ತಿತ್ತು, ಪದೇ ಪದೇ ಅದೇ ಕ್ಯಾಮೆರಾ ಮುಂದೆ ನಿಂತುಕೊಂಡು ಹೇಳುತ್ತಿದ್ದೆ. ಸ್ವಲ್ಪ ಸಮಯಗಳ ಕಾಲ ಡ್ರೆಸ್ ಫಿಟ್ಟಿಂಗ್ ಇರಲಿಲ್ಲ. ಆಮೇಲೆ ಫಿಟ್ಟಿಂಗ್ ಇರುವುದು ಬರಲು ಶುರುವಾಯ್ತು. ನನಗಿಂತ ಹೆಚ್ಚಿನ ಒತ್ತಡ ಇದ್ದಿದ್ದು ಮನೆಯವರಿಗೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment