/newsfirstlive-kannada/media/post_attachments/wp-content/uploads/2024/10/JAGADEESH.jpg)
ಬಿಗ್​ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದು ಯಶಸ್ವಿಯಾಗಿ ಸಾಗುತ್ತಿದೆ. ಬಿಗ್ ಮನೆಯೊಳಗೆ ಸ್ಪರ್ಧಿಗಳು ಕೂಡ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಶನಿವಾರ-ಭಾನುವಾರ ಬಂದರೆ ಸಾಕು ಪ್ರೇಕ್ಷಕರೆಲ್ಲ ಕಿಚ್ಚನ ಪಂಚಾಯತಿಗಾಗಿ ಕಾಯುತ್ತಿರುತ್ತಾರೆ. ಶನಿವಾರದ ಪಂಚಾಯತಿಯಲ್ಲಿ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗಿತ್ತು. ಇದರ ಜೊತೆಗೆ ಏನೇನು ಆಗಿದೆ ಎಂದು ನಿಮಗೆಲ್ಲ ಗೊತ್ತಿದೆ. ಸದ್ಯ ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನೆಲ್ಲ ನಡೆಯಲಿದೆ?.
ಇಂದಿನ ಕಿಚ್ಚನ ಪಂಚಾಯತಿ ಫುಲ್ ಜೋಶ್​ನಲ್ಲಿ ಇರಬಹುದೆಂದು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹಂಸಾ ಅವರ ಕ್ಯಾಪ್ಟನ್ಸಿಯಲ್ಲಿ ಏನೇನು ಫೆಸಲಿಟಿ ಇತ್ತು ಎಂದು ಲಾಯರ್ ಜಗದೀಶ್​ಗೆ ಸುದೀಪ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಲಾಯರ್ ಜಗದೀಶ್ ಫುಲ್ ಕಾಮಿಡಿಯಾಗಿ ಉತ್ತರಿಸಿದ್ದು ಬೇಜಾರ ಎಂದರೆ ನನ್ನ ಜೊತೆ ಡುಯೇಟ್ ಮಾಡಿದ್ದು ಅಂತ ಹೇಳಿ ಎಲ್ಲ ಸ್ಪರ್ಧಿಗಳನ್ನ ನಕ್ಕು ನಲಿಸಿದ್ದಾರೆ.
ಇದನ್ನೂ ಓದಿ: BBK11: ಸೈಕಲ್ ಪಂಪ್, ಸೀಟಿ, ಕ್ಯಾಲ್ಕುಲೇಟರ್.. ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ ಕಳಚಿಟ್ಟ ಕಿಚ್ಚ ಸುದೀಪ್!
/newsfirstlive-kannada/media/post_attachments/wp-content/uploads/2024/10/JAGADEESH_1.jpg)
ಇನ್ನು ಹಂಸಾನೂ ಮಾತನಾಡಿ ಲಾಯರ್ ಬಳಿ ಮಾತಿನಿಂದ ಗೆಲ್ಲಲು ಆಗಲ್ಲ. ಮನಸಾದ್ರೂ ಗೆದ್ದರೇ ನನ್ನ ಕೆಲಸ ಮಾಡಿಕೊಳ್ಳಬಹುದು ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಕಿಚ್ಚ ಏನ್​ ಗೆದ್ದರೇ ಎಂದು ಪ್ರಶ್ನಿಸುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಇನ್ನು ಧನ್​ರಾಜ್ ಕೂಡ ಪಂಚಾಯತಿಯಲ್ಲಿ ಲಾಯರ್​ ಬಗ್ಗೆ ಮಾತನಾಡಿ, ರಾತ್ರಿ ಮಲಗಿಕೊಳ್ಳಬೇಕಾದರೆ, ನನಗೆ ಫೀಲ್ ಆಗ್ತಿದೆ. ನನ್ನ ಹೆಂಡತಿ ಜೊತೆ ಒಂದು ಸಾರಿನೂ ಈ ತರ ಡುಯೇಟ್ ಮಾಡಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ. ಇನ್ನು ಜಗದೀಶ್ ಹಾಗೂ ಹಂಸಾ ಸಾಂಗ್​ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೆಲ್ಲ ನೋಡಲು ಇನ್ನು ಕೆಲ ಗಂಟೆ ಕಾಯಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us