/newsfirstlive-kannada/media/post_attachments/wp-content/uploads/2023/10/KICCHA_SUDEEP.jpg)
ಬಿಗ್‌ಬಾಸ್‌ಗೆ ಅಭಿಮಾನಿಗಳು ಜಾಸ್ತಿನೇ ಇದ್ದಾರೆ. ಅದು ಯಾಕ್ ಅಂತೀರಾ ಕಿಚ್ಚ ಸುದೀಪ್ ಇರ್ತಾರೆ ಅಂತಾ. ಸೀಸನ್ 1ರಿಂದ ಹಿಡಿದು 11ಕ್ಕೂ ನಿರೂಪಣೆ ಮಾಡ್ತಾ ಬಂದಿರೋ ಕಿಚ್ಚ ಸುದೀಪ್ ಕಾರ್ಯಕ್ರಮವನ್ನ ಹೆಗಲ ಮೇಲೆ ಹೊತ್ಕೊಂಡು ಸರಾಗವಾಗಿ ನಡೆಸಿಕೊಂಡು ಬರ್ತಿದ್ದಾರೆ. ಆದ್ರೀಗ ಕಿಚ್ಚ ಸುದೀಪ್ ಬಿಗ್‌ಬಾಸ್‌ಗೇ ವಿದಾಯ ಹೇಳಲು ಸಜ್ಜಾಗಿ ಶಾಕ್​​​ ನೀಡಿದ್ದಾರೆ.
ಬಿಗ್‌ಬಾಸ್.. ಇದು ತಮಾಷೆನೇ ಅಲ್ಲ.. ಬಿಗ್‌ಬಾಸ್ ಅಂದ್ರೆ ಕಿಚ್ಚ ಸುದೀಪ್.. ಸುದೀಪ್ ಅಂದ್ರೆ ಬಿಗ್‌ಬಾಸ್ ಅನ್ನೋ ಮಾತುಗಳು ವೀಕ್ಷಕರಲ್ಲಿ ಚಾಲ್ತಿಯಲ್ಲಿದೆ.. ವಾರ ಪೂರ್ತಿ ಬರೋ ಬಿಗ್‌ಬಾಸ್‌ನ ನೋಡ್ತಾರೋ ಇಲ್ವೋ ಗೊತ್ತಿಲ್ಲ.. ಆದ್ರೆ, ಶನಿವಾರ-ಭಾನುವಾರ ವಾರದ ಕಥೆ ಕಿಚ್ಚನ ಜೊತೆ ಫ್ರೋಗ್ರಾಂ ಮಿಸ್ಸೇ ಆಗಲ್ಲ. ಅಪಾರ ಅಭಿಮಾನಿ ಬಳಗ ಹೊಂದಿರೋ ಅಭಿಮಾನಿಗಳಿಗೇ ಶಾಕ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/10/KICCHA-SUDEEP.jpg)
ಬಿಗ್‌ಬಾಸ್ 1ರಿಂದ ಶುರುವಾಗಿ ಬಿಗ್‌ಬಾಸ್ 11ಕ್ಕೆ ಕಾಲಿಟ್ಟಿದೆ. ಶುರುವಾಗಿನಿಂದ ಹಿಡಿದು ಸತತ 11 ವರ್ಷಗಳ ಕಾಲ ನಿರೂಪಣೆ ಮಾಡ್ಕೊಂಡು ಬಂದಿರೋದು ಕಿಚ್ಚ ಸುದೀಪ್. ಅದೆಷ್ಟೋ ಪರಿಪೂರ್ಣ ಕಾರ್ಯಕ್ರಮ ನಡೆಸಿಕೊಂಡು ಬರ್ತಾರೆ ಅಂದ್ರೆ ಫ್ಯಾನ್ಸ್‌ಗೆ ಚಾನಲ್ ಚೇಂಜ್ ಮಾಡೋಕೇ ಮನಸ್ಸು ಬರಲ್ಲ. ಬಿಗ್‌ಬಾಸ್ ಬೇಗ ಶುರುವಾಗ್ಲಿ ಅಂತಾ ಕೆಲವೊಂದಿಷ್ಟು ಜನ ಕಾಯ್ದಿದ್ದು ಇದೆ. ಇನ್ನೊಂದಿಷ್ಟು ಮಂದಿ ಸುದೀಪ್ ಯಾವಾಗ ಬರ್ತಾರೋ ವೀಕೆಂಡ್ ಯಾವಾಗ ಬರುತ್ತೋ ಅಂತಾ ವೇಟ್ ಮಾಡ್ತಾರೆ. ಆದ್ರೀಗ ಅಭಿಮಾನಿಗಳಿಗೆ ನಿರಾಸೆ ಮಾಡಿರೋ ಕಿಚ್ಚ ಸುದೀಪ್, ಬಿಗ್‌ಬಾಸ್‌ಗೆ ವಿದಾಯ ಹೇಳಿದ್ದಾರೆ.
10 ವರ್ಷಗಳ ಪೂರೈಸಿ ಬಿಗ್‌ಬಾಸ್ 11ಕ್ಕೂ ಸುದೀಪ್ ಆ್ಯಂಕರ್ ಆಗಿರ್ಬೇಕು ಅಂತ ಅಭಿಮಾನಿಗಳು ಬಯಸಿದ್ರು. ಅದರಂತೆ ಬಿಗ್‌ಬಾಸ್ 11 ನಿರೂಪಣೆ ಮಾಡ್ತಿರೋದು ಸುದೀಪ್, ಮುಂದೆ ಬರೋ ಯಾವುದೇ ಸೀಸನ್ ಸುದೀಪ್ ನಿರೂಪಣೆ ಮಾಡಲ್ಲ. ಸ್ವತಃ ತಮ್ಮ ಎಕ್ಸ್ ಖಾತೆಯಲ್ಲಿ ಬಿಗ್‌ಬಾಸ್ 11ನೇ ಸೀಸನ್ ನನ್ನ ಕೊನೆಯ ಸೀಸನ್ ಆಗಿರುತ್ತೆ ಅಂತಾ ಅಂತ ಟ್ಟೀಟ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/kiccha-sudeep3.jpg)
ಬಿಗ್‌ಬಾಸ್ 11 ಆರಂಭ ಯಾವಾಗ ಆಯ್ತೋ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಅದೆಷ್ಟು ಅಭಿಮಾನಿಗಳು ಬಿಗ್‌ಬಾಸ್ ಕಾಯ್ತಿದ್ರು ಅನ್ನೋದು ಟಿವಿಆರ್‌ನಿಂದಲೇ ಗೊತ್ತಾಗುತ್ತೆ. 9.9 ಟಿಆರ್‌ಪಿ ಸಿಕ್ಕಿರೋದನ್ನ ಕಲರ್ಸ್ ಕನ್ನಡ ಪೋಸ್ಟ್ ಮಾಡಿತ್ತು. ಇಷ್ಟು ಅದ್ಭುತವಾಗಿ ನಿರೂಪಣೆ ಮಾಡ್ತಿದ್ದ ಸುದೀಪ್ ಅದ್ಯಾಕೆ ಈ ನಿರ್ಧಾರಕ್ಕೆ ಬಂದ್ರೋ ಗೊತ್ತಿಲ್ಲ. ಸೀಸನ್​​ 11ಕ್ಕೂ ಮುಂಚೆಯೇ ಸುದೀಪ್​​ ಹೋಸ್ಟ್​​ ಮಾಡಲ್ಲ ಅನ್ನೋ ಚರ್ಚೆ ಹಬ್ಬಿತ್ತು.. ಈಗ 11 ಬದಲಿ 12ರ ಸೀಸನ್​​ನಲ್ಲಿ ಸುದೀಪ್​​ ಕಾಣಿಸಲ್ಲ ಅನ್ನೋದು ಅಭಿಮಾನಿಗಳಿಗಂತೂ ನಿಜಕ್ಕೂ ಬೇಸರ ಆಗಿರೋದಂತು ಸತ್ಯ. ಇಂತಹ ನಿರ್ಧಾರಕ್ಕೆ ಕಾರಣವೇನು ಅನ್ನೋದಕ್ಕೆ ಫಾನ್ಸ್‌ಗೆ ಕಿಚ್ಚನೇ ಉತ್ತರ ನೀಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us