ಅಬ್ಬಾ.. ಭವ್ಯಾ, ಯಮುನಾಗೆ ಸಿಕ್ತು ಬಂಪರ್ ಆಫರ್‌.. ಬಿಗ್‌ ಬಾಸ್ 11 ಅಸಲಿ ಆಟನೇ ಬೇರೆ!

author-image
admin
Updated On
BBK11: ಬಿಗ್​ಬಾಸ್​ ಮನೆಯಿಂದ ಮೊದಲ ವಾರವೇ ಔಟ್​ ಆದ ಸ್ಪರ್ಧಿ ಇವರೇ ನೋಡಿ
Advertisment
  • ಬಿಗ್ ಬಾಸ್ ಹೊಸ ಮನೆಗೆ ಭವ್ಯಾ ಗೌಡ, ಯಮುನಾ ಶ್ರೀನಿಧಿ ಪ್ರವೇಶ
  • 17ರಲ್ಲಿ ಸ್ವರ್ಗಕ್ಕೆ ಹೋಗೋರು ಯಾರು? ನರಕಕ್ಕೆ ಹೋಗೋರು ಯಾರು?
  • ನಾವು ಹೇಳುವುದನ್ನ ಮನೆಯ ಸ್ಪರ್ಧಿಗಳಿಗೆ ತೋರಿಸಬೇಡಿ ಎಂದ ಭವ್ಯಾ

ಕನ್ನಡ ಕಿರುತೆರೆಯ ಬಿಗ್‌ ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಆರಂಭವಾಗಿದೆ. ಹೊಸ ಅಧ್ಯಾಯದಲ್ಲಿ ಕಿಚ್ಚ ಸುದೀಪ್ ಒಬ್ಬೊಬ್ಬ ಸ್ಪರ್ಧಿಯನ್ನ ಸ್ವಾಗತಿಸುತ್ತಿದ್ದಾರೆ. ಮೊದಲನೆಯ ಸ್ಪರ್ಧಿಯಾಗಿ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಗೆ ಭವ್ಯಾ ಗೌಡ, ಯಮುನಾ ಶ್ರೀನಿಧಿ ಅವರು ಕಾಲಿಡುತ್ತಿದ್ದಂತೆ ಹೊಸ ಮನೆಯನ್ನೆಲ್ಲಾ ಒಂದು ರೌಂಡ್ ಹಾಕಿ ಸಖತ್ ಖುಷಿ ಪಟ್ಟಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಆರಂಭದಲ್ಲೇ ಒಂದು ಹೊಸ ಟ್ವಿಸ್ಟ್ ಕೊಟ್ಟಿದೆ. ರಿಯಾಲಿಟಿ ಶೋನ ಅಸಲಿ ಆಟ ಅಂದ್ರೆ ಇದು ಅನ್ನೋ ಹಾಗೆ ಬಿಗ್ ಬಾಸ್ ಸೀಸನ್ 11 ಹೊಸ ಕಿಚ್ಚು ಹಚ್ಚಿದೆ.

ಬಿಗ್‌ ಬಾಸ್ ಸೀಸನ್ 11ರ ಮೊದಲ ಎರಡು ಸ್ಪರ್ಧಿಗಳಿಗೆ ವಿಶೇಷವಾದ ಒಂದು ಅಧಿಕಾರ ನೀಡಲಾಗಿದೆ. ಅದು ಏನಂದ್ರೆ ಭವ್ಯಾ ಹಾಗೂ ಯಮುನಾ ಅವರ ಬಳಿಕ ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳು ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು ಅನ್ನೋದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಬಿಗ್​ಬಾಸ್​ ಆರಂಭದಲ್ಲೇ ಬಿಗ್​ ಟ್ವಿಸ್ಟ್​ ಕೊಟ್ಟ ಕಿಚ್ಚ ಸುದೀಪ್​; ಒಂದೇ ವೇದಿಕೆಗೆ ಇಬ್ಬರು ಕಂಟೆಸ್ಟೆಂಟ್ ಎಂಟ್ರಿ 

ಭವ್ಯಾ ಹಾಗೂ ಯಮುನಾ ಅವರಿಗೆ ಮುಂದಿನ ಸ್ಪರ್ಧಿಗಳು ಸುದೀಪ್ ಅವರ ಜೊತೆ ವೇದಿಕೆಯಲ್ಲಿ ಮಾತನಾಡುವುದನ್ನು ತೋರಿಸಲಾಗುತ್ತಿದೆ. ಆ ಸದಸ್ಯರ ಮಾತುಕತೆಯ ಆಧಾರದ ಮೇಲೆ ಅವರ ವ್ಯಕ್ತಿತ್ವ ಸ್ವರ್ಗಕ್ಕೆ ಹೊಂದಿಕೊಳ್ಳುತ್ತಾ? ಅಥವಾ ನರಕಕ್ಕೆ ಹೊಂದಿಕೊಳ್ಳುತ್ತಾ ಅನ್ನೋದನ್ನ ಇವರಿಬ್ಬರು ನಿರ್ಧಾರ ಮಾಡಬೇಕಿದೆ.

ಮುಂದಿನ ಸ್ಪರ್ಧಿಗಳು ಸ್ವರ್ಗ, ಅಥವಾ ನರಕಕ್ಕೆ ಹೊಂದಿಕೊಳ್ಳುತ್ತಾ ಅನ್ನೋದನ್ನ ಭವ್ಯ ಹಾಗೂ ಯಮುನಾ ಅವರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು. ಇವರಿಬ್ಬರ ನಿರ್ಧಾರದ ಅನುಸಾರ ಮುಂದಿನ ಸ್ಪರ್ಧಿಗಳನ್ನು ಸ್ವರ್ಗ ಹಾಗೂ ನರಕಕ್ಕೆ ಕಳುಹಿಸಲಾಗುತ್ತೆ ಎನ್ನಲಾಗಿದೆ. ಈ ವಿಶೇಷ ಅಧಿಕಾರದ ಬಗ್ಗೆ ಮಾತನಾಡಿರುವ ಭವ್ಯಾ ಗೌಡ ಅವರು ನಾವು ಹೇಳುವುದನ್ನ ಹೊರಗಿನ ಜನರಿಗೆ ತೋರಿಸಿ ಆದರೆ ಇಲ್ಲಿನವರಿಗೆ ತೋರಿಸಬೇಡಿ. ಆಮೇಲೆ ಎಲ್ಲರೂ ನಮಗೆ ಚೆನ್ನಾಗಿ ಹಾಕೊಂಡು ರುಬ್ಬುತ್ತಾರೆ ಎಂದಿದ್ದಾರೆ. ಭವ್ಯಾ, ಯಮುನಾ ಇಬ್ಬರ ನಿರ್ಧಾರ ಈಗ ಸ್ವರ್ಗ, ನರಕಕ್ಕೆ ಹೋಗುವ ಸ್ಪರ್ಧಿಗಳನ್ನು ನಿರ್ಧಾರ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment