​ಬಿಗ್​ಬಾಸ್​ ಬೆನ್ನಲ್ಲೇ ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ರೆಬೆಲ್​ ಗೌತಮಿ ಜಾಧವ್​; ವಿಶೇಷತೆ ಏನು?

author-image
Veena Gangani
Updated On
​ಬಿಗ್​ಬಾಸ್​ ಬೆನ್ನಲ್ಲೇ ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ರೆಬೆಲ್​ ಗೌತಮಿ ಜಾಧವ್​; ವಿಶೇಷತೆ ಏನು?
Advertisment
  • ರಿಯಲ್​ ಲೈಫ್​ನಲ್ಲಿ ಸತ್ಯಗೂ, ಗೌತಮಿಗೂ ಅಜಗಜಾಂತರ ವ್ಯತ್ಯಾಸ
  • ಹುಣ್ಣಿಮೆ ಚಂದ್ರನೇ ಧರಗಿಳಿದಂತೆ ಕಾಣುತ್ತಿದ್ದೀರಾ ಎಂದ ಅಭಿಮಾನಿ
  • ಬಿಗ್​ಬಾಸ್ ಆಫರ್​ ಬಂದಾಗ ಥಟ್ ಅಂತ ಒಪ್ಪಿಕೊಂಡಿದ್ದೇಕೆ ಗೌತಮಿ

ರಗಡ್ ಲಕ್​ಗೆ ಫೇಮಸ್​ ಆದವ್ರು ನಟಿ ಗೌತಮಿ. ಸತ್ಯ ಪಾತ್ರದ ಇಂಪ್ಯಾಕ್ಟ್​ನಿಂದ ಗೌತಮಿ ಅವರನ್ನು ವೀಕ್ಷಕರು ರೌಡಿ ಬೇಬಿ ಅಂತಲೇ ಕರೆಯುತ್ತಿದ್ದರು. ಹಾಗೇ ಭಾವಿಸಿದ್ರು ಕೂಡ. ಆದ್ರೆ ರಿಯಲ್​ ಲೈಫ್​ನಲ್ಲಿ ಸತ್ಯ ಪಾತ್ರಕ್ಕೂ ಗೌತಮಿಗೂ ಅಜಗಜಾಂತರ ವ್ಯತ್ಯಾಸ ಇದೆ.

ಇದನ್ನೂ ಓದಿ:ರೆಬೆಲ್​ ಸ್ಟಾರ್​ ಮೊಮ್ಮಗ ಅಂದ್ರೆ ಸುಮ್ನೆನಾ? ಫ್ಯಾನ್ಸ್ ಮನಗೆದ್ದ ಅವಿವಾ ಬಿದ್ದಪ್ಪ; ಟಾಪ್ 10 ಫೋಟೋ ಇಲ್ಲಿವೆ!

publive-image

ಹೀಗಾಗಿನೇ ಗೌತಮಿ ಬಿಗ್​ಬಾಸ್ ಆಫರ್​ ಬಂದಾಗ ಥಟ್​ ಅಂತ ಒಪ್ಕೊಂಡಿದ್ದರು. ವೀಕ್ಷಕರ ಮುಂದೆ ಸತ್ಯನೇ ಬೇರೆ. ಗೌತಮಿನೇ ಬೇರೆ ಅನ್ನೋದನ್ನು ಬಿಚ್ಚಿಟ್ಟಿದ್ದಾರೆ. ಪಾತ್ರ ಬಿಟ್ಟು ಗೌತಮಿ ವ್ಯಕ್ತಿತ್ವ ಹೈಲೈಟ್​ ಆಯ್ತು. ಟಾಮ್​ ಬಾಯ್​ ಇಮೇಜ್​ ಕಳೆದು, ವೀಕ್ಷಕರು ಗೌತಮಿ ಅವರನ್ನು ಅಷ್ಟೇ ಪ್ರೀತಿಯಿಂದ ಸ್ವೀಕಾರ ಮಾಡಿದ್ದಾರೆ.

publive-image

ಬಿಗ್​ಬಾಸ್ ಶೋ ನಂತರ ಗೌತಮಿ ಅವರು ಯಾವುದೇ ಹೊಸ ಪ್ರಾಜೆಕ್ಟ್​ ಅನೌನ್ಸ್​ ಮಾಡಿಲ್ಲ. ಶೂಟಿಂಗ್ ನಿಂದ ಕಂಪ್ಲೀಟ್​ ಬ್ರೇಕ್​ ತಗೊಂಡಿದ್ದಾರೆ. ಈ ನಡುವೆ ಕಾರ್ಯಕ್ರಮಗಳು ಸೇರಿದಂತೆ ಸ್ನೇಹಿತರ ಜೊತೆ, ಫ್ಯಾಮಿಲಿ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಬಿಗ್​ಬಾಸ್​ ಶೋ ನಂತರ ಫಸ್ಟ್​ ಫೋಟೋಶೂಟ್​ ಮಾಡಿಸಿದ್ದಾರೆ ಗೌತಮಿ ಜಾಧವ್.

ಬಿಗ್​ಬಾಸ್​ ಮನೆಯಲ್ಲಿ ಹೆಚ್ಚು ಸೀರೆ ತೊಡುತ್ತಿದ್ದರು. ಇವರ ಸೀರೆಗಳ ಕಲೆಕ್ಷನ್​ ಹೆಂಗಳೆಯರ ಮನ ಗೆದ್ದಿತ್ತು. ಹೊರ ಬಂದ ಮೇಲೆ ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಸದ್ಯ ಸೀರೆ ಬಿಟ್ಟು ಚೂಡಿದಾರ್​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. ಕೆಂಪು ವರ್ಣದಲ್ಲಿ ಮಿಂಚಿರುವ ಗೌತಮಿ, ನೋಡಲು ಥೇಟ್ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಇನ್ನೂ, ಸಹಜ ಸುಂದರಿಯ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದು, ಹುಣ್ಣಿಮೆ ಚಂದ್ರನೇ ಧರಗಿಳಿದಂತೆ ಕಾಣುತ್ತಿದ್ದೀರಾ ಗೌತೂ ಅಂತ ಹಾಡಿ ಹೋಗಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment