Advertisment

BIGG BOSS ರನ್ನರ್ ಅಪ್ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್.. ವಿನ್ನರ್ ಹನುಮಂತು ಬಗ್ಗೆ ಏನಂದ್ರು?

author-image
Bheemappa
Updated On
BIGG BOSS ರನ್ನರ್ ಅಪ್ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್.. ವಿನ್ನರ್ ಹನುಮಂತು ಬಗ್ಗೆ ಏನಂದ್ರು?
Advertisment
  • ತ್ರಿವಿಕ್ರಮ್​ಗೆ ಬಿಗ್ ವೆಲ್​ಕಮ್ ಹೇಳಿದ ಸ್ನೇಹಿತರು, ಕುಟುಂಬಸ್ಥರು
  • ರಜತ್ ಕಿಶನ್, ತ್ರಿವಿಕ್ರಮ್, ಹನುಮಂತು ಮನೆಯಲ್ಲಿ ಗೆದ್ದ ಸಂಭ್ರಮ
  • ಸುದೀಪ್ ಅವರನ್ನ​ ನೋಡಿ ಸ್ವಂತ ಅಣ್ಣನನ್ನೇ ನೋಡಿದಾಗೆ ಆಯಿತು

ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ವಿನ್ನರ್ ಆಗಿ ಹಳ್ಳಿಹೈದ, ಕುರಿಗಾಯಿ ಹನುಮಂತು ಅವರು ಹೊರ ಹೊಮ್ಮಿದ್ದಾರೆ. ತ್ರಿವಿಕ್ರಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ರಜತ್ 3ನೇಯವರಾಗಿ ಹೊರ ಹೊಮ್ಮಿದ್ದು ಸದ್ಯ ಸ್ಪರ್ಧಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾತ್ರಿಯೇ ರನ್ನರ್ ಅಪ್ ಸ್ಥಾನ ಪಡೆದ ತ್ರಿವಿಕ್ರಮ್ ಅವರಿಗೆ ಕುಟುಂಬಸ್ಥರು, ಸ್ನೇಹಿತರು ಬಿಗ್ ವೆಲ್​ಕಮ್ ಮಾಡಿದ್ದಾರೆ. ಇದಕ್ಕಾಗಿಯೇ ಇಷ್ಟು ದಿನ ಮನೆಯಲ್ಲಿ ಹೋರಾಡಿದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ.

Advertisment

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಬಿಗ್​​ಬಾಸ್ ಸೀಸನ್​- 11ರ ರನ್ನರ್ ಅಪ್ ಸ್ಪರ್ಧಿ ತ್ರಿವಿಕ್ರಮ್ ಅವರು, ಮೂವ್​ಮೆಂಟ್ ಫುಲ್ ಫಿಲ್ ಆಗಿದೆ. ತುಂಬಾ ಖುಷಿ ಆಗುತ್ತಿದೆ. ಮನೆಗೆ ಹೋದ ಮೊದಲ ದಿನದಿಂದಲೇ ಕೊನೆಯವರೆಗೂ ಇರುತ್ತೇನೆ ಎನ್ನುವ ಕಾನ್ಫಿಡೆನ್ಸ್ ಇತ್ತು. ರಜತ್ ಬಂದ ಮೇಲೆ ಸ್ಪರ್ಧೆ ಇನ್ನಷ್ಟು ಹೆಚ್ಚಿತ್ತು. ವೈರ್ಲ್ಡ್​​ಕಾರ್ಡ್ ಬಂದಿದ್ದರಿಂದ ಕಾನ್ಫಿಡೆನ್ಸ್ ಇತ್ತು. ಕೊನೆಯಲ್ಲಿ ಗೆಲುವು ಸೋಲು ಎನ್ನುವುದು ಮುಖ್ಯವಲ್ಲ. ನಾನು ಹೊರಗೆ ಬಂದ ಮೇಲೆ ಇಷ್ಟು ಜನರ ಪ್ರೀತಿ ಗೊತ್ತಾಯಿತು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: BBK11; ದೇವರಾಣೆಗೂ ಟ್ರೋಫಿ ಗೆಲ್ಲೋಕೆ ಬಂದಿಲ್ಲ, ಮಜಾ ಮಾಡಿ ಬರೋಣ ಅಂತಾ ಬಂದಿದ್ದೆ- ಹನುಮಂತು

ಒಳಗೆ ನಾವು ಏನೇನು ಮಾಡುತ್ತಿದ್ದೇವೆ, ಅದು ಹೊರಗಡೆ ಗೊತ್ತಾದಗ ಅದಕ್ಕಿಂತ ಖುಷಿ ಮತ್ತೊಂದು ಇಲ್ಲ. ಕಪ್ ಬಂದಿಲ್ಲ ಎನ್ನುವುದು ಒಂಚೂರು ಬೇಸರ ಇದೆ. ಆದರೆ ಅಮ್ಮ ಹೇಳಿದ ಅದೊಂದು ಮಾತು ಎಲ್ಲದಕ್ಕೂ ದೊಡ್ಡದಾಗಿ ಕಾಣಿಸಿದೆ. ಜನರ ಪ್ರೀತಿ ಗಳಿಸಿದೆಯಾ ಬಾ ಎಂದು ಅಮ್ಮ ಹೇಳಿದ್ದಾರೆ. ಸುದೀಪ್ ಅವರನ್ನು ವೇದಿಕೆಯಲ್ಲಿ ನೋಡಿದಾಗ ಸ್ವಂತ ಅಣ್ಣನನ್ನೇ ನೋಡಿದ ಫೀಲ್ ಆಗಿದೆ. ಇಲ್ಲಿದ್ದಾಗ ಏನೇನೋ ಯೋಚನೆ ಮಾಡುತ್ತೇವೆ. ಆದರೆ ಬಿಗ್​ಬಾಸ್​ನ 120 ದಿನ ಮುಗಿದ ಮೇಲೆ ರಿಸಲ್ಟ್ ಏನಾದರೂ ಪರವಾಗಿಲ್ಲ. ಈ ಮೂವ್​ಮೆಂಟ್​ ಎಂಜಾಯ್ ಮಾಡಬೇಕು ಅನಿಸುತ್ತೆ ಎಂದು ಹೇಳಿರು.

Advertisment

ವಿನ್ನರ್ ಯಾರೇ ಆಗಲಿ ಸ್ಟೇಜ್ ಮೇಲೆ ಬಂದು ನಿಲ್ಲೋದು ಅಷ್ಟೇ ನಮ್ಮ ಎಫರ್ಟ್​. ಕೋಟ್ಯಂತರ ಜನ ನನ್ನ ಆಟ ನೋಡಿ ವೋಟ್ ಮಾಡಿರುವುದು ಖುಷಿ ಇದೆ. ಸೀರಿಯಲ್​ನಲ್ಲೂ ಒಪ್ಪುಕೊಂಡಿದ್ದರು. ಇನ್ಮುಂದೆ ಬರುವ ಪ್ರಾಜೆಕ್ಟ್​ಗಳಲ್ಲೂ ನನ್ನನ್ನು ಒಪ್ಪಿಕೊಳ್ಳಿ ಎಂದು ಜನರ ಬಳಿ ಮನವಿ ಮಾಡಿದ್ದಾರೆ. ಫಿನಾಲೆ ಟಿಕೆಟ್ ಮಿಸ್ ಆದಾಗ ಬೇಸರ ಆಗಿತ್ತು. ಅಲ್ಲಿಯೂ ಹನುಮಂತನೇ ಗೆದ್ದಿದ್ದ. ಆದರೆ ನನಗೆ ಅದರ ಬಗ್ಗೆ ಅಂತಹದ್ದೇನು ಬೇಸರ ಇಲ್ಲ. ಹನುಮಂತು ಹೀಗೆ ಚೆನ್ನಾಗಿ ಆಡುತ್ತಿರು. ಕರ್ನಾಟಕಕ್ಕೆ ಗುಫ್ಟ್​ ನೀನು. ಕರ್ನಾಟಕದ ಕೊಗಿಲೇ ನೀನು. ಹಾಡುವುದನ್ನು ಯಾವತ್ತೂ ನಿಲ್ಲಿಸಬೇಡ. ಅರಾಮಾವಾಗಿರು ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment