/newsfirstlive-kannada/media/post_attachments/wp-content/uploads/2025/01/MOKSHI-1.jpg)
ಬಿಗ್​ಬಾಸ್ ಮುಗಿದ ಬಳಿಕ ​ಮೋಕ್ಷಿತಾ ಪೈ ಈಗ ಏನು ಮಾಡ್ತಿದ್ದಾರೆ ಎಂಬ ಅಪ್​​ಡೇಟ್ಸ್​ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ ಐದು ಫೋಟೋಗಳನ್ನು ಹಂಚಿಕೊಂಡು ನಂಬಿಕೆ ಮತ್ತು ಪ್ರೀತಿಯ ಕತೆಯನ್ನು ಹೇಳಿದ್ದಾರೆ.
ಸೀರೆಯುಟ್ಟು ಅಪ್ಸರೆಯಂತೆ ಕಾಣುತ್ತಿರುವ ಮೋಕ್ಷಿ ಪೋಸ್​​ಗೆ ಯುವಕರು ಫಿದಾ ಆಗಿದ್ದಾರೆ. ಅಭಿಮಾನಿಗಳು ಮನಸಾರೆ ಅಂದ, ಚಂದವನ್ನು ಹೊಗಳಿ ಸಂಭ್ರಮಿಸಿದ್ದಾರೆ. ಇನ್ನು ಮೋಕ್ಷಿತಾ ತಮ್ಮ ಪೋಸ್ಟ್​ನಲ್ಲಿ ಪ್ರೀತಿ ಮತ್ತು ನಂಬಿಕೆ ಬಗ್ಗೆ ಕನ್ನಡದಲ್ಲೇ ಬರೆದುಕೊಂಡಿದ್ದಾರೆ. ಪ್ರೀತಿ ಇದ್ದಲ್ಲಿ ನಂಬಿಕೆ ಇರಲೇ ಬೇಕೆಂದಿಲ್ಲ ಆದರೆ ನಂಬಿಕೆ ಇದ್ದಲ್ಲಿ ಪ್ರೀತಿ ಇದ್ದೇ ಇರುವುದು. ನಿಮ್ಮ ಪ್ರೀತಿಯ ಪಾರು ಅಂತಾ ಕ್ಯಾಪ್ಷನ್ ನೀಡಿದ್ದಾರೆ.
ಇದನ್ನೂ ಓದಿ: BBK11: ಉಗ್ರಂ ಮಂಜು ಸೋಲಿಗೆ ಗೌತಮಿ, ಮೋಕ್ಷಿತಾನೇ ಕಾರಣನಾ? ಶಾಕಿಂಗ್​ ಸಂಗತಿ ಬಿಚ್ಚಿಟ್ಟ ತಂದೆ
/newsfirstlive-kannada/media/post_attachments/wp-content/uploads/2025/01/MOKSITHA.jpg)
ಫೋಟೋ ನೋಡಿದ ಅಭಿಮಾನಿಗಳು ಮತ್ತು ಆಕೆಯ ಫಾಲೋವರ್ಸ್​ ಬಗೆಬಗೆಯಾಗಿ ಕಾಮೆಂಟ್ಸ್​ ಹಾಕುತ್ತಿದ್ದಾರೆ. ಪಾರು ಸೀರಿಯಲ್ ಮೂಲಕ ಖ್ಯಾತಿ ಪಡೆದಿದ್ದ ಮೋಕ್ಷಿತಾ ಬಿಗ್​ಬಾಸ್ ಸೀಸನ್​11ಕ್ಕೆ ಎಂಟ್ರಿಯಾಗಿದ್ದರು. ಬರೋಬ್ಬರಿ 120 ದಿನಗಳವರೆಗೆ ಬಿಗ್​ಬಾಸ್​ ಮನೆಯಲ್ಲಿದ್ದ ಮೋಕ್ಷಿ, ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. ರನ್ನರ್ ಅಪ್​ನಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಮಿಂಚಿದರು. ಬಿಗ್​ಬಾಸ್ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.
ಇದನ್ನೂ ಓದಿ: ಲವ್ ಬ್ರೇಕ್ ಅಪ್ ಆಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿ ಪಕ್ಕಾ ಉದ್ಯೋಗ.. ಲಿಂಕ್ ಇಲ್ಲಿದೆ!
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us