/newsfirstlive-kannada/media/post_attachments/wp-content/uploads/2024/12/BBK11.jpg)
ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತ ಕನ್ನಡದ ಬಿಗ್ ರಿಯಾಲಿಟಿ ಸೋ ಬಿಗ್ ಬಾಸ್ 11ನೇ ವಾರದತ್ತ ಮುನ್ನುಗ್ಗುತ್ತಿದೆ. ಮನೆಯಲ್ಲಿ ಮೊದಲಿನಂತೆ ಇಲ್ಲ. ಒಬ್ಬರ ಮೇಲೆ ಒಬ್ಬರು ದೂರು ಹೇಳುವುದು ಕಾಮನ್ ಆಗಿದೆ. ಅದರಂತೆ ಇದೀಗ ಪ್ರೋಮೋ ರಿಲೀಸ್ ಆಗಿದ್ದು ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎಂದು ರಜತ್ ಅವರು ಹೇಳಿದ್ದಾರೆ.
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ್ ಅವರ ವಿಡಿಯೋ ಬಿಡುಗಡೆ ಮಾಡಲಾಗಿದೆ. ಯಾವ ಸ್ಪರ್ಧಿ ಬಿಗ್ ಬಾಸ್ ಮನೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ತಿಳಿದುಕೊಳ್ಳಲು ಇಳಿಕೆ ಕ್ರಮದಲ್ಲಿ (ದೊಡ್ಡ ಸಂಖ್ಯೆಯಿಂದ ಚಿಕ್ಕ ಸಂಖ್ಯೆ) ಕಿಚ್ಚ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋದಲ್ಲಿ ಒಬ್ಬರ ಮೇಲೆ ಒಬ್ಬರು ದೂರು ಹೇಳಿದ್ದು ಇಳಿಕೆ ಕ್ರಮದಲ್ಲಿ ಆ ಸ್ಪರ್ಧಿಗಳ ಫೋಟೋಗಳನ್ನು ಮನೆಯ ಸದಸ್ಯರೇ ಜೋಡಿಸಿದ್ದಾರೆ.
ಇದನ್ನೂ ಓದಿ:ಗ್ರಾಹಕರಿಗೆ ಬಿಗ್ ಆಫರ್ ಕೊಟ್ಟ BSNL.. ಕೇವಲ ₹999 ರೀಚಾರ್ಜ್ ಮಾಡಿಸಿದ್ರೆ ಏನೆಲ್ಲಾ ಸಿಗುತ್ತೆ ಗೊತ್ತಾ?
ಈ ವೇಳೆ ಕಿಚ್ಚನ ಮುಂದೆ ಒಬ್ಬರಿಗೊಬ್ಬರು ದೂರು ಹೇಳಿದ್ದು ಗೌತಮಿ ಅವರು ಸೌಂಡ್ ಮಾಡುವಂತದ್ದು ಏನಿಲ್ಲ ಎಂದು ಮಂಜು ಹೇಳಿದ್ದಾರೆ. ಇವರ ಬಳಿಕ ಹನುಮಂತು 1ನೇ ಸ್ಥಾನದಲ್ಲಿ ಫೋಟೋ ಇಟ್ಟುಕೊಟ್ಟಿದ್ದಾರೆ. ಈ ವೇಳೆ ರಜತ್ ಅವರು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಎಂದು ರಜತ್ ಅವರು ಹೇಳಿದ್ದಾರೆ. ರಜತ್ ಅವರು ಮನೆಗೆ ಬಂದು 3 ವಾರ ಆಯಿತು. ಆದರೆ ಅವರು ಮನೆಗೆ ಅಷ್ಟಾಗಿ ಕೊಡುಗೆ ಕೊಟ್ಟಿಲ್ಲ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.
ಫಸ್ಟ್ ಗಾಬರಿ ಬಿದ್ದು ಡೋರ್ ಒಡೆದವರು ಟಾಸ್ಕ್ ಬಿಟ್ಟು ಮತ್ತೆ ಏನು ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ರಜತ್ ಅವರು, ಗೋಲ್ಡ್ ಸುರೇಶ್ಗೆ ಟಕ್ಕರ್ ಕೊಟ್ಟಿದ್ದಾರೆ. ಇನ್ನು ವಾರದ ಕತೆ ಕಿಚ್ಚನ ಜೊತೆಯಲ್ಲಿ ರಜತ್ ಹಾಗೂ ಗೌತಮಿ ಅವರನ್ನು ನಿನ್ನೆ ಸೇಫ್ ಮಾಡಲಾಗಿತ್ತು. ಹೀಗಾಗಿ ಇಂದು ಮಂಜು, ಮೋಕ್ಷಿತಾ, ಚೈತ್ರಾ, ಭವ್ಯಾ, ಗೋಲ್ಡ್ ಸುರೇಶ್, ಐಶ್ವರ್ಯಾ ಇವರಲ್ಲಿ ಒಬ್ಬರು ಮನೆಯಿಂದ ಹೊರ ಬರಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ