BBK11: ಅಬ್ಬಬ್ಬಾ.. ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸ್ಪರ್ಧಿ ಇವರೇ ನೋಡಿ

author-image
Veena Gangani
Updated On
BBK11: ಅಬ್ಬಬ್ಬಾ.. ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸ್ಪರ್ಧಿ ಇವರೇ ನೋಡಿ
Advertisment
  • ಬಿಗ್​ಬಾಸ್​​ ಸೀಸನ್​​ 11ರ ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಗೊತ್ತಾ?
  • ನನ್ನ ಚಪ್ಪಾಳೆ ಇವರಿಗೆ ಸಲ್ಲಬೇಕು ಅಂತ ಕಿಚ್ಚ ಹೇಳಿದ್ದ ಸ್ಪರ್ಧಿ ಇವರು
  • ಇಂದಿನ ಕಿಚ್ಚನ ಎಪಿಸೋಡ್​ನಲ್ಲಿ ಕುತೂಹಲಕಾರಿ ವಿಷಯಗಳ ಬಗ್ಗೆ ಚರ್ಚೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ನಾಲ್ಕು ವಾರದ ಕೊನೆಯ ದಿನದಲ್ಲಿದೆ. ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದ ಬಿಗ್​ಬಾಸ್​ ಸೀಸನ್​ 11ರಲ್ಲಿ 14 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​ಬಾಸ್​ ಸೀಸನ್​ 11 ಶುರುವಾದ ನಾಲ್ಕನೇ ವಾರಕ್ಕೆ ಕಿಚ್ಚ ಸುದೀಪ್​ ಅವರು ತಮ್ಮ ಕೈಯಿಂದ ಈ ಸ್ಪರ್ಧಿಯ ಆಟಕ್ಕೆ ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ:BBK11: ಕಿಚ್ಚನ ಚಪ್ಪಾಳೆಯಲ್ಲೂ ಬಿಗ್ ಟ್ವಿಸ್ಟ್.. ಗಿಫ್ಟ್‌ ಕೊಟ್ಟು ಕ್ಲಾಸ್ ತೆಗೆದುಕೊಂಡ ಸುದೀಪ್; ಹೇಳಿದ್ದೇನು?

publive-image

ಬಿಗ್​ಬಾಸ್​ ಸೀಸನ್​ 11ರಲ್ಲಿ ಮೊದಲ ಬಾರಿಗೆ ಸ್ಪೆಷಲ್​ ಆಗಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಅಂತ ವೀಕ್ಷಕರು ಹಾಗೂ ಬಿಗ್​ಬಾಸ್​ ಸ್ಪರ್ಧಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಅಚ್ಚರಿಯ ರೀತಿಯಲ್ಲಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಶಹಬ್ಬಾಸ್ ಎಂದಿದ್ದಾರೆ.  ಹೌದು, ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಗಾಯಕ ಹನುಮಂತ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಬಿಗ್​ಬಾಸ್​ ಮನೆಗೆ ಬಂದ ಎರಡೇ ವಾರಕ್ಕೆ ಮೂರು ತ್ರಿಬಲ್ ಧಮಾಕಾ ಪಡೆದುಕೊಂಡಿದ್ದಾರೆ. ಒಂದು ಬಿಗ್​ಬಾಸ್​ಗೆ ಬಂದ ಮೊದಲ ದಿನವೇ ಕ್ಯಾಪ್ಟನ್​ ಪಟ್ಟ ಪಡೆದುಕೊಂಡಿದ್ದರು. ಎರಡನೇದು ಕಷ್ಟ ಪಟ್ಟು ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೊಮ್ಮೆ ಕ್ಯಾಪ್ಟನ್ ಆದ್ರು. ಇದೀಗ ಕಿಚ್ಚ ಸುದೀಪ್​ ಅವರಿಂದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡು ಮತ್ತೊಂದು ರೆಕಾರ್ಡ್ ಮಾಡಿದ್ದಾರೆ.

publive-image

ಇದನ್ನೂ ಓದಿ:ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ

ಕಿಚ್ಚ ಸುದೀಪ್​ ಅವರು ಸುಖಾ ಸುಮ್ಮನೆ ಚೆಪ್ಪಾಳೆ ತಟ್ಟುವುದಿಲ್ಲ. ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು. ಈ ಹೊಸ ಅಧ್ಯಾಯದೊಂದಿಗೆ ಬಿಗ್​ಬಾಸ್ ಮನೆಗೆ ಬಂದಿದ್ದ 17 ಸ್ಪರ್ಧಿಗಳಲ್ಲಿ ಮೊದಲ ವಾರದಿಂದ ಮೂರನೇ ವಾರದವರೆಗೂ ಕಿಚ್ಚ ಸುದೀಪ್​ ಯಾರುಗೂ ‘ಕಿಚ್ಚನ ಚಪ್ಪಾಳೆ’ ಸಿಕ್ಕಿರಲಿಲ್ಲ. ಆದರೆ ಇದೀಗ ನಾಲ್ಕನೇ ವಾರಕ್ಕೆ ಕಿಚ್ಚ ಸುದೀಪ್​ ತಮ್ಮ ಚಪ್ಪಾಳೆಯನ್ನು ಹನುಮಂತ ಅವರಿಗೆ ಕೊಟ್ಟಿದ್ದಾರೆ. ಇನ್ನೂ, ಕಿಚ್ಚ ಸುದೀಪ್​ ಈ ವಾರದ ಕಿಚ್ಚನ ಚಪ್ಪಾಳೆ ಹನುಮಂತಗೆ ಅಂತ ಹೇಳಿದ ಕೂಡಲೇ ಮನೆಯಲ್ಲಿರೋ ಸಹ ಸ್ಪರ್ಧಿಗಳು ಶಾಕ್​ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment