BBK11: ವಿನ್ನರ್‌ ಹನುಮಂತುಗೆ ಇರೋದೇ 2 ಆಸೆ.. ಬಿಗ್ ಬಾಸ್‌ನಲ್ಲಿ ಗೆದ್ದ ಹಣ ಏನ್‌ ಮಾಡ್ತಾರೆ ಗೊತ್ತಾ?

author-image
admin
Updated On
Bigg Boss ಗೆದ್ದ ಮಾತ್ರಕ್ಕೆ ಕುರಿ ಕಾಯುವ ಕಾಯಕ ಬಿಡಲ್ಲ -ಹನುಮಂತು ಪಂಚ್
Advertisment
  • ಗ್ರ್ಯಾಂಡ್ ಫಿನಾಲೆ ಮುಗಿದ ಮೇಲೆ ಕಾಣಿಯಾಗಿದ್ರಾ ಹನುಮಂತು?
  • ಬಿಗ್ ಬಾಸ್ ಫಿನಾಲೆಯ ಬಳಿಕ ವಿನ್ನರ್ ಹನುಮಂತ ಸುದ್ದಿಗೋಷ್ಟಿ
  • ಬಿಗ್ ಬಾಸ್ ಗೆದ್ದ ಮೇಲೆ ಮೊದಲ ಬಾರಿಗೆ ತನ್ನ ಆಸೆ ಬಿಚ್ಚಿಟ್ಟ ವಿನ್ನರ್

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಗ್ರ್ಯಾಂಡ್ ಫಿನಾಲೆ ಮುಗಿಯುತ್ತಿದ್ದಂತೆ ಕಾಣೆಯಾಗಿದ್ದರು. ಎಲ್ಲಿ ಹೋದರು ಅಂತ ಹುಡುಕಾಡುತ್ತಿದ್ದವರಿಗೆ ಹನುಮಂತ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಬಿಗ್ ಬಾಸ್ ತಂಡದ ಸುದ್ದಿಗೋಷ್ಟಿಯಲ್ಲಿ ಹನುಮಂತ ಮನಬಿಚ್ಚಿ ಮಾತನಾಡಿದ್ದಾರೆ.

publive-image

ಬಿಗ್ ಬಾಸ್ ಫಿನಾಲೆಯ ಬಳಿಕ ವಿನ್ನರ್ ಹನುಮಂತ ಹಾಗೂ ರನ್ನರ್‌ಗಳಾದ ತ್ರಿವಿಕ್ರಮ್, ರಜತ್ ಹಾಗೂ ಬಿಗ್ ಬಾಸ್ ಮುಖ್ಯಸ್ಥರು ಮಾತನಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿನ್ನರ್ ಹನುಮಂತು ನಾನು ಎಲ್ಲಿ ಹೋದ ಎಲ್ಲೋದ ಅಂತಾ ಹುಡುಕ್ತಿದ್ರಂತಾ ನಾನು ಮಲಗಿದ್ದೆ. ಇವಾಗ ಎದ್ದು ಬಂದೀನಿ ಎಂದು ಹನುಮಂತ ಉತ್ತರಿಸಿದ್ದಾರೆ.

ಇದನ್ನೂ ಓದಿ: BBK11: ಹನುಮಂತ ಗೆದ್ದಿದ್ದು ಸರಿಯಿಲ್ಲ.. ಬಿಗ್​ಬಾಸ್​ ವಿನ್ನರ್‌ ಮೇಲೆ ತ್ರಿವಿಕ್ರಮ್ ತಾಯಿಗೆ ಬೇಸರ; ಏನಂದ್ರು? 

ಬಿಗ್ ಬಾಸ್ ಫಿನಾಲೆ ಮುಗಿದ ಮೇಲೆ ಮಲಗಿದ್ದು, ಲೇಟ್ ಆಗಿ ಎದ್ದಿದ್ದೀನಿ. ಹೀಗಾಗಿ ಇದುವರೆಗೂ ಯಾರಿಗೂ ನಾನು ಸಿಗಲಿಲ್ಲ ಅಷ್ಟೇ. ಹೀಗಾಗಿ ಯಾರು ಬೇಜಾರ್ ಮಾಡಿಕೊಳ್ಳಬೇಡಿ. ಬಿಗ್ ಬಾಸ್ ನಲ್ಲಿ ನನ್ನನ್ನು ಗೆಲ್ಲಿಸಿದ್ದಕ್ಕೆ ಹನುಮಂತು ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

publive-image

ಮಾತು ಮುಂದುವರಿಸಿದ ಹನುಮಂತು ನಾನು ಬಿಗ್ ಬಾಸ್ ಕಪ್ ಗೆಲ್ಲುವ ನಂಬಿಕೆ ನನಗೆ ಇರಲಿಲ್ಲ. ನಮ್ಮ ಸ್ನೇಹಿತರು ಸುದೀಪ್ ಸಾರ್ ಇರೋದ್ರೊಳಗೆ ಬಿಗ್ ಬಾಸ್ ಮನೆಗೆ ಹೋಗು ಅಂತ ಹೇಳಿದ್ರು. ಹಾಗಾಗಿ ಈ ಸೀಸನ್‌ಗೆ ನಾನು ಬಂದೆ ಎಂದಿದ್ದಾರೆ.

ಬಿಗ್ ಬಾಸ್ ಟ್ರೋಫಿ ಗೆದ್ದಿರುವ ಹನುಮಂತು ಬಂದ ಬಹುಮಾನದ ಹಣದಲ್ಲಿ ಏನು ಮಾಡುತ್ತೇನೆ ಅನ್ನೋ ಪ್ರಶ್ನೆಗೂ ಉತ್ತರಿಸಿದ್ದಾರೆ. ಬಿಗ್ ಬಾಸ್‌ನಿಂದ ಬಂದ ಈಗ ಇರುವ ತಗಡಿನ ಮನೆಯನ್ನ ರಿಪೇರಿ ಮಾಡಿಸುತ್ತೇನೆ. ಆಮೇಲೆ ಮದುವೆ ಆಗುತ್ತೇನೆ. ಈ 2 ಆಸೆ ನನಗಿದೆ ಎಂದು ಹನುಮಂತು ಇಡೀ ನಾಡಿನ ಜನತೆಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment