ಬಿಗ್​ಬಾಸ್​ ಮನೆಯಿಂದ ರಂಜಿತ್, ಜಗದೀಶ್ ಔಟ್​; ಗಲಾಟೆಗೆ ಕಾರಣ ಇಲ್ಲಿದೆ..!

author-image
Ganesh
Updated On
BBK11: ಓಪನ್ ಆಗಿದೆ ಬಿಗ್​ಬಾಸ್ ಮನೆಯ ಮುಖ್ಯದ್ವಾರ; ಕ್ಲೈಮ್ಯಾಕ್ಸ್​ನಲ್ಲಿ ಇದೆಯಾ ರೋಚಕ ಟ್ವಿಸ್ಟ್..!
Advertisment
  • ಬಿಗ್ ಬಾಸ್​ನಿಂದ ಜಗದೀಶ್ ಮತ್ತು ರಂಜಿತ್ ಔಟ್
  • ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಔಟ್​
  • ನಿನ್ನೆಯ ಎಪಿಸೋಡ್​​ನಲ್ಲೂ ಕೂಡ ದೊಡ್ಡ ಜಗಳವಾಗಿತ್ತು

ಬಿಗ್​​ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆ ಎಪಿಸೋಡ್​​ನಲ್ಲೂ ಕೂಡ ದೊಡ್ಡ ಜಗಳವಾಗಿತ್ತು. ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಜಗಳ ಆಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳವಾಗಿತ್ತು. ಕೆಲವು ಪ್ರಾಥಮಿಕ ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎನ್ನಲಾಗಿದೆ. ಈ ಮೂಲಕ ಕನ್ನಡ ಬಿಗ್​ಬಾಸ್​ ಇತಿಹಾಸದಲ್ಲಿ ಜಗಳ ಆಡಿಕೊಂಡು ಸ್ಪರ್ಧಿಗಳು ಹೊರಬಿದ್ದ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆ ಹುಚ್ಚ ವೆಂಕಟ್, ಸಂಯುಕ್ತಾ ಹೆಗಡೆ​ ಬಿಗ್​ಬಾಸ್ ಮನೆಯಿಂದ ಔಟ್ ಆಗಿದ್ದರು. ​

ಇದನ್ನೂ ಓದಿ:Breaking: ಬಿಗ್​​ ಬಾಸ್​ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್​ ಮತ್ತು ರಂಜಿತ್​ ಔಟ್​

ಜಗದೀಶ್ ಕಳೆದ ಮೂರ್ನಾಲ್ಕು ದಿನಗಳಿಂದ ತುಂಬಾ ಅಗ್ರೆಸೀವ್ ಆಗಿ ಆಟ ಆಡುತ್ತಿದ್ದರು. ಇತರೆ ಸ್ಪರ್ಧೆಗಳನ್ನು ಕೆರಳಿಸುವ ರೀತಿಯಲ್ಲಿ ಮಾತುಗಳನ್ನು ಆಡ್ತಿದ್ದಾರೆ ಅಂತಾ ಸ್ಪರ್ಧಿಗಳು ನೇರವಾಗಿ ಆರೋಪ ಮಾಡ್ತಿದ್ದರು. ಇದು ಅತಿರೇಕಕ್ಕೆ ಹೋಗಿ ಮನೆಯಿಂದನೇ ಹೊರ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment