newsfirstkannada.com

ಅನಿರೀಕ್ಷಿತವಾಗಿ ಮನೆಗೆ ಬಂದ ಪೊಲೀಸರಿಗೆ ಶಾಕ್​; ಗಾಂಜಾ ಸಮೇತ ಸಿಕ್ಕಿಬಿದ್ದ ಬಿಗ್​ಬಾಸ್​ ರನ್ನರ್ ಅಪ್‌!

Share :

Published February 22, 2024 at 6:35pm

     ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಷಣ್ಮುಖ್ ಜಸ್ವಂತ್

    ತಮ್ಮನನ್ನು ಲಾಕ್ ಮಾಡಲು ಹೋಗಿ ಅಣ್ಣನನ್ನು ಅರೆಸ್ಟ್ ಮಾಡಿದ ಪೊಲೀಸ್

    ಬಿಗ್​ಬಾಸ್​ ಸೀಸನ್​ 5ರ ರನ್ನರ್‌ ಅಪ್​ ಪಟ್ಟವನ್ನು ಗಿಟ್ಟಿಸಿಕೊಂಡಿದ್ದ ಷಣ್ಮುಖ್

ತೆಲುಗಿನ ಖ್ಯಾತ ಯೂಟ್ಯೂಬರ್ ಹಾಗೂ ಬಿಗ್​ಬಾಸ್ ಸೀಸನ್​ 5ರ ರನ್ನರ್ ಅಪ್ ಆಗಿದ್ದ ಷಣ್ಮುಖ್ ಜಸ್ವಂತ್ ಗಾಂಜಾದೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿಕೊಂಡಿರೋ ಷಣ್ಮುಖ್ ಜಸ್ವಂತ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಕೋಟ್ಯಂತರ ಫಾಲೋವರ್ಸ್ ಅನ್ನು ಯುಟ್ಯೂಬ್ ಚಾನೆಲ್​ನಲ್ಲಿ ಹೊಂದಿದ್ದ ಕಾರಣ ಬಿಗ್​ಬಾಸ್​ ಸೀಸನ್​ 5ಕ್ಕೆ ಹೋಗಲು ಒಳ್ಳೆಯ ಚಾನ್ಸ್​ ಸಿಕ್ಕಿತ್ತು. ಷಣ್ಮುಖ್ ಜಸ್ವಂತ್ ಅವರ ತಮ್ಮ ಸಂಪತ್ ವಿನಯ್ ಮಾಡಿದ ತಪ್ಪಿಗೆ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಕರಣವೊಂದರಲ್ಲಿ ಷಣ್ಮುಖ್ ಜಸ್ವಂತ್ ಸಹೋದರ ಸಂಪತ್ ವಿನಯ್‌ನನ್ನು ಬಂಧಿಸಲು ಹೋದಾಗ ಅನಿರೀಕ್ಷಿತವಾಗಿ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾರೆ.

ಅಸಲಿಗೆ ಆಗಿದ್ದೇನು..?

ಈ ಹಿಂದೆ ವೈದ್ಯ ಗೆಳತಿಯೊಂದಿಗೆ ಸಂಪತ್ ವಿನಯ್ ಲೀವ್ ಇನ್ ರಿಲೇಷನ್ ಶಿಪ್​ನಲ್ಲಿ ಇದ್ದರಂತೆ. ನಂತರ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೆ ಹುಡುಗಿಯ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ಮುಂದೂಡಲಾಗಿತ್ತು. ಅದೇ ಏಕೆ ಕೆಲವೊಂದು ಕಾರಣಗಳಿಂದ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿತ್ತು. ನಂತರ ಸಂಪತ್ ಬೇರೆ ಹುಡುಗಿಯೊಂದಿಗೆ ಮದುವೆ ಆಗಿದ್ದರಂತೆ. ಇದನ್ನು ಪ್ರಶ್ನಿಸಿ ವೈದ್ಯ ಗೆಳತಿ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ಪೊಲೀಸರು ಸಂಪತ್​ನನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದ್ದಾರೆ. ಅದೇ ವೇಳೆ ಸಂಪತ್ ಮನೆಯಲ್ಲಿ ಇರಲಿಲ್ಲ. ಬದಲಾಗಿ ಆ ವೇಳೆಯಲ್ಲಿ ಷಣ್ಮುಖ್ ಜಸ್ವಂತ್ ಗಾಂಜಾ ಸೇವಿಸುತ್ತಿದ್ದರಂತೆ. ತಮ್ಮನನ್ನು ಲಾಕ್ ಮಾಡಲು ಹೋಗಿದ್ದ ಪೊಲೀಸರು ಅಣ್ಣನನ್ನು ಸ್ಟೇಷನ್​ಗೆ ಕರೆದುಕೊಂಡು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಿರೀಕ್ಷಿತವಾಗಿ ಮನೆಗೆ ಬಂದ ಪೊಲೀಸರಿಗೆ ಶಾಕ್​; ಗಾಂಜಾ ಸಮೇತ ಸಿಕ್ಕಿಬಿದ್ದ ಬಿಗ್​ಬಾಸ್​ ರನ್ನರ್ ಅಪ್‌!

https://newsfirstlive.com/wp-content/uploads/2024/02/Shanmukh-drgs.jpg

Load More