/newsfirstlive-kannada/media/post_attachments/wp-content/uploads/2024/12/bbk11-3-1.jpg)
ಕನ್ನಡದ ಬಿಗ್​ಬಾಸ್ ಸೀಸನ್​ 11 ಶುರುವಾಗಿ 90ನೇ ದಿನಕ್ಕೆ ಕಾಲಿಟ್ಟಿದೆ. 100ನೇ ದಿನಕ್ಕೆ ಇನ್ನೂ 10 ದಿನ ಬಾಕಿ ಉಳಿದಿದೆ. ಇನ್ನೇನು ಗ್ರ್ಯಾಂಡ್​ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಹೋಗುತ್ತಿದ್ದಾರೆ.
ಇದನ್ನೂ ಓದಿ: IND vs AUS; ಭಾರತಕ್ಕೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ.. ನಿರೀಕ್ಷೆ ಹುಸಿಗೊಳಿಸಿದ ಕಿಂಗ್
/newsfirstlive-kannada/media/post_attachments/wp-content/uploads/2024/12/bbk11-2-1.jpg)
ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್, ಮಂಜು, ಗೌತಮಿ, ಮೋಕ್ಷಿತಾ, ರಜತ್​, ಧನರಾಜ್​, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ. ಈ 10 ಜನರಲ್ಲಿ ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/12/bbk118.jpg)
ಈ ವಾರ ಚೈತ್ರಾ ಕುಂದಾಪುರ, ಗೌತಮಿ ಜಾಧವ್​, ಧನರಾಜ್​ ಆಚಾರ್ಯ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್​ ಭವ್ಯಾ ಗೌಡಯಿಂದ ಐಶ್ವರ್ಯಾ ಸಿಂಧೋಗಿ ನೇರ ನಾಮಿನೇಟ್ ಆಗಿದ್ದಾರೆ.​​
/newsfirstlive-kannada/media/post_attachments/wp-content/uploads/2024/12/BBK113.jpg)
ಇನ್ನೂ, ಕಳೆದ ಸಂಚಿಕೆಯಲ್ಲಿ ಯಾರು ಕೂಡ ಎಲಿಮಿನೇಟ್ ಆಗಿರಲಿಲ್ಲ. ಹೀಗಾಗಿ ಈ ವಾರ ಬಿಗ್​ಬಾಸ್​ ಮನೆಯಲ್ಲಿ ಡಬಲ್​ ಎಲಿಮಿನೇಷನ್​ ಆಗುತ್ತಾ ಅಂತ ಅನುಮಾನ ಮೂಡಿದೆ. ಹಾಗೇನಾದ್ರೂ ಆದ್ರೆ ಬಿಗ್​ಬಾಸ್​ ಮನೆಯಲ್ಲಿ ಕೇವಲ 8 ಮಂದಿ ಉಳಿದುಕೊಳ್ಳಲಿದ್ದಾರೆ. ಇನ್ನೂ ಕಿಚ್ಚನ ಪಂಜಾಯ್ತಿಯ ಕೊನೆಯ ಸಂಚಿಕೆಯಲ್ಲಿ ಬಿಗ್​ಬಾಸ್​ ಟ್ವಿಸ್ಟ್​ ನೀಡಲಿದ್ದಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us