newsfirstkannada.com

×

BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!

Share :

Published September 29, 2024 at 3:43pm

    ಬಹಳಷ್ಟು ಕಾತುರದಿಂದ ಕಾಯುತ್ತಿದ್ದಾರೆ ಬಿಗ್​ಬಾಸ್​ ಅಭಿಮಾನಿಗಳು

    ಇಂದು ಸಂಜೆ 6 ಗಂಟೆಗೆ ಶುರುವಾಗಲಿದೆ ಬಿಗ್​ಬಾಸ್​ ಗ್ರ್ಯಾಂಡ್ ಓಪನಿಂಗ್​

    ಈ ಬಾರಿ ಬಿಗ್​ಬಾಸ್​ಗೆ ಹೋಗುವ ಪಕ್ಕಾ ಸ್ಪರ್ಧಿಗಳ ಮಾಹಿತಿ ಇಲ್ಲಿದೆ

ಕನ್ನಡದ ಬಹುನಿರೀಕ್ಷಿತ ಶೋ ಬಿಗ್​ಬಾಸ್​ ಸೀಸನ್​ 11 ಇಂದು ಸಂಜೆಯಿಂದಲೇ ಶುರುವಾಗಲಿದೆ. ಇಷ್ಟು ದಿನ ಇದಕ್ಕಾಗಿಯೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಸಂಜೆ 6 ಗಂಟೆಗೆ ಬಿಗ್​ಬಾಸ್​ ಸೀಸನ್​ 11ರ ಗ್ರ್ಯಾಂಡ್ ಓಪನಿಂಗ್​ ತೆರೆ ಕಾಣಲಿದೆ.

ಇದನ್ನೂ ಓದಿ: PHOTOS: ಮಿರ, ಮಿರ ಮಿಂಚಿದ ಕೀರ್ತಿ ಸುರೇಶ್.. ಈ ಗೋಲ್ಡನ್​ ಸ್ಯಾರಿಯ ವಿಶೇಷತೆ ಏನು ಗೊತ್ತಾ?

ಈಗಾಗಲೇ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳ ಪಕ್ಕಾ ಹೆಸರನ್ನು ನ್ಯೂಸ್​ ಫಸ್ಟ್​ ರಿವೀಲ್​ ಮಾಡಿದೆ. ಅದರಲ್ಲೂ ಈ ಬಾರಿಯ ಬಿಗ್​ಬಾಸ್​ಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಡ್ತಾ ಇದ್ದಾರೆ. ಸಿನಿಮಾ, ಸೀರಿಯಲ್​, ಸೋಷಿಯಲ್​ ಮೀಡಿಯಾ ಸೇರಿ ಹೀಗೆ ನಾನಾ ವಿಭಾಗಗಳಿಂದ ಕಂಟೆಸ್ಟಂಟ್​ಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಈ ಬಾರಿಯ ಬಿಗ್​ಬಾಸ್​ಗೆ ಹೋಗುವ ಪಕ್ಕಾ 10 ಸರ್ಧಿಗಳ ಬಗ್ಗೆ ತಿಳಿಯೋಣ.

ಇದೇ ಮೊಟ್ಟ ಮೊದಲ ಬಾರಿಗೆ ಗ್ರ್ಯಾಂಡ್​ ಓಪನಿಂಗ್​ ಮುಂಚೆಯೇ ಬಿಗ್​ಬಾಸ್​ ತಂಡ 4 ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿತ್ತು. ನಿನ್ನೆಯ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಸತ್ಯ ಸೀರಿಯಲ್​ ಖ್ಯಾತಿಯ ಗೌತಮಿ ಜಾಧವ್, ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್​ ಭೇಟಿ ಕೊಟ್ಟಿದ್ದರು. ಇದೀಗ ಇಂದು ಸಂಜೆ ಇನ್ನೂ 13 ಸ್ಪರ್ಧಿಗಳ ಹೆಸರನ್ನು ಅನೌನ್ಸ್ ಮಾಡಲಿದ್ದಾರೆ. ಅದಕ್ಕೂ ಮುಂಚೆ ನ್ಯೂಸ್​ ಫಸ್ಟ್​ಗೆ ಉಳಿದ 10 ಸ್ಪರ್ಧಿಗಳ ಹೆಸರುಗಳು ಗೊತ್ತಾಗಿದೆ.

ಹೌದು, ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್​ ಪತ್ನಿ ಮಾನಸ ಸಂತೋಷ್​ ಈ ಬಾರಿಯ ಬಿಗ್​ಬಾಸ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸ್ಯಾಂಡಲ್​ವುಡ್​ ನಟ ಧರ್ಮ ಕೀರ್ತಿ ರಾಜ್ ಅವರು ಕೂಡ ಈ ಬಾರಿಯ ಬಿಗ್​ಬಾಸ್​ಗೆ ಬರುತ್ತಿದ್ದಾರೆ. ಪಾರು ಸೀರಿಯಲ್​ ಮೂಲಕ ಖ್ಯಾತಿ ಪಡೆದುಕೊಂಡ ಮೋಕ್ಷಿತಾ ಪೈ ಅವರು ಎಂಟ್ರಿ ಕೊಡ್ತಾ ಇದ್ದಾರೆ.

ನಾಗಿಣಿ ಸೀರಿಯಲ್​ ಹಾಗೂ ರಿಯಾಲಿಟಿ ಶೋ ಮೂಲಕ ಅತಿ ಹೆಚ್ಚು ಫೇಮಸ್​ ಆಗಿದ್ದ ಐಶ್ವರ್ಯ ಶಿಂದೋಗಿ ಎಂಟ್ರಿ ಕೊಡ್ತಾ ಇದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್​ 2ರ ಮೂಲಕ ಖ್ಯಾತಿ ಪಡೆದುಕೊಂಡ ಹಾಸ್ಯ ಕಲಾವಿದ ಧನರಾಜ್ ಆಚಾರ್ಯ ಅವರು ಕೂಡ ವೀಕ್ಷಕರಿಗೆ ಮನರಂಜನೆ ನೀಡಲು ಬರ್ತಾ ಇದ್ದಾರೆ. ಪುಟ್ಟಕ್ಕನ ಮಕ್ಕಳು ಹಾಗೂ ಹಂಸ ನಾರಾಯಣಸ್ವಾಮಿ ಶೋನಲ್ಲಿ ಭಾಗಿಯಾಗಿದ್ದ ನಟಿ ಹಂಸ ನಾರಾಯಣಸ್ವಾಮಿ ಎಂಟ್ರಿ ಕೊಡ್ತಾ ಇದ್ದಾರೆ.

ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಷಾ ರೈ ಈ ಬಾರಿಯ ದೊಡ್ಮನೆಗೆ ಎಂಟ್ರಿ ಕೊಟ್ತಾ ಇದ್ದಾರೆ. ಜೊತೆಗೆ ಸೀರಿಯಲ್​ಗಳ ಮೂಲಕವೇ ಹುಡುಗಿಯರ ಮನಸ್ಸನ್ನು ಕಂಡಿದ್ದ ನಟ ತ್ರಿವಿಕ್ರಮ್ ಕೂಡ ಇಂದು ಬಿಗ್​ಬಾಸ್​ಗೆ ಎಂಟ್ರಿ ಕೊಡ್ತಾ ಇದ್ದಾರೆ. ಇಷ್ಟೂ ಜನ ಬಿಗ್​ಬಾಸ್​ಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡಲಿ ಸಜ್ಜಾಗಿದ್ದಾರೆ. ಈ ಬಗ್ಗೆ ಇಂದು ಸಂಜೆ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ಮೂಲಕ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!

https://newsfirstlive.com/wp-content/uploads/2024/09/bigg-boss-11-2.jpg

Load More