/newsfirstlive-kannada/media/post_attachments/wp-content/uploads/2024/12/BBK8_UPENDRA.jpg)
ಅಕ್ಕಿನೇನಿ ನಾಗರ್ಜುನ್ ಅವರು ನಡೆಸಿಕೊಡುವಂತಹ ತೆಲುಗು ಬಿಗ್ಬಾಸ್ ಸೀಸನ್-8 ಕೊನೆ ಹಂತಕ್ಕೆ ತಲುಪಿದೆ. ಇಂದು ಸಂಜೆ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ವಿಜೇತ ಸ್ಪರ್ಧಿ ಯಾರೆಂದು ಘೋಷಣೆ ಮಾಡಲಿದ್ದಾರೆ. ಸತತ 14 ವಾರಗಳನ್ನು ಆಡಿರುವಂತ ಟಾಪ್- 5ರಲ್ಲಿ ನಿಖಿಲ್, ಗೌತಮ್, ಪ್ರೇರಣಾ, ಅವಿನಾಶ್, ನಬಿಲ್ ಇದ್ದಾರೆ. ಇದರಲ್ಲಿ ಒಬ್ಬರು ವಿಜೇತರು ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕಾಗಿ ತೆಲುಗು ಪ್ರೇಕ್ಷರೆಲ್ಲಾ ಕುತೂಹಲದಿಂದ ಕಾಯುತ್ತಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 8ರ ಗ್ರಾಂಡ್ ಫಿನಾಲೆ ಇಂದು ಅದ್ಧೂರಿಯಾಗಿ ನಡೆಯಲಿದ್ದು ಚೀಫ್ ಗೆಸ್ಟ್ ಯಾರು ಬರಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಎರಡು ಹೆಸರು ಕೇಳಿ ಬಂದಿದ್ದು, ಪುಷ್ಪ2 ಸಿನಿಮಾದ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚೀಫ್ ಗೆಸ್ಟ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಅಲ್ಲು ಅರ್ಜುನ್ ಅಲ್ಲವೇ ಅಲ್ಲ, ರಾಮ್ಚರಣ್ ಗ್ರಾಂಡ್ ಫಿನಾಲೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಆದರೆ ಯಾರು ಫಿನಾಲೆಗೆ ಬರುತ್ತಾರೆ ಎನ್ನುವುದು ಚಾನೆಲ್ ಎಲ್ಲಿಯೂ ರಿವೀಲ್ ಮಾಡಿಲ್ಲ.
ಇನ್ನು ಗ್ರಾಂಡ್ ಫಿನಾಲೆಯಲ್ಲಿ ಗೆಲ್ಲುವ ಸ್ಪರ್ಧಿಗೆ ಎಷ್ಟು ದುಡ್ಡು ಕೊಡಬಹುದೆಂದು ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಗೆದ್ದ ಸ್ಪರ್ಧಿಗೆ ಎಷ್ಟು ಹಣ ಕೊಡುತ್ತಾರೆ ಎನ್ನುವುದೇ ಎಲ್ಲರಿಗೂ ಕುತೂಹಲವಿದೆ. ತೆಲುಗು ಬಿಗ್ಬಾಸ್ ಸೀಸನ್-8 ಅನ್ನು ಗೆಲ್ಲುವ ಸ್ಪರ್ಧಿಗೆ ಒಟ್ಟು 54,99,999 ರೂಪಾಯಿಗಳನ್ನು ನೀಡಲಾಗುತ್ತದೆ. ಆದರೆ ನಾಗರ್ಜುನ್ ಅವರು 55 ಲಕ್ಷ ರೂಪಾಯಿಗಳೆಂದು ಘೋಷಣೆ ಮಾಡಿದ್ದಾರೆ.
ಬಿಗ್ಬಾಸ್ ಸೀಸನ್ನಲ್ಲಿ ಗೆಲ್ಲುವ ಸ್ಪರ್ಧಿಗೆ 55 ಲಕ್ಷ ರೂಪಾಯಿಗಳು ಜೊತೆಗೆ ಟೈಟಲ್ ಅನ್ನು ನೀಡಲಾಗುತ್ತದೆ. ಇನ್ನು ಉಪೇಂದ್ರ ಅವರು ಅತಿಥಿಗಳಾಗಿ ತೆಲುಗು ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಲ ಬಿಗ್ಬಾಸ್ 100 ದಿನಗಳಿಗೂ ಅಧಿಕ ಮನರಂಜನೆ ನೀಡಿದೆ. ಬಿಗ್ ಬಾಸ್ ಭಾನುವಾರ ಡಿಸೆಂಬರ್ 15 ರಂದು ಸಂಜೆ 7 ರಿಂದ ಲೈವ್ ಸ್ಟ್ರೀಮ್ಗೆ ಸಿದ್ಧವಾಗಿದೆ. ವಿಶೇಷ ಅತಿಥಿಗಳಲ್ಲಿ ಉಪೇಂದ್ರ, ಪ್ರಜ್ಞಾ ಜೈಸ್ವಾಲ್, ನಭಾ ನಟೇಶ್ ಮತ್ತು ಲಕ್ಷ್ಮಿ ರೈ ಇರಲಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್ ಮಾಡಿದ್ದು ಉಪ್ಪಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರೋಮೋದಲ್ಲಿ ಉಪೇಂದ್ರ ಅವರ ಡೈಲಾಗ್ ಈ ಪ್ರೀತಿ ಗೀತಿ ಎಲ್ಲ ಪುಸ್ತಕದ ಬದನೆಕಾಯಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ