/newsfirstlive-kannada/media/post_attachments/wp-content/uploads/2024/12/SUDEEP_BBK.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಒಬ್ಬೊಬ್ಬರೇ ಮನೆ ಖಾಲಿ ಮಾಡುತ್ತಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಹೋಗಿದ್ದರು. ಇವರ ಬೆನ್ನಲ್ಲೇ ಈ ವಾರ ಹೊರಗಡೆ ಹೋಗುವುದು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಏಕೆಂದರೆ ಈ ಸ್ಪರ್ಧಿಯೇ ಎಂದು ಯಾರನ್ನೂ ಜಡ್ಜ್ ಮಾಡಲಾಗುತ್ತಿಲ್ಲ. ಸದ್ಯ ರಿಲೀಸ್ ಆಗಿರುವ ಹೊಸ ವಿಡಿಯೋದಲ್ಲಿ ಏನಿದೆ?.
ಕಿಚ್ಚ ಸುದೀಪ್ ಅವರ ಸೂಪರ್ ಸಂಡೇಯ ವಿಡಿಯೋ ರಿಲೀಸ್ ಮಾಡಲಾಗಿದ್ದು ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಮಾತಿನ ಸಮರ ನಡೆದಂತೆ ಕಾಣಿಸಿದೆ. ಕಿಚ್ಚ ಸುದೀಪ್ ಮುಂದೆ ಇಬ್ಬರು ಒಬ್ಬರ ಮೇಲೆ ಒಬ್ಬರು ದೂರು ಹೇಳಿದ್ದಾರೆ. ಇದು ಯಾವ ಹಂತಕ್ಕೆ ಹೋಗಿ ಮುಟ್ಟಲಿದೆ ಎಂದು ಇಂದು ರಾತ್ರಿಯ ಎಪಿಸೋಡ್ನಲ್ಲಿ ಗೊತ್ತಗಲಿದೆ.
ಇದನ್ನೂ ಓದಿ:BBK11; ಹನುಮಂತು ಪ್ರೊಫೆಷನಲ್ ಕಿಲಾಡಿ -ಕಿಚ್ಚನ ಮುಂದೆಯೇ ರಜತ್ ಹೀಗೆ ಹೇಳಿದ್ದು ಯಾಕೆ?
ಸದ್ಯ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಹನುಮಂತು ಮೇಲೆ ಎರಗಿದ್ದ ರಜತ್ ಅವರು ನಂತರ ಗೋಲ್ಡ್ ಸುರೇಶ್ ಮೇಲೆಯೂ ದೂರುಗಳನ್ನ ಹೇಳಿದ್ದಾರೆ. ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಎಂದಿದ್ದರು. ಇದಾದ ಮೇಲೆ ರಜತ್ ಅವರ ಫೋಟೋ ತೆಗೆದುಕೊಂಡು ಗೋಲ್ಡ್ ಸುರೇಶ್ 2ನೇ ಸ್ಥಾನಕ್ಕೆ ಇಡುತ್ತಾರೆ. ಇದಕ್ಕೆ ಕಿಚ್ಚ ಯಾಕೆ ಎಂದು ಗೋಲ್ಡ್ ಸುರೇಶ್ರನ್ನ ಪ್ರಶ್ನಿಸುತ್ತಾರೆ.
ಆಗ ಮನೆಗೆ ಬಂದು 3 ವಾರ ಕಳೆದರೂ ರಜತ್ ಅಷ್ಟೇನು ಕೊಡುಗೆ ಕೊಟ್ಟಿಲ್ಲ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ. ಇದಾದ ಮೇಲೆ ರಜತ್, ಫಸ್ಟ್ ಜಗಳ ಆಗಿದ್ದಕ್ಕೆ ಗಾಬರಿ ಬಿದ್ದು ಹೋಗಿ ಡೋರ್ ಬಡೆದವರು ಟಾಸ್ಕ್ ಬಿಟ್ಟು ಮತ್ತೆ ಏನೂ ಕೂಡ ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ಗೋಲ್ಡ್ ಸುರೇಶ್ ವಿರುದ್ಧ ಮಾತನಾಡಿದ್ದಾರೆ.
ಸದ್ಯ ಇದು ಗೋಲ್ಡ್ ಸುರೇಶ್ ಹಾಗೂ ರಜತ್ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ತಮ್ಮನ್ನು ತಾವು ಕಾಪಾಡಿಕೊಳ್ಳಲು ಈ ರೀತಿ ಹೇಳಿದ್ದಾರೆ ಎಂದು ಹೇಳಬಹುದು. ಇದು ಅಲ್ಲದೇ ಮನೆಯಿಂದ ಹೊರ ಬರುವ ಪಟ್ಟಿಯಲ್ಲಿ ಗೋಲ್ಡ್ ಸುರೇಶ್ ಹೆಸರು ಕೂಡ ಇದೆ. ಹೀಗಾಗಿ ಗೋಲ್ಡ್ ಸುರೇಶ್ ರೆಡ್ ಝೋನ್ ಅಲ್ಲಿ ಇದ್ದಾರೆ ಎನ್ನಬಹುದು. ಆದರೆ ಯಾರು ಮನೆ ಖಾಲಿ ಮಾಡುತ್ತಾರೆ ಎನ್ನುವುದು ಫುಲ್ ಸಸ್ಪೆನ್ಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ