/newsfirstlive-kannada/media/post_attachments/wp-content/uploads/2025/06/eshani1.jpg)
ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಇಶಾನಿ ಮತ್ತೆ ಟ್ರೆಂಡಿಂಗ್ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡಿದ್ದ ನಟಿ ಹೊಸ ಆಲ್ಬಂ ಸಾಂಗ್ ಮೂಲಕ ಕಿಚ್ಚು ಹಚ್ಚಿದ್ದಾರೆ.
ಇದನ್ನೂ ಓದಿ:ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಬರ್ಬರ ಹತ್ಯೆ.. ಆರೋಪಿಯ ಮನೆಗೆ ಬೆಂಕಿ ಇಟ್ಟು ಆಕ್ರೋಶ..
ಇಶಾನಿ ಹುಟ್ಟೂರು ಮೈಸೂರು. ಆದ್ರೆ ಬೆಳೆದಿದ್ದೆಲ್ಲಾ ದುಬೈನಲ್ಲಿ. ಕೆಲವು ತಿಂಗಳಿನಿಂದ ಇಶಾನಿ ಸುದ್ದಿನೇ ಇರಲಿಲ್ಲ. ಏನ್ ಮಾಡ್ತಿದ್ದಾರೆ ಅಂತ ತಡಕಾಡಿದಾಗ ಕಣ್ಣಿಗೆ ಬಿದ್ದಿದ್ದು ಹೊಸ ಆಲ್ಬಂ ಸಾಂಗ್.
ರ್ಯಾಪರ್ ಆಗಿರೋ ಇಶಾನಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ 16ಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಸ್ವತಃ ಅವ್ರೇ ಲಿರಿಕ್ಸ್ ಕೂಡ ಬರೀತಾರೆ. ಈ ಪ್ರತಿಭೆನೇ ಅವರನ್ನು ಬಿಗ್ಬಾಸ್ ವೇದಿಕೆಗೆ ತಂದು ನಿಲ್ಲಿಸಿತ್ತು. ಈಗ ಸ್ವೇ ಎಂಬ ಹೊಸ ಸಾಂಗ್ ರಿಲೀಸ್ ಮಾಡಿದ್ದಾರೆ.
ವಿಶೇಷ ಏನೆಂದರೆ ಇಶಾನಿ ಜೊತೆಗೆ ಅಭಿನಿಸಿರೋದು ಗಟ್ಟಿಮೇಳ ಹಾಗೂ ನಂದಗೋಕುಲ ಖ್ಯಾತಿಯ ನಟ ಅಭಿದಾಸ್. ದೇಹವನ್ನ ಹುರಿಗೋಳಿಸಿರೋ ಅಭಿದಾಸ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇಶಾನಿ-ಅಭಿ ಜೋಡಿ ಫಯರ್ ಕ್ರಿಯೇಟ್ ಮಾಡ್ತಿದೆ. ಇಂಗ್ಲಿಷ್ ಭಾಷೆಯಲ್ಲಿರೋ ಹಾಡಿಗೆ ತಾರೆಯರು ಸೇರಿದಂತೆ ಇಶಾನಿ ಅಭಿದಾಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ