/newsfirstlive-kannada/media/post_attachments/wp-content/uploads/2024/10/bigg-boss-1-1.jpg)
ನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಕೇವಲ 2 ವಾರ ಕಳೆದಿವೆ. ಈ ಎರಡು ವಾರದಲ್ಲೇ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ 17 ಸ್ಪರ್ಧಿಗಳಲ್ಲಿ 7 ಮಂದಿ ನರಕಕ್ಕೆ ಹೋದ್ರೆ ಇನ್ನೂ 10 ಮಂದಿ ಸ್ವರ್ಗದಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/10/bigg-boss-7.jpg)
ಆದರೆ ಇದರ ಮಧ್ಯೆ ಬಿಗ್​ಬಾಸ್​ ಮನೆಯಲ್ಲಿ ಯಾರು ಊಹಿಸಲಾರದ ಘಟನೆಯೊಂದು ನಡೆದು ಹೋಗಿದೆ. ಬಿಗ್​ಬಾಸ್ ಸೀಸನ್ 11ರ ಮನೆಯಲ್ಲಿ ಎಮರ್ಜೆನ್ಸಿ ಘೋಷಣೆಯಾಗಿದ್ದು, ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ. 2 ವಾರ ಕಳೆಯುವುದರೊಳಗೆ ಮನೆಯ ವಾತಾವರಣ ಸಂಪೂರ್ಣ ಬದಲಾಗಿ ಬಿಟ್ಟಿದೆ. ಬಿಗ್ ಬಾಸ್ ಸೀಸನ್ 11ರ ಹೊಸ ಅಧ್ಯಾಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/10/BBK11-5.jpg)
ಬಿಗ್​ಬಾಸ್​ ಮನೆಗೆ ಕ್ರೇನ್​ ಮೂಲಕ ಒಂದಿಷ್ಟು ಮಂದಿ ಎಂಟ್ರಿ ಕೊಟ್ಟಿದ್ದರು. ನರಕ ನಿವಾಸಿಗಳಿಗೆ ಕೊಟ್ಟಿದ್ದ ಹಾಸಿಗೆ, ಕೂರ್ಚಿ, ಬೆಡ್​ ಸೇರಿದಂತೆ ಸಾಕಷ್ಟು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಕೂರ್ಚಿಯನ್ನು ಸ್ಪರ್ಧಿಗಳ ಮುಂದೆಯೇ ಪುಡಿ ಪುಡಿ ಮಾಡಿದ್ದಾರೆ. ಬಿಗ್​ಬಾಸ್​ ತಂಡದ ಈ ಕಾರ್ಯಕ್ಕೆ ಇಡೀ ಮನೆ ಬೆಚ್ಚಿಬಿದ್ದಿದ್ದೆ.
/newsfirstlive-kannada/media/post_attachments/wp-content/uploads/2024/10/bigg-boss.jpg)
ಇನ್ನು, ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದ್ದು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಬಿಗ್ ಬಾಸ ಸೀಸನ್ 11ರ ಆಟದ ಶೈಲಿ ಬದಲಾವಣೆ ಬಗ್ಗೆ ನ್ಯೂಸ್ ಫಸ್ಟ್ ಚಾನೆಲ್ ಸುದ್ದಿ ಬ್ರೇಕ್ ಮಾಡಿತ್ತು. ಕಳೆದ ಅಕ್ಟೋಬರ್ 7ರಂದು ಬೆಳಗ್ಗೆ 9 ಗಂಟೆಗೆ ಸುದ್ದಿ ಬಿತ್ತರಿಸಿದ್ದ ನ್ಯೂಸ್ ಫಸ್ಟ್ ವರದಿ ಇಂದು ನಿಜವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us