/newsfirstlive-kannada/media/post_attachments/wp-content/uploads/2025/02/HANUMANTHA-1.jpg)
ಹಾವೇರಿ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಲ್ಲಿ ಹನುಮಂತು ಎಲ್ಲ ಮನ ಗೆಲ್ಲುವ ಜೊತೆಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು. ಅವರ ಕುಟುಂಬ ಸೇರಿದಂತೆ ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿತ್ತು. ಇದಾದ ಮೇಲೆ ಹನುಮಂತನಿಗೆ ಬಿಡುವಿಲ್ಲದ ಕಾರ್ಯಕ್ರಮಗಳು ಬರತೊಡಗಿವೆ. ಅದರಂತೆ ಹೊಸ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟ ಹನುಮಂತು ಬಿಗ್ಬಾಸ್ ಡೈಲಾಗ್ ಹೊಡೆದು ರಂಜಿಸಿದ್ದಾರೆ.
ಹಾವೇರಿಯ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಗಿತ್ತು. ಈ ಅದ್ಧೂರಿ ಸಮಾರಂಭದಲ್ಲಿ ಮನರಂಜನೆ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿತ್ತು. ಇದನ್ನು ಬಿಗ್ಬಾಸ್ ವಿನ್ನರ್ ಹನುಮಂತು ಅವರು ಅತ್ಯಂತ ಸಂಸತದಿಂದ ನಡೆಸಿಕೊಟ್ಟಿದ್ದಾರೆ.
ಇದನ್ನೂ ಓದಿ: ದೆಹಲಿ ಸಿಎಂ ರೇಸ್ನಲ್ಲಿ ಐವರು.. ಯಾರಿಗೆ ಒಲಿಯಲಿದೆ ಇಂದ್ರಪ್ರಸ್ಥದ ಸಿಂಹಾಸನ!
ಮನರಂಜನೆ ಕಾರ್ಯಕ್ರಮದಲ್ಲಿ ಹನುಮಂತನ ಮಾತಿಗೆ ಜನರು ನಕ್ಕು ನಕ್ಕು ಸುಸ್ತಾದರು. ಅಲ್ಲದೇ ಬಿಗ್ಬಾಸ್ ಮನೆಯಲ್ಲಿ ಟ್ರೋಫಿ ಮುಂದೆ ಹೇಳಿದ್ದ ಡೈಲಾಗ್ ಅನ್ನು ಮತ್ತೊಮ್ಮೆ ಹೇಳಿದರು. ಬಿಗ್ ಬಾಸ್ ಕಾರ್ಯಕ್ರಮದ ಡೈಲಾಗ್ ಹೊಡೆದ ಹನುಮಂತು ಕಪ್ ಗೆದ್ದೇ ನಬೇ ಅವ್ವ.. ಎಂದು ಡೈಲಾಗ್ ಹೊಡೆದು ಎಲ್ಲರನ್ನು ರಂಜಿಸಿದರು.
ಇದಾದ ಮೇಲೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಹೀಗೆ ಇರಲಿ, ಐದೂವರೆ ಕೋಟಿ ಜನರು ವೋಟ್ ಮಾಡಿ ಗೆಲ್ಲಿಸಿದ್ದೀರಿ. ಅದಕ್ಕೆ ಎಲ್ಲರಿಗೂ ಧನ್ಯವಾದಗಳು. ಟ್ರೋಫಿಯೇನೋ ಗೆದ್ದಿದ್ದೇನೆ ಆದರೆ ಇನ್ನೂ 50 ಲಕ್ಷ ಹಣ ಬಂದಿಲ್ಲ. ಬಂದ ಮೇಲೆ ಈ ಕುರಿತು ಹೇಳುತ್ತೇನೆ. ಇಂತಹ ಅಮೋಘ ಕಾರ್ಯಕ್ರಮದಿಂದ ಬಹಳ ಖುಷಿ ಆಗಿದೆ. ನಿಮ್ಮೆಲ್ಲರ ಪೋತ್ಸಾಹ ಎಂದಿಗೂ ಹೀಗೆ ಇರಲಿ ಎಂದು ಹೇಳಿದ್ದಾರೆ. ಇನ್ನು ಇದು ಬಿಗ್ ಬಾಸ್ ಶೋ ನಂತರದ ಹನುಮಂತು ಅವರ ಮೊದಲ ಕಾರ್ಯಕ್ರಮ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ